26ರಂದು ಸ್ನೇಹ,ಪ್ರೀತಿ ಗೋರಿ ಸಿನಿಮಾ ಬಿಡುಗಡೆ
ಲೋಕದರ್ಶನ ವರದಿ
ಹೂವಿನಹಡಗಲಿ : ಸ್ನೇಹ,ಪ್ರೀತಿ ಆಧಾರಿತ ಗೋರಿ ಸಿನಿಮಾ ನ.26ರಂದು ರಾಜ್ಯದ 50 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಸಿನಿಮಾ ನಿರ್ದೇಶಕ ಹಾಗೂ ನಿರ್ಮಾಪಕ ಗೋಪಾಲಕೃಷ್ಣ ತಿಳಿಸಿದರು.
ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಉತ್ತರ ಕರ್ನಾಟಕ ಪ್ರತಿಭೆಗಳು ನಿರ್ಮಿಸಿರುವ ಗೋರಿ ಸಿನಿಮಾ ಸ್ನೇಹ,ಪ್ರೀತಿ ಹಾಗೂ ಮಾನವೀಯತೆಯ ಸಿನಿಮಾ ಮಾಡಲಾಗಿದ್ದು, ಈಗಾಗಲೇ ಉತ್ತರ ಕರ್ನಾಟಕ ಭಾಗದ ಮೈಲಾರ ಸೇತುವೆ,ಕಾಗಿನೆಲೆ ಪ್ರಾಧಿಕಾರೆ. ಹಾವೇರಿ,ಸವಣೂರು ನವಾಬನ ಕೋಟೆ ಪ್ರೇಕ್ಷಣೀಯ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ ಎಂದು ಹೇಳಿದರು.
ನಿವೃತ್ತ ಶಿಕ್ಷಕ ಎಚ್.ಡಿ.ಜಗ್ಗಿನ್ ಮಾತನಾಡಿ ಸಿನಿಮಾದಲ್ಲಿ ನನ್ನ ಪುತ್ರ ಮಾಲತೇಶ ಜಗ್ಗಿನ್ ಹಾಡು ಬರೆದಿದ್ದಾರೆ. ವರ್ತಕ ಹೊಳಲು ಪೂಜಾರ್ ಸೇರಿದಂತೆ ಸಾಕಷ್ಟು ಜನರು ಚಿತ್ರಕ್ಕೆ ಬೆಂಬಲಿಸುವ ಮೂಲಕ ಪ್ರೋತ್ಸಾಹಿಸಿದ್ದಾರೆ ಎಂದರು.ಪ್ರದೇಶ ಕುರುಬರ ಸಂಘದ ನಿರ್ದೇಶಕ ಬಿ.ಹನುಮಂತಪ್ಪ, ನಾಯಕ ನಟ ಕಿರಣ್, ಏಕಲವ್ಯ ಮಾತನಾಡಿದರು. ಸಹ ನಿರ್ದೇಶಕ ರಿಶ್ವಂತ್, ಸೋಮಣ್ಣ ಜಗ್ಗಿನ್, ಬಾಲನಟ ರೇವಂತ್ ಇದ್ದರು.