ಸನ್ಮತಿ ವಿದ್ಯಾಲಯದ ಸಹಶಿಕ್ಷಕ ಎ.ಕೆ. ಪಾಟೀಲಗೆ ಶಿಕ್ಷಕರತ್ನ ಪ್ರಶಸ್ತಿ
ಲೋಕದರ್ಶನ ವರದಿ
ಕಾಗವಾಡ 22: ತಾಲೂಕಿನ ಶೇಡಬಾಳ ಪಟ್ಟಣದ ಸನ್ಮತಿ ವಿದ್ಯಾಲಯದ ಸಹ-ಶಿಕ್ಷಕ ಎ.ಕೆ. ಪಾಟೀಲ ಅವರಿಗೆ ರಾಜ್ಯ ಮಟ್ಟದ ಶಿಕ್ಷಕರತ್ನ ಪ್ರಶಸ್ತಿ ಲಭಿಸಿದೆ. ಸಿರಿಗನ್ನಡ ಫೌಂಡೇಶನ್ ಕರ್ನಾಟಕ ಇವರು ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಕೊಡಮಾಡುವ ಶಿಕ್ಷಕರತ್ನ ಪ್ರಶಸ್ತಿಯು ಕನ್ನಡ ವಿಷಯದ ಸಹಶಿಕ್ಷಕ ಎ.ಕೆ. ಪಾಟೀಲ ಅವರ ಕನ್ನಡ ನಾಡಿನ ವಿಶಿಷ್ಟ ಪ್ರತಿಭೆ, ಪರಿಶ್ರಮ ಮತ್ತು ಬದ್ಧತೆಗೆ ಈ ಪ್ರಶಸ್ತಿ ಸಂದಿದೆ. ಧಾರವಾಡದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ರವಿವಾರ ದಿ. 20 ರಂದು ನಡೆದ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ನೀಡಿ, ಸನ್ಮಾನಿಸಲಾಗಿದೆ. ಅವರ ಈ ಸಾಧನೆಗೆ ಸನ್ಮತಿ ಶಿಕ್ಷಣ ಸಹಕಾರ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕರು ಅಭಿನಂದಿಸಿದ್ದಾರೆ.