ಮತದಾರರ ಗಮನ ಸೆಳೆಯುವ ' ಸಖಿ ಬೂತ್ '
ಮಹಾಲಿಂಗಪುರ : ಕರ್ನಾಟಕ ರಾಜ್ಯದ 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಅಂಗವಾಗಿ ಮಹಿಳಾ ಮತದಾರರನ್ನು ಸೆಳೆಯುವ ವಿನೂತನ 191 ನೇ ಕ್ರಮ ಸಂಖ್ಯೆಯ ಸಖಿ ಬೂತ್ ಸ್ಥಳೀಯ 13,14,15 ವಾರ್ಡ್ ಗಳ ಕೆಂಗೇರಿ ಮಡ್ಡಿ ಮತದಾರರ ಗಮನ ಸೆಳೆಯುತ್ತಿದೆ.
ಸುಮಾರು 1700 ಮಹಿಳಾ ಮತದಾರರನ್ನು ಹೊಂದಿರುವ ಈ ಬೂತ್ ಆವರಣಕ್ಕೆ ಗುಲಾಬಿ ಮತ್ತು ಶ್ವೇತ ಬಣ್ಣದ ಶಾಮಿಯಾನ, ಸ್ವಾಗತ ದ್ವಾರಕ್ಕೆ ಅದೇ ಬಣ್ಣದ ಬಲೂನ್ ಗಳ ಶೃಂಗಾರ ಅತಿ ಹೆಚ್ಚಿನ ಮೆರಗು ನೀಡುತ್ತಿವೆ. ದ್ವಾರದ ಇಕ್ಕೆಲಗಳಲ್ಲಿ ಮಹಿಳೆಯರು ತಮ್ಮ ಮತ ಚಲಾಯಿಸಿ ಹೊರಗೆ ಬರುವಾಗ ತೋರು ಬೆರಳನ್ನು ಸಾರ್ವಜನಿಕವಾಗಿ ತೋರಿಸುತ್ತಿರುವ ಸಚಿತ್ರ ಸಹ ಆಗಮಿಸುವ ಮತದಾನಕ್ಕೆ ಆಗಮಿಸುವ ಮಹಿಳೆಯರ ಮೇಲೆ ಪರಿಣಾಮ ಬೀರುವಲ್ಲಿ ಎರಡು ಮಾತಿಲ್ಲ.
ಎಡಕ್ಕೆ ನಮ್ಮ ನಡೆ ಮತಗಟ್ಟೆ ಕಡೆ, ಬಲಕ್ಕೆ ನಮ್ಮ ಮತ ನಮ್ಮ ಹಕ್ಕು ಸಂವಿಧಾನ ಬದ್ಧ ಘೋಷಣೆಗಳು ಮಹಿಳಾ ಮತದಾರರಿಗೆ ಪ್ರಜಾಪ್ರಭುತ್ವದ ಮಹತ್ವ ಸಾರಲಿವೆ. ಮಹಿಳೆಯರು ಸರಾಗವಾಗಿ ಮತ ಚಲಾಯಿಸಿ ತಮ್ಮ ಮನೆ ಕೆಲಸಗಳಲ್ಲಿ ತೊಡಗಲು ಈ ಸಖಿ ಬೂತ್ ಸಹಕಾರಿಯಾಗಲಿದೆ.ಇಲ್ಲಿ ಅಂದ, ಅಂಗವಿಕಲಚೇತನ, ದುರ್ಬಲ, ಅನಾರೋಗ್ಯ ಪೀಡಿತರಿಗೆ ಯಾರ್ಂಪ್, ವ್ಹೀಲ್ ಚೇರ್ ವ್ಯವಸ್ಥೆ ಕೂಡ ಇವೆ. ಒಟ್ಟಿನಲ್ಲಿ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಲು ಇದೊಂದು ಜಾಗೃತಿ ಮಂತ್ರವಾಗಿದೆ.
ಮೇ10 ಬುಧವಾರ ಮುಂಜಾನೆ ಮತ ಯಂತ್ರ ಕೊಠಡಿಯಲ್ಲಿ ಗುಲಾಬಿ ಬಣ್ಣದ ಸಮವಸ್ತ್ರಗಳನ್ನು ತೊಟ್ಟ ಮಹಿಳಾ ಸಿಬ್ಬಂದಿಗಳೇ ಕಾರ್ಯ ನೆರವೇರಿಸಲಿದ್ದಾರೆ. ಮುಂಜಾನೆ 7ರಿಂದ ಸಂಜೆ 6ಗಂಟೆಗೆ ಮುಕ್ತಾಯಗೊಳ್ಳಲಿರುವ ಮತದಾನ ಒಂದು ರೀತಿಯ ಮಹಿಳಾ ಮತದಾರರಿಗೆ ಹಬ್ಬದ ವಾತಾವರಣವೇ ನಿರ್ಮಾಣವಾಗಲಿದೆ.
ಯಾವುದೇ ಕಾನೂನುಬಾಹಿರ ಕೃತ್ಯಗಳು ನಡೆದಂತೆ ಮಹಿಳಾ ಪೊಲೀಸ್ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಗಳು ಹಾಗೂ ಅಗತ್ಯ ಕಡೆಗಳಲ್ಲಿ ಮೂರನೇ ಕಣ್ಣುಗಳನ್ನು ಕೂಡ ಅಳವಡಿಸಲಾಗಿದೆ.
ಈ ಸಖೀ ಬೂತಿನ ವ್ಯವಸ್ಥೆ ನೆರವೇರಿಸಿದ ಇಓ ಉಮೇಶ್ ಸಿದ್ನಾಳ, ನೋಡಲ್ ಅಧಿಕಾರಿ ಜಗದೀಶ್ ಈಟಿ ಮತ್ತು ಪೋಲಿಂಗ್ ಅಧಿಕಾರಿಗಳು, ಪೋಲಿಸ್ ಸಿಬ್ಬಂದಿ ಉಪಸ್ಥಿತರಿದ್ದರು.