ಹಗರಿಬೊಮ್ಮನಹಳ್ಳಿ

‘ವಿಶ್ವವೇ ಭಾರತದತ್ತ ನೋಡುವಂತೆ ಮಾಡಿದ್ದು ನರೇಂದ್ರ ಮೋದಿ’

‘ವಿಶ್ವವೇ ಭಾರತದತ್ತ ನೋಡುವಂತೆ ಮಾಡಿದ್ದು ನರೇಂದ್ರ ಮೋದಿ’

ಹಗರಿಬೊಮ್ಮನಹಳ್ಳಿ 14: ಪ್ರತಿಯೊಬ್ಬ ನಾಗರೀಕನಿಗೂ ದೇಶಾಭಿಮಾನ ಹುಟ್ಟುವಂತೆ ಮಾಡಿ ಇಡೀ ವಿಶ್ವವೇ ಭಾರತದತ್ತ ನೋಡುವಂತೆ ಮಾಡಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಂದು ಮಾಜಿ ಶಾಸಕ ನೇಮರಾಜ್ ನಾಯ್ಕ್‌ ಹೇಳಿದರು. 

ಪಟ್ಟಣದ ಮಿನಿ ವಿಧಾನ ಸೌಧದಿಂದ ಆಜಾದಿಕಾ ಅಮೃತ ಮಹೋತ್ಸವದ ಪ್ರಯುಕ್ತ ಬೈಕ್ ರಾ​‍್ಯಲಿಗೆ ಚಾಲನೆ ನೀಡಿ ಹಗರಿ ಆಂಜನೇಯ ದೇವಸ್ಥಾನದ ಬಳಿ ಅವರು ಮಾತನಾಡಿ, ಇಂದು ವಿಶ್ವದಲ್ಲಿ ತನ್ನದೇ ಆದ ಛಾಪನ್ನು ಮೂಡಿಸುವಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಮುಖ ಪಾತ್ರ ವಹಿಸಿದ್ದಾರೆ, ಇಂದು ದೇಶದ ಪ್ರತಿ ಪ್ರಜೆಯ ಮನಸ್ಸಿನಲ್ಲಿ ದೇಶದ ಗೌರವನ್ನು ಹೆಚ್ಚಿಸಿದ್ದಾರೆ, ದೇಶಗಳ ನಡುವೆ ಎನಾದರೂ ಯುಧ್ಧಗಳು ನಡೆಯುತ್ತಿದ್ದರೇ ಅದನ್ನು ಶಾಂತಿಯ ದಾರಿ ತೋರಿಸುವಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿದೇ, ಇದಕ್ಕೆ ಕಾರಣ ನರೇಂದ್ರ ಮೋದಿ, ದೇಶದ ಈ 75ನೇ ಅಜಾದಿಕಾ ಅಮೃತ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವಂತೆ ಕರೆ ನೀಡಿದರು. 

ಈ ಸಂಧರ್ಭಧಲ್ಲಿ ಮಲ್ಲಿಕಾರ್ಜುನ ನಾಯ್ಕ್‌, ಬದ್ರವಾಡಿ ಚಂದ್ರಶೇಖರ್, ಪೋಲೀಸ್ ರಮಾನಾಯ್ಕ್‌, ಮರಿಯಮ್ಮನಹಳ್ಳಿ ಕೃಷ್ಣನಾಯ್ಕ್‌, ಮಂಡಲ ಅಧ್ಯಕ್ಷ ವೀರೇಶ್ವರ ಸ್ವಾಮಿ, ಬ್ಯಾಟಿ ನಾಗರಾಜ, ಪುರಸಭೆ ಸದಸ್ಯರಾದ ಗಂಗಣ್ಣ, ಜನ್ನು ನಾಗರಾಜ, ದಿಪಕ್ ಕಠಾರೆ, ಈರಣ್ಣ, ನವೀನ್, ಜೋಗಿ ಹನುಮಂತ, ಬಣಕಾರ ಸುರೇಶ್, ಸೇರಿದಂತೆ ಮುಖಂಡರಾದ ಬಾದಾಮಿ ಮೃತ್ಯಂಜಯ,ಕೆ.ಎಂ ತಿಪ್ಪೇಸ್ವಾಮಿ, ಅಂಬಳಿ ರಂವೀಂದ್ರ ಗೌಡ, ಸಂದೀಪ, ಇನ್ನಿತರರು ಇದ್ದರು. 


ಸುದ್ದಿ ಓದಿ