‘ಮಾರುತ’ ಇಂದು ರಾಜ್ಯಾದ್ಯಂತ ಸಿನಿಮಾ ತೆರೆಗೆ
ಪೊಲೀಸ್ ಅಧಿಕಾರಿಗಳು, ಮಹಿಳಾ ಆಯೋಗದ ಅಧ್ಯಕ್ಷರು ಮೆಚ್ಚಿದ ’ಮಾರುತ’ಇಂದು ರಾಜ್ಯಾದ್ಯಂತ ಸಿನಿಮಾ ತೆರೆಗೆಹೆಸರಾಂತ ನಿರ್ದೇಶಕ ಡಾಽಽಎಸ್ ನಾರಾಯಣ್ ನಿರ್ದೇಶನದ, ದುನಿಯಾ ವಿಜಯ್ ಹಾಗೂ ಶ್ರೇಯಸ್ ಮಂಜು ಪ್ರಮುಖ ಪಾತ್ರದಲ್ಲಿ ನಟಿಸಿರುವ ಮತ್ತು ಕೆ.ಮಂಜು - ರಮೇಶ್ ಯಾದವ್ ಈಶಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿಸಿರುವ ಬಹು ನೀರೀಕ್ಷಿತ ಚಿತ್ರ ’ಮಾರುತ’ ಚಿತ್ರ ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿದೆ.
ಇಂದು (ನ. 21) ಬಹು ನೀರೀಕ್ಷಿತ ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರ ಬಿಡುಗಡೆಗೂ ಪೂರ್ವದಲ್ಲಿ ಪೊಲೀಸ್ ಇಲಾಖೆ, ಮಹಿಳಾ ಆಯೋಗದ ಅಧ್ಯಕ್ಷರು ಹಾಗೂ ಕೆಲವೊಂದಿಷ್ಟು ವ್ಯಕ್ತಿಗಳು ಸಿನಿಮಾ ನೋಡಿದ್ದು, ಪ್ರಶಂಸೆ ವ್ಯಕ್ತಿ ಪಡಿಸಿದ್ದಾರೆ. ಈ ವಿಶೇಷ ಪ್ರದರ್ಶನದಲ್ಲಿ ಮಂಜುನಾಥ ಬಾಬು ಉಪ ಪೊಲೀಸ್ ಆಯುಕ್ತರು, ಭದ್ರತೆ ಬೆಂಗಳೂರು ನಗರ, ನಾರಾಯಣ ಸ್ವಾಮಿ ಮಹಿಳಾ ಆಯೋಗದ ಅಧ್ಯಕ್ಷೆ ಡಾಕ್ಟರ್ ನಾಗಲಕ್ಷ್ಮೀ ಚೌಧರಿ ಹಾಗೂ ಅನೇಕ ಪೊಲೀಸ್ ಸಿಬ್ಬಂದಿಗಳು ಈ ಚಿತ್ರವನ್ನು ವೀಕ್ಷಿಸಿದ್ದಾರೆ.ಚಿತ್ರ ವೀಕ್ಷಣೆ ನಂತರ ಮಾತನಾಡಿದ ಪೊಲೀಸ್ ಅಧಿಕಾರಿ ಮಂಜುನಾಥ್ ಬಾಬು ಅವರು, ’ಮೊದಲು ಸಮಾಜಕ್ಕೆ ಇಂತಹ ಉತ್ತಮ ಚಿತ್ರವನ್ನು ನಿರ್ಮಾಣ ಮಾಡಿಕೊಟ್ಟ ನಿರ್ಮಾಪಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಿರ್ದೇಶಕ ಎಸ್ ನಾರಾಯಣ್ ಅವರು ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ವಿಷಯವನ್ನಿಟ್ಟುಕೊಂಡು ಅದ್ಭುತವಾದ ಸಿನಿಮಾ ಮಾಡಿದ್ದಾರೆ.
ಚಿತ್ರದಲ್ಲಿ ನಟಿಸಿರುವ ಎಲ್ಲಾ ಕಲಾವಿದರು ಚೆನ್ನಾಗಿ ಅಭಿನಯಿಸಿದ್ದಾರೆ. ದುನಿಯಾ ವಿಜಯ್ ಅವರದಂತೂ ಅದ್ಭುತ ಅಭಿನಯ. ಸಮಾಜಿಕ ಜಾಲತಾಣಗಳಿಂದ ಎಷ್ಟು ಅನುಕೂಲ ಇದೆಯೊ, ಅಷ್ಟೇ ತೊಂದರೆ ಕೂಡ ಇದೆ. ಅನ್ನುವುದನ್ನು ಸಿನಿಮಾದಲ್ಲಿ ತೋರಿಸಿದ್ದಾರೆ. ಇದು ಹಿರಿಯರು, ಕಿರಿಯರು ಎಂಬ ಭೇದಭಾವವಿಲ್ಲದೆ ಎಲ್ಲಾ ವಯಸ್ಸಿನವರು ಅವಶ್ಯವಾಗಿ ನೋಡುವ ಸಿನಿಮಾ. ಅದರಲ್ಲೂ ಹೆಣ್ಣುಮಕ್ಕಳಿಗೆ ಎಚ್ಚರಿಕೆಯ ಗಂಟೆ. ಈಗಿನ ಯುವಪೀಳಿಗೆ ಈ ಚಿತ್ರ ನೋಡಿ ತಿಳಿದುಕೊಳ್ಳುವುದು ಬಹಳಷ್ಟಿದೆ. ಎಲ್ಲರೂ ತಪ್ಪದೆ ಕುಟುಂಬ ಸಮೇತ ಈ ಚಿತ್ರ ನೋಡಿ’ ಎಂದರು.’ಮಾರುತ ಚಿತ್ರವನ್ನು ಪ್ರತಿಯೊಬ್ಬರು ನೋಡಲೇಬೇಕು. ಅದರಲ್ಲೂ ಮಹಿಳೆಯರಂತೂ ತಪ್ಪದೇ ನೋಡಬೇಕು. ಅಂತಹುದೊಂದು ಉತ್ತಮ ಸಂದೇಶವಿರುವ ಚಿತ್ರವನ್ನು ನಿರ್ದೇಶಕರು ಸಮಾಜಕ್ಕೆ ನೀಡಿದ್ದಾರೆ. ಚಿತ್ರದಲ್ಲಿ ಬರೀ ಸಮಸ್ಯೆ ಮಾತ್ರ ತೋರಿಸದೆ, ಅದಕ್ಕೆ ಪರಿಹಾರವನ್ನು ಹೇಳಿದ್ದಾರೆ. ಅದು ಬಹಳ ಖುಷಿಯಾಗಿದೆ. ಸಮಾಜಕ್ಕೆ ಒಂದೊಳ್ಳೆ ಚಿತ್ರ ನೀಡಿರುವ ನಿರ್ಮಾಪಕರಿಗೆ ವಿಶೇಷ ಅಭಿನಂದನೆ. ಚಿತ್ರದಲ್ಲಿ ಎಲ್ಲರೂ ಚೆನ್ನಾಗಿ ನಟಿಸಿದ್ದಾರೆ. ಅದರಲ್ಲೂ ದುನಿಯಾ ವಿಜಯ್ ಅವರ ನಟನೆ ತುಂಬಾ ಚೆನ್ನಾಗಿದೆ. ಎಲ್ಲರೂ ಕುಟುಂಬ ಸಮೇತ ಈ ಚಿತ್ರವನ್ನು ಚಿತ್ರಮಂದಿರದಲ್ಲೇ ನೋಡುವ ಮೂಲಕ ಸದಭಿರುಚಿ ಚಿತ್ರಕ್ಕೆ ಪ್ರೋತ್ಸಾಹ ನೀಡಿ’ ಎಂದು ಮಹಿಳಾ ಆಯೋಗದ ಅಧ್ಯಕ್ಷರಾದ ಡಾಽಽನಾಗಲಕ್ಷ್ಮೀ ಚೌಧರಿ ತಿಳಿಸಿದರು.