ರಾಯಬಾಗ ತಾಲೂಕಿನಲ್ಲಿ ‘ಖೇತ್ ಬಚಾವೋ’ ಅಭಿಯಾನ
ರಾಯಬಾಗ 25: ತಾಲೂಕಿನಲ್ಲಿ ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ ತುಕ್ಕಾನಟ್ಟಿ ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ (ಆತ್ಮಾ) ಯೋಜನೆಯಡಿ ಖೇತ್ ಬಚಾವೋ ಅಭಿಯಾನ ತಾಲೂಕಿನ ಕುಡಚಿ ಮತ್ತು ರಾಯಬಾಗ ಹೋಬಳಿಗಳ ವಿವಿಧ ಗ್ರಾಮಗಳಲ್ಲಿ ಇತ್ತೀಚೆಗೆ ಜರುಗಿತು. ಕುಡಚಿ ಹೋಬಳಿಯ ಹಿಡಕಲ್ ಹಾಗೂ ಪಾಲಬಾವಿ ಮತ್ತು ರಾಯಬಾಗ ಹೋಬಳಿಯ ಬಾವನ ಸೌಂದತ್ತಿ ಹಾಗೂ ನಂದಿಕುರಳಿ ಗ್ರಾಮಗಳಲ್ಲಿ ಖೇತ್ ಬಚಾವೋ ಅಭಿಯಾನವನ್ನು ಆಯೋಜಿಸಲಾಗಿತ್ತು. ತುಕ್ಕಾನಟ್ಟಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಎಸ್. ಎಸ್. ಶರ್ಮ ಹಾಗೂ ಎನ್. ಆರ್. ಸಾಲಿಮಠ ಅವರು ರೈತರಿಗೆ ಮಣ್ಣಿನ ಆರೋಗ್ಯ, ಮಣ್ಣಿನ ಫಲವತ್ತತೆ, ನೀರಿನ ಸಮರ್ಕ ಬಳಕೆ ಹಾಗೂ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯುವ ತಂತ್ರಜ್ಞಾನಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ಕೃಷಿಯಲ್ಲಿ ಎದುರಾಗುತ್ತಿರುವ ವಿವಿಧ ಸಮಸ್ಯೆಗಳ ಕುರಿತು ರೈತರು ಚರ್ಚಿಸಿ ತಜ್ಞರಿಂದ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ಪಡೆದರು.ರಾಯಬಾಗ ಸಹಾಯಕ ಕೃಷಿ ನಿರ್ದೇಶಕ ವಿನೋದ ಮಾವರಕರ, ಕೃಷಿ ಅಧಿಕಾರಿ ರಘುನಾಥ ಪಾಟೀಲ, ಬಿ. ಎಸ್. ಶಾನವಾಡ, ಆತ್ಮಾ ಸಿಬ್ಬಂದಿ ಎಸ್. ಕೆ. ಕುಂಬಾರ, ಗುರುಸಿದ್ದ ಮುದ್ದಾಪುರ ಹಾಗೂ ಕೃಷಿ ಸಂಜೀವಿನಿ ತಂಡದವರು ಮತ್ತು ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಫೋಟೊ: 25 ರಾಯಬಾಗ 2ಫೋಟೊ ಶೀರ್ಷಿಕೆ: ರಾಯಬಾಗ: ತಾಲೂಕಿನ ಹಿಡಕಲ ಗ್ರಾಮದಲ್ಲಿ ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ (ಆತ್ಮಾ) ಯೋಜನೆಯಡಿ ಹಮ್ಮಿಕೊಂಡಿದ್ದ ಖೇತ್ ಬಚಾವೋ ಅಭಿಯಾನವನ್ನು ಕೃಷಿ ವಿಜ್ಞಾನಿಗಳು ಮತ್ತು ಅಧಿಕಾರಿಗಳು ಉದ್ಘಾಟಿಸಿದರು.