ಮೂಡಲಗಿ

‘ಮಹಿಳೆಯರ ಮತ್ತು ಮಕ್ಕಳ ಶೋಷಣೆ, ಕಳ್ಳ ಸಾಗಾಣಿಕೆ ತಡೆಗೆ ಕೈಜೋಡಿಸಿ’

‘ಮಹಿಳೆಯರ ಮತ್ತು ಮಕ್ಕಳ ಶೋಷಣೆ, ಕಳ್ಳ ಸಾಗಾಣಿಕೆ ತಡೆಗೆ ಕೈಜೋಡಿಸಿ’

ಮೂಡಲಗಿ 16: ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮತ್ತು ಮಕ್ಕಳ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ,  ಶೋಷಣೆ, ಮಹಿಳೆಯರ ಮತ್ತು ಮಕ್ಕಳ ಕಳ್ಳ ಸಾಗಾಣಿಕೆ ಹೆಚ್ಚುತ್ತಿದ್ದು ಇವುಗಳನ್ನು ತಡೆಗಟ್ಟಲು ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಕೈಜೋಡಿಸಬೇಕೆಂದು ಮೂಡಲಗಿಯ ಶಿವಬೋಧರಂಗ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೋ ಮಹೇಶ ವಾಯ್ ಕಂಬಾರ ಅಭಿಪ್ರಾಯಪಟ್ಟರು. 

 ಜಯ ಭಾರತ ಫೌಂಡೇಶನ ಬೆಳಗಾವಿ, ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿ ಹಾಗೂ ಶಿವಬೋಧರಂಗ ಸರಕಾರಿ ಪ್ರಥಮ ದರ್ಜೆ ಕಾಲೇಜು ಮೂಡಲಗಿಯ ಸಮಾಜಕಾರ್ಯ ಅಧ್ಯಯನ ವಿಭಾಗ, ಮಹಿಳಾ ಘಟಕ ಹಾಗು ಮಾನವ ಹಕ್ಕುಗಳ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಮಹಿಳೆಯರ ಮತ್ತು ಮಕ್ಕಳ ಕಳ್ಳ ಸಾಗಾಣಿಕೆ ತಡೆ ರಾ​‍್ಯಲಿ ಹಾಗೂ ವಿಚಾರ ಸಂಕಿರಣದಲ್ಲಿ ಮಾತನಾಡಿದರು. 

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಮಹಿಳಾ ಕಲ್ಯಾಣ ಸಂಸ್ಥೆಯ ಸಂಯೋಜಕರಾದ ಸುರೇಖಾ ಪಾಟೀಲ ಮಾತನಾಡಿ ಮಹಿಳೆಯರು ಸಮಾಜದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಪುರುಷರಷ್ಟೆ ಸಮಾನವಾಗಿ ಕಂಡರೂ ಸಹ ಅವರ ಮೇಲೆ ದಿನದಿಂದ ದಿನಕ್ಕೆ ದೌರ್ಜನ್ಯಗಳು ಹೆಚ್ಚುತ್ತಿವೆ. ಲೈಂಗಿಕ ಶೋಷಣೆ, ಹೈಟೆಕ್ ವೇಶ್ಯಾವಾಟಿಕೆ, ಪ್ರವಾಸೋದ್ಯಮ ಹೆಸರಲ್ಲಿ  ವೇಶ್ಯಾವಾಟಿಕೆ, ಅಶ್ಲೀಲ ಚಿತ್ರ ನಿರ್ಮಾಣಕ್ಕೆ ಹೆಣ್ಣು ಮಕ್ಕಳ ಸಾಗಾಟ ಮಾಡುತ್ತಿರುವುದು ಸಮಾಜದ ಕರಾಳ ಮುಖವನ್ನು ಎತ್ತಿ ತೋರುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ಮಹಿಳೆಯರ ಮತ್ತು ಮಕ್ಕಳ ಕಳ್ಳ ಸಾಗಾಣಿಕೆ ಪ್ರಕರಣಗಳು ಹೆಚ್ಚುತ್ತಿವೆ ಈ ರೀತಿಯ ರಾ​‍್ಯಲಿ ಹಾಗೂ ವಿಚಾರ ಸಂಕಿರಣಗಳನ್ನು  ಆಯೋಜಿಸುವ ಮೂಲಕ ಸಾರ್ವಜನಿಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದರು. 

ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಸಂಗಾತಿ ಕೌಟುಂಬಿಕ ಸಲಹಾ ಕೇಂದ್ರದ ಸಲಹಾಗಾರರಾದ ಶೃತಿ ಮನಿಹಳ್ಳಿಮಠ ಮಾತನಾಡಿ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಇರುವಂತಹ ಸರಕಾರದ ಯೋಜನೆಗಳು ಹಾಗೂ ಕಾನೂನುಗಳ ಕುರಿತು ಮಾತನಾಡಿದರು. 

ರಾ​‍್ಯಲಿಯು ಗೋಕಾಕ ಮೂಡಲಗಿ ಮುಖ್ಯ ರಸ್ತೆಯ ಮೂಲಕ ಮೂಡಲಗಿ ನಗರದಲ್ಲಿ ಸಂಚರಿಸಿ ಮಹಿಳೆಯರ ಮತ್ತು ಮಕ್ಕಳ ಕಳ್ಳ ಸಾಗಾಣಿಕೆ ತಡೆ ಕುರಿತು ಬಿತ್ತಿಪತ್ರಗಳನ್ನು ಪ್ರದರ್ಶಿಸಲಾಯಿತು ಕಾರ್ಯಕ್ರಮದಲ್ಲಿ ಆಯ ಕ್ಯೂ ಎ ಸಿ ಸಂಯೋಜಕರಾದ ಪ್ರೋ ಚೇತನ ರಾಜ ಬಿ, ಪ್ರೋ ಹಣಮಂತ ಕಾಂಬಳೆ ಉಪಸ್ಥಿತರಿದ್ದರು. ಸಮಾಜಕಾರ್ಯ ಅಧ್ಯಯನ ವಿಭಾಗದ ಪ್ರೋ ರಾಧಾ ಎಂ ಎನ್ ಪ್ರಾಸ್ತಾವಿಕವಾಗಿ ಮಾತನಾಡಿದರು ವಾಣಿಜ್ಯ ವಿಭಾಗದ ಗಾಯತ್ರಿ ಸಾಳುಂಕೆ ಅತಿಥಿಗಳ ಪರಿಚಯ ಮಾಡಿದರು ಸಮಾಜಕಾರ್ಯ ಅಧ್ಯಯನ ವಿಭಾಗದ ಪ್ರೋ ರಾಜೆಂದ್ರ ಪ್ರಸಾದ ಆಸಂಗಿ ವಂದಿಸಿದರು. 


ಸುದ್ದಿ ಓದಿ