ಮುದ್ದೆಬಿಹಾಲ್

‘ಬೆರೆತು ಬಾಳುವ ಸಂದೇಶವನ್ನು ನೀಡುವ ಹಬ್ಬ ಹೋಳಿ’

‘ಬೆರೆತು ಬಾಳುವ ಸಂದೇಶವನ್ನು ನೀಡುವ ಹಬ್ಬ ಹೋಳಿ’
ಮುದ್ದೇಬಿಹಾಳ ಪಟ್ಟಣದ ವಿದ್ಯಾನಗರ ಬಡಾವಣೆಯಲ್ಲಿ ಯುವಕರೊಂದಿಗೆ ಹರಿಯರು ಬಣ್ಣದೊಕುಳಿಯಲ್ಲಿ ಮಿಂದೆದ್ದ ಕ್ಷಣ.

ಮುದ್ದೇಬಿಹಾಳ 26: ಜಾತಿ, ಧರ್ಮ, ಮೇಲು, ಕೀಳು, ದೊಡ್ಡವರು, ಚಿಕ್ಕವರು ಎನ್ನುವ ತಾರತಮ್ಯವಿಲ್ಲದೆ ಎಲ್ಲರೂ ಬಣ್ಣವನ್ನು ಬಳಿಯುವುದು, ಪರಸ್ಪರ ಬಣ್ಣಗಳನ್ನು ಎರಚಿಕೊಳ್ಳುವ ಆಚರಣೆಯನ್ನು ಕೈಗೊಳ್ಳುವ, ಈ ಹಬ್ಬವು ಎಲ್ಲರ ನಡುವೆ ಇರುವ ಅಹಂ ಹಾಗೂ ಸೊಕ್ಕಿನ ಭಾವನೆಯನ್ನು ತೊರೆದು ಬೆರೆತು ಬಾಳುವ ಸಂದೇಶವನ್ನು ನೀಡುವುದು. ಎಲ್ಲರೊಂದಿಗೂ ಬೆರೆತಾಗ ಜೀವನದಲ್ಲಿ ಹೆಚ್ಚು ಸಂತೋಷ ಇರುತ್ತದೆ ಎನ್ನುವುದನ್ನು ಹೋಳಿ ಹಬ್ಬದ ವೈಶಿಷ್ಟ್ಯ ಎಂಬುದು ನಾವೆಲ್ಲ ಅರ್ಥೈಸಿಕೊಳ್ಳಬೇಕಿದೆ. 

ಆದರಂತೆ ಪ್ರತಿವರ್ಷವೂ ಪಟ್ಟಣದಲ್ಲಿ ಎರಡು ದಿನಗಳ ಕಾಲ ಹೋಳಿ ಹಬ್ಬದವನ್ನು ಬಣ್ಣದೊಕುಳಿ  ಹೋಳಿ ಹಬ್ಬವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದರೂ ಆದರೇ ಈ ಬಾರಿ ಎಸ್ ಎಸ್ ಎಲ್ ಸಿ ಹಾಗೂ 5,8,9 ನೇತರಗತಿಯ ವಿದ್ಯಾರ್ಥಿಗಳಿಗೆ ಬೋರ್ಡ ಪರೀಕ್ಷೆ ಇರುವ ಕಾರಣ ಎಲ್ಲರೂ ಪರೀಕ್ಷೆಯಲ್ಲಿ ಬ್ಯೂಸಿಯಾಗಿದ್ದರಿಂದ ಪಟ್ಟಣದಲ್ಲಿ ಬಣ್ಣದ ಹಬ್ಬದಲ್ಲಿ ಕಳೆ ಕಂಡು ಬರಲಿಲ್ಲ. ಈ ರೀತಿಯ ಅನೇಕ ಆಚರಣೆಗಳು ಶ್ರೇಷ್ಠವಾದ ನಂಬಿಕೆಯ ಮೂಲಕ ಇಂದಿಗೂ ಕೆಲವು ಪದ್ಧತಿಗಳು ಜೀವಂತವಾಗಿರುವುದು ವಿಶೇಷ.  ಭಾನುವಾರ ರಾತ್ರಿ ಕೆಲವೆಡೆ ಕಾಮದೇವನನ್ನು ಸುಡುವುದು, ನಂತರ ಬೂದಿ ಮತ್ತು ಬಣ್ಣವನ್ನು ಬಳಿದುಕೊಂಡು, ನೃತ್ಯ ಮಾಡುವುದು, ಆತ್ಮೀಯರಿಗೆ ಬಣ್ಣವನ್ನು ಬಳಿಯುವ ಆಚರಣೆ ನಡೆಯಿತು. ವಿವಿಧ ಕಥೆ ಹಾಗೂ ಆಚರಣೆಯಿಂದ ಕೂಡಿದ್ದರೂ ಏಕತೆ ಹಾಗೂ ಸಂತೋಷದ ಆಚರಣೆಯ ಮೂಲಕ ಬಣ್ಣದ ಹಬ್ಬಕ್ಕೆ ಚಾಲನೆ ನೀಡಲಾಯಿತು.  

ಮುಖ್ಯ ಬಜಾರ, ಬಸ್ ನಿಲ್ದಾಣದ ರಸ್ತೆಯಲ್ಲಿ ಅಂಗಡಿ ಮುಗ್ಗಟ್ಟುಗಳು ಕೇವಲ ಬಂದ ಮಾಡಲಾಗಿತ್ತು ಎಂದಿನಂತೆ ಸಾರ್ವಜನಿಕರ ಸಂಚಾರವಿತ್ತು, ಮದ್ಯಾಹ್ನ 12 ಗಂಟೆಯವರೆಗೂ ಬಣ್ಣದ ಹಬ್ಬದ ಯಾವೂದೇ ಸಂಭ್ರಮ ಕಂಡು ಬರಲಿಲ್ಲ. ಆದರೇ ವಿದ್ಯಾನಗರ, ಮಾರುತಿ ನಗರ, ಹುಡ್ಕೋ ಬಡಾವಣೆ, ಗಣೇಶ ನಗರ, ಸರಾಫ್ ಬಜಾರ, ಕಿಲ್ಲಾ ಗಲ್ಲಿ ಕೆಲವು ಕಡೆಗಳಲ್ಲಿ ಸಣ್ಣ ಸಣ್ಣ ಮಕ್ಕಳು ಜೊತೆಗೆ ಕೆಲವಷ್ಠೆ ಜನ ದೊಡ್ಡವರು  ಯುವಕರು, ಯುವತಿಯರು, ಚಿಣ್ಣರರು ಪರಸ್ಪರ ಬಣ್ಣ ಎರಚಿ ಮಿಂದೆದ್ದು ಸಂಭ್ರಮಿಸಿದ ಕ್ಷಣಗಳು ಕಂಡುಬಂತು. 


ಸುದ್ದಿ ಓದಿ