ಬಯಲು ರಂಗಮಂದಿರದಲ್ಲಿ ಗೆಜ್ಜೆ ಪೂಜೆ
ಲೋಕದರ್ಶನ ವರದಿ
ಬಳ್ಳಾರಿ 22: ಇಲ್ಲಿನ ಡಾ. ರಾಜಕುಮಾರ್ ರಸ್ತೆಯಲ್ಲಿರುವ ಬಯಲು ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗೆಜ್ಜೆ ಪೂಜೆ ಆಯೋಜಿಸಲಾಗಿತ್ತು.
ಕಲಾಂಜಲಿ ಕಲಾ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಗೆಜ್ಜೆ ಪೂಜೆ ಯಲ್ಲಿ ಬಳ್ಳಾರಿಯ ಕುಮಾರಿ ಅಂಬಿಕಾ ಮತ್ತು ತಂಡದಿಂದ ಸಾಮೂಹಿಕ ನೃತ್ಯ ಕಾರ್ಯಕ್ರಮವೂ ಜರುಗಿತು. ಮಹಾನಗರ ಪಾಲಿಕೆ ಸದಸ್ಯ ಎಂ.ಗೋವಿಂದರಾಜುಲು ಕಾರ್ಯಕ್ರಮ ಉದ್ಘಾಟಿಸಿದರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ಧಲಿಂಗ ರಂಗಣ್ಣನವರ, ವಿಶ್ವ ಹಿಂದೂ ಪರಿಷತ್ ಬಳ್ಳಾರಿ ಘಟಕದ ಕುದೇಟಿ ಅಶೋಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮಂಜುಳಾ ಮಂಜುನಾಥ್ ನಿರೂಪಿಸಿದರೆ, ಕಲಾಂಜಲಿ ಕಲಾ ಟ್ರಸ್ಟ್ ನ ಕಾರ್ಯದರ್ಶಿ ರೆಡ್ಡಿ ಸ್ವಾಗತಿಸಿದರು.