‘ರಾಮಾಯಣ ಮಹಾಕಾವ್ಯವು ಜಗತ್ತಿನಲ್ಲಿ ಅಮರ ಕಾವ್ಯ’
ಮುದ್ದೇಬಿಹಾಳ 17: ಆದಿಕವಿ ಮಹರ್ಷಿ ವಾಲ್ಮೀಕಿ ಅವರು ರಚಿಸಿರುವ ರಾಮಾಯಣ ಗ್ರಂಥದಲ್ಲಿ ಅಡಕವಾಗಿರುವಂತಹ ಪಿತೃವಾಕ್ಯ ಪರಿಪಾಲನೆ, ಸೋದರ ಬಾಂಧವ್ಯ ಸಂಬಂಧಗಳ ಮೌಲ್ಯಗಳನ್ನು ಇಂದಿನ ಯುವ ಪೀಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಗುರುಭಕ್ತಿ, ಹಿರಿಯರಿಗೆ ಗೌರವಿಸುವ ಸಂಸ್ಕಾರ ಬೆಳೆಸಿಕೊಳ್ಳಬೇಕು ಎಂದು ಎಂಜಿಎಂಕೆ ಪ್ರಾಚಾರ್ಯ ಹಾಗೂ ಸಾಹಿತಿ ಡಾ. ಎಸ್ ಕೆ ಹರನಾಳ ಅಭಿಪ್ರಾಯಪಟ್ಟರು.
ಪಟ್ಟಣದ ತಾಲೂಕಾ ಆಡಳಿತದಿಂದ ಹಾಗೂ ತಾಲೂಕಾ ವಾಲ್ಮೀಕಿ ಸಮಾಜದಿಂದ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಬಾಗವಹಿಸಿ ವಿಶೇಷ ಉಪನ್ಯಾಸ ನೀಡಿದವರು.
ಎಲ್ಲಿಯವರೆಗೆ ಭೂಮಿಯಲ್ಲಿ ಪರ್ವತ, ಸಮುದ್ರ ನದಿಗಳಿರುತ್ತವೆಯೋ ಅಲ್ಲಿಯವರೆಗೂ ರಾಮಾಯಣ ಕಾವ್ಯ ಲೋಕದಲ್ಲಿ ಪ್ರಚಲಿತದಲ್ಲಿ ಇರುತ್ತದೆ. ಆದ್ದರಿಂದ ಸೂರ್ಯಚಂದ್ರ ಇರುವವರೆಗೂ ರಾಮಾಯಣ ಮಹಾಕಾವ್ಯವು ಜಗತ್ತಿನಲ್ಲಿ ಅಮರ ಕಾವ್ಯವಾಗಿರುತ್ತದೆ. ಮಹರ್ಷಿ ವಾಲ್ಮೀಕಿಯು ಅಮರಕವಿಯಾಗಿರುತ್ತಾರೆ ಎಂದು ಹೇಳಿದರು.
*ಮಹರ್ಷಿಯವರು ಸಂತರು, ದಾರ್ಶನಿಕರು, ನೀತಿ ಶಾಸ್ತ್ರಜ್ಞರು, ತತ್ವಜ್ಞಾನಿಗಳು, ಮಹಾನ್ ಚಿಂತಕರು, ಸಮಾಜ ಸುಧಾರಕರು, ಅತ್ಯುತ್ತಮ ಅರ್ಥಶಾಸ್ತ್ರಜ್ಞರು, ಶ್ರೇಷ್ಠ ಚಿಂತಕರು. ಮಾತ್ರವಲ್ಲದೇ ಲವ ಕುಶರಿಗೆ ಗುರುವಾಗಿ ವಿದ್ಯೆದಾನ ಮಾಡಿದವರು ಸಧ್ಯ ಇವರು ಬರೆದ ರಾಮಾಯಣ ಗ್ರಂಥವು ಪುರಾತನವಾಗಿರುವ ಕಾರಣ ಇವರನ್ನು ಆದಿಕವಿ ಎಂದು ಕರೆಯಲಾಗುತ್ತಿದೆ ರಾಮಾಯಣ ಕಾವ್ಯದಲ್ಲಿ ಮಾತೃ, ಪಿತೃ, ಆಚಾರ್ಯ, ಅತಿಥಿ ದೇವೋಭವದಂತಹ ಮೌಲ್ಯಗಳನ್ನು ಎತ್ತಿಹಿಡಿಯಲಾಗಿದೆ. ಮಮತೆ, ಸಮತೆ, ಭ್ರಾತೃತ್ವ, ತ್ಯಾಗ, ದೇಶಪ್ರೇಮ, ಅಳಿಲು ಸೇವೆ ಮುಂತಾದ ಮಾನವೀಯ ಮತ್ತು ಸಾಮಾಜಿಕ ಮೌಲ್ಯಗಳನ್ನು ಪ್ರತಿಪಾದಿಸಲಾಗಿದೆ ಜೊತೆಗೆ ವಾಲ್ಮೀಕಿಯವನ್ನು ಒಂದು ಜಾತಿಗೆ ಸೀಮಿತಗೊಂಡಿಲ್ಲ ಸರ್ವಜನಾಂಗದವರೂ ಅತ್ಯಂತ ಗೌರವಿಸುವಂತ ಹಿಂದೂ ಶಕ್ತಿಯಾಗಿ ರಾಮಾಯಣ ಗ್ರಂಥವನ್ನು ಬರೆದು ಶ್ರೇಷ್ಠರಾದವರು ಇಂತಹ ಮಹಾನ್ ಋಷಿಗಳ ಜಯಂತ್ಯೋತ್ಸವವೂ ಸರಕಾರದಿಂದ ಆಚರಿಸಿದರೂ ಒಂದು ದಿನದ ಆಚರಣೆಗೆ ಸೀಮಿತವಾಗಿರದೇ ಅವರು ಬರೆದು ಗ್ರಂಥವು ಅದರಲ್ಲಿರುವ ಸಂದೇಶಗಳು ಎಲ್ಲ ಕಾಲಕ್ಕೂ ಪ್ರಸ್ತುತವಾಗಿದೇ ಸಮಾಜದಲ್ಲಿ ಜನರು ಸಂಘಟಿತರಾಗಿ ಸಕಾಲಕ್ಕೂ ಮಹಾತ್ಮರ ಸ್ಮರಣೆ ಮಾಡಬೇಕು ಎಂದರು.*
ವಾಲ್ಮೀಕಿ ವೃತ್ತದಲ್ಲಿ ಬೃಹತ್ ವೇದಿಕೆಯಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸಾಮಾಜದ ಗಣ್ಯರನ್ನು, ಪರಿಶಿಷ್ಟ ಪಂಗಡದ ಸಮಾಜದಿಂದ ಎಲ್ಲ ಸ್ಥಳಿಯ ಚುನಾವಣೆಗಳಲ್ಲಿ ಆಯ್ಕೆಗೊಂಡ ಜನಪ್ರತಿನಿಧಿಗಳನ್ನು ಸಮಾಜದ ವತಿಯಿಂದ ಸನ್ಮಾನಿಸಲಾಯಿತು
ತಾಲೂಕಾ ಆಡಳಿತ ಹಾಗೂ ತಾಲೂಕಾ ವಾಲ್ಮೀಕಿ ಸಮಾಜದಿಂದ ತಾಲೂಕಾ ಮಟ್ಟದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ನಿಮಿತ್ತ ಪಟ್ಟಣದ ತಹಶೀಲ್ದಾರ್ ಕಚೇರಿಯಿಂದ ಮಹರ್ಷಿ ವಾಲ್ಮೀಕಿ ವೃತ್ತದವರೆಗೆ ಮಹರ್ಷಿ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಮೆರವಣಿಗೆಯಲ್ಲಿ ಡೊಳ್ಳು ತಮಟೆ ವಿವಿಧ ಕಲಾ ತಂಡಳು ಪಾಲ್ಗೊಂಡಿದ್ದವು.
ತಹಶಿಲ್ದಾರ ಬಲರಾಮ ಕಟ್ಟಿಮನಿ, ಕಾಂಗ್ರೇಸ್ ಮುಖಂಡ ಶಾಂತಗೌಡ ಪಾಟೀಲ(ನಡಹಳ್ಳಿ) ಅವರು ಮಾತನಾಡಿ ಮಹರ್ಷಿ ವಾಲ್ಮೀಕಿಯವರು ಕೇವಲ ಒಂದು ಜಾತಿಗೆ ಸೀಮಿತಗೊಳಿಸದೇ ಸರ್ವ ಧರ್ಮದವರೂ ಅವರ ಜಯಂತ್ಯೋತ್ಸವವನ್ನು ಭಕ್ತಿಯಿಂದ ಆಚರಿಸುವಂತಾಗಬೇಕು. ಶರಣರ ಜಯಂತ್ಯೋತ್ಸವಗಳ ಒ0ದು ದಿನದ ಆಚರಣೆ ಸೀಮಿತವಾಗದೇ ಆವರ ಆದರ್ಶ ಗುಣಗಳನ್ನು ನಮ್ಮ ಜೀವನದಲ್ಲಿ ರೂಢಿಸಿಕೊಳ್ಳುವಂತಾದಾಗ ಮಾತ್ರ ಜಯಂತ್ಯೋತ್ವವಕ್ಕೆ ಒಂದು ಅರ್ಥ ಬರುತ್ತದೆ. ಯಾವೂದೇ ಸಮಾಜ ಮುಂದೆ ಬರಬೇಕಾದರೇ ತಮ್ಮ ಮಕ್ಕಳಿಗೆ ಉನ್ನತ ಮಟ್ಟದ ಶಿಕ್ಷಣ ಜೊತೆಗೆ ದೇಶದ ಸಂಸ್ಕೃತಿ ಪರಂಪರೆಯ ಬಗ್ಗೆ ಹಾಗೂ ಇಂದಿನ ಆಧುನಿಕ ಸ್ಪರ್ಧಾತ್ಮಕ ಯುಗದಲ್ಲಿ ತಮ್ಮ ಮಕ್ಕಳಿಗೆ ಎಲ್ಲ ರಂಗದಲ್ಲೂ ಪ್ರತಿನಿಧಿಸುವ ಹಾಗೇ ಪ್ರೇರೇಪಣೆ ನೀಡುವ ಮೂಲಕ ಶಿಕ್ಷಣವಂತ ಸಮಾಜ ಕಟ್ಟಿದಾಗ ಮಾತ್ರ ಆ ಸಮಾಜ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ರಾಜಕೀಯವಾಗಿ ಮುಂದೆ ಬರಲು ಸಾಧ್ಯ ಎಂದರು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎನ್ ಎಸ್ ಮಸಳಿ, ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಬಿ ಎಸ್ ಸಾವಳಗಿ, ಪಿಎಸೈ ಸಂಜಯ ತಿಪ್ಪಾರಡ್ಡಿ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ಉಪಾಧ್ಯಕ್ಷೇ ಪ್ರೀತಿ ದೇಗಿನಾಳ, ಗಣ್ಯರಾದ ಡಿ ಬಿ ಮುದೂರ, ಹಣಮಂತ ನಾಯಕಮಕ್ಕಳ, ವಾಲ್ಮೀಕ ಸಮಾಜದ ಅಧ್ಯಕ್ಷ ಬಲಭೀಮ ನಾಲಕಮಕ್ಕಳ, ನಾಗೇಶ ಭಜಂತ್ರಿ, ತಿಪ್ಪಣ್ಣ ದೊಡಮನಿ, ರಾಮಣ್ಣ ರಾಜನಾಳ, ಹುಲಗಪ್ಪ ನಾಯಕಮಕ್ಕಳ, ಅಶೋಕ ಪಾದಗಟ್ಟಿ, ಶಿವು ಶಿವಪುರೆ, ಹರೀಷ ನಾಟಿಕಾರ ಪ್ರಾಸ್ಥಾವಿಕವಾಗಿ ಮಾತನಾಡಿದರು, ಶಿಕ್ಷಕ ಟಿ ಡಿ ಲಮಾಣಿ ನಿರೂಪಿಸಿದರು, ಸಂಗಮೆಶ ಶಿವಣಗಿ ತಂಡದವರು ಪ್ರಾರ್ಥಿಸಿದರು.