‘ಯುವ ಸಮುದಾಯ ಶಿವಶರಣರ ತತ್ವಾದರ್ಶಗಳನ್ನು ಬೆಳೆಸಿಕೊಳ್ಳಿ’
ಘಟಪ್ರಭಾ 01: ಇಂದಿನ ಯುವ ಸಮುದಾಯ ಶಿವಶರಣರ ತತ್ವಾದರ್ಶಗಳನ್ನು ಬೆಳೆಸಿಕೊಳ್ಳಬೇಕು ಎಂದು ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಹೇಳಿದರು.
ಅವರು ಶುಕ್ರವಾರದಂದು ಸಮೀಪದ ಶಿಂದಿಕುರಬೇಟ ಗ್ರಾಮದ ಕೊರಮ (ಭಜಂತ್ರಿ) ಬಳಗದ ಸಹಯೋಗದಲ್ಲಿ ಕಾಯಕಯೋಗಿ ಶಿವಶರಣ ನುಲಿ ಚಂದಯ್ಯನವರ 917ನೇ ಜಯಂತ್ಯೋತ್ಸವ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಮೂಲಕ ಉದ್ಘಾಟಿಸಿ ಮಾತನಾಡಿದರು. 12ನೇ ಶತಮಾನದಲ್ಲಿ ನುಲಿಚಂದಯ್ಯನವರು ಕಾಯಕದಿಂದ ಗುರುತಿಸಿಕೊಂಡವರು. ಭಜಂತ್ರಿ ಸಮಾಜವು ಇಂತಹ ಶಿವಶರಣ ಜಯಂತಿ ಉತ್ಸವ ಆಚರಣೆ ಮಾಡುತ್ತಿರುವುದು ಸಮಾಜಕ್ಕೆ ಒಳ್ಳೇಯ ಸಂದೇಶ ನೀಡಿದಂತಾಗುತ್ತದೆ. ಸಮಾಜದ ಅಭಿವೃದ್ಧಿಗೆ ಎಲ್ಲರೂ ಸಹಕಾರ ನೀಡಿ ಶರಣರ ವಚನಗಳನ್ನು ಮಕ್ಕಳಿಗೆ ತಿಳಿಸಿ ಅವರಿಗೆ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.
ಅಖಿಲ ಕರ್ನಾಟಕ ಕುಳುವ ಮಹಾ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ಭಜಂತ್ರಿ ಮಾತನಾಡಿ ಭಜಂತ್ರಿ ಸಮಾಜವು ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿಯೂ ಕೂಡಾ ಮುಂದೆ ಬರಬೇಕು. ಸರ್ಕಾರದ ಸೌಲಭ್ಯವನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ದೊರಕಿಸುವ ನಿಟ್ಟಿನಲ್ಲಿ ಸಮಾಜದ ಮುಖಂಡರು ಮಾಡಬೇಕು ಎಂದರು.
ಚಿಕ್ಕಮಂಗಳೂರಿನ ಮಹಾಂತೇಶ ಭಜಂತ್ರಿ ಮಾತನಾಡಿ ಭಜಂತ್ರಿ ಸಮಾಜಕ್ಕೆ ಪ್ರತೇಕ ನಿಗಮ ಸ್ಥಾಪನೆಯಾಗಬೇಕು ಅದಕ್ಕೆ ಸಮಾಜದ ಮುಖಂಡರು ಎಲ್ಲರೂ ಸೇರಿಕೊಂಡು ಸರ್ಕಾರದ ಮೇಲೆ ಒತ್ತಡ ತರುವ ಮೂಲಕ ನಮ್ಮ ಹಕ್ಕನ್ನು ಪಡೆದುಕೊಳ್ಳಬೇಕು ಎಂದರು.
ಸಮಾರಂಭದ ದಿವ್ಯಸಾನಿಧ್ಯವನ್ನು ವಡೇರಹಟ್ಟಿಯ ಅಂಬಾದರ್ಶನ ಪೀಠದ ಪೀಠಾಧ್ಯಕ್ಷ ನಾರಾಯಣ ಶರಣರು ವಹಿಸಿ ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು ಮಡ್ಡೆಪ್ಪ ಭಜಂತ್ರಿ ವಹಿಸಿ ಮಾತನಾಡಿದರು.
ವೇದಿಕೆ ಮೇಲೆ ಗ್ರಾ.ಪಂ ಅಧ್ಯಕ್ಷೆ ಸುಮಿತ್ರಾ ಮಾಯಣ್ಣಿ, ಸದಸ್ಯೆ ಬಸನಿಂಗವ್ವ ಭಜಂತ್ರಿ, ರಾಮಜಿ ಭಜಂತ್ರಿ, ಪ್ರವೂಣ ಕಣಗಲಿ,ಬಸವರಾಜ ಭಜಂತ್ರಿ, ಅಜೀತ ಭಜಂತ್ರಿ, ನಾರಾಯಣ ಭಜಂತ್ರಿ, ರಾಜೇಂದ್ರ ಭಜಂತ್ರಿ, ಕೆಂಪಣ್ಣಾ ಭಜಂತ್ರಿ, ರವಿ ಭಜಂತ್ರಿ, ಭೀಮಶಿ ಭಜಂತ್ರಿ ಸೇರಿದಂತೆ ಭಜಂತ್ರಿ ಸಮಾಜದ ತಾಲೂಕಾ ಮುಖಂಡರು ಉಪಸ್ಥಿತರಿದ್ದರು.
ಭಜಂತ್ರಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ವಿಠ್ಠಲ ಕರೋಶಿ ನಿರೂಪಿಸಿ, ವಂದಿಸಿದರು.