"ಪ್ರಬಂಧ ಸಂಚಯ" ಪುಸ್ತಕ ಲೋಕಾರ್ಪಣೆ
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 20: ಪಟ್ಟಣದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಹೊ.ವೆ.ಶೇಷಾದ್ರಿಯವರ ಆಯ್ದ ಲೇಖನಗಳ ‘ಪ್ರಬಂಧ ಸಂಚಯ’ ಪುಸ್ತಕ ಲೋಕಾರೆ್ಣ ಕಾರ್ಯಕ್ರಮ ನಡೆಯಿತು.
ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಉಪಕುಲಪತಿ ಡಾ.ಸಿದ್ದು.ಪಿ.ಅಲಗೂರು ಮಾತನಾಡಿ ಯಾತ್ರನರ್ಯಂತೂ ಪೂಜ್ಯಂತೂ ರಮಂತೆ ತತ್ರದೇವತಃ ಎಂಬಂತೆ ಎಲ್ಲಿ ಸ್ತ್ರೀಯರನ್ನು ಗೌರವಿಸುತ್ತೆವೂ ಅಲ್ಲಿ ದೇವತೆಗಳು ನೆಲೆಸುತ್ತಾರೆ ಎಂಬುದು ಇಂದಿಗೂ ಸತ್ಯವಾಗಿದೆ, ದೇಶದಲ್ಲಿ ಸ್ರ್ತೀಯರಿಗೆ ನೀಡುವ ಗೌರವ ಪೂಜ್ಯನೀಯವಾಗಿದೆ, ಇಂದಿನ ಯುವ ಪೀಳಿಗೆಯು ಪಾಶ್ಚ್ಯಾತ ಸಂಸ್ಕೃತಿಗೆ ಮಾರಿಹೋಗಿದ್ದು ಹಾಗೂ ಅದರ ಅನುಕರಣೆ ಸ್ರ್ತೀಯರನ್ನು ನೋಡುವ ದೃಷ್ಟಿಕೋನ ಬದಲಾಗಿರುವುದು ಅಸಹನೀಯ ಎಂದು ಬೇಸರ ವ್ಯಕ್ತಪಡಿಸಿದರು. ರಾಮಾಯಣ, ಮಹಾಭಾರತದಲ್ಲೂ ಸ್ತ್ರೀಯರ ಬಗ್ಗೆ ಭಕ್ತಿಸ್ಥಾನ ನೀಡಲಾಗಿದೆ. ಇಂದಿನ ಯುವಜನತೆ ಅಧ್ಯಯನ ಕೊರತೆಯಿಂದಾಗಿ ಪಾಶ್ಚತ್ಯ ಸಂಸ್ಕೃತಿಯ ಸೆಳೆತಕ್ಕೆ ಸಿಲುಕಿದ್ದಾರೆ. ಪುಸ್ತಕಗಳನ್ನು ಓದುವ ಮನೋಭಾವ ಹೆಚ್ಚಿಸುವಲ್ಲಿ ಶಿಕ್ಷಣ ಸಂಸ್ಥೆಗಳು ಅಡಿಪಾಯ ಹಾಕಬೇಕಿದೆ. ಮಣ್ಣಿನ ಗುಣವಿಲ್ಲದ ಶಿಕ್ಷಣವನ್ನು ಇಂದಿನ ಮಕ್ಕಳಿಗೆ ನೀಡಲಾಗುತ್ತಿದೆ. ಆಂಗ್ಲ ಭಾಷಾ ವ್ಯಾಮೋಹದಿಂದ ಮಾತೃಭಾಷೆಗೆ ಆದ್ಯತೆ ಕಡಿಮೆಯಾಗುತ್ತಿದೆ. ಹೊಸದೊಂದು ದೇಶ ಕಟ್ಟುವ ಭರದಲ್ಲಿ ಇತಿಹಾಸವನ್ನು ತಿಳಿಸುವಲ್ಲಿ ಸೋತಿದ್ದೇವೆ. ಹೊಸ ತಲೆಮಾರಿನ ಯುವಕರಿಗೆ ರಾಷ್ಟ್ರಭಕ್ತಿಯ ಜಾಗೃತಿ ಮೂಡಿಸುವ ಕೆಲಸ ಪ್ರಬಂಧ ಸಂಚಯ ಪುಸ್ತಕ ಮಾಡಲಿದೆ ಎಂದರು.
ಆರ್ಎಸ್ಎಸ್ ಉತ್ತರ ಪ್ರಾಂತ ಪ್ರಚಾರ ಪ್ರಮುಖ ಗೋಪಿಯವರು ಮಾತನಾಡಿ, ಪ್ರಚಾರ ಮತ್ತು ಪ್ರಶಂಸೆಯನ್ನು ನಿರಾಕರಿಸಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ವಿವಿಧ ಸ್ತರಗಳಲ್ಲಿ ಜವಾಬ್ದಾರಿ ನಿಭಾಯಿಸಿ, ಸಂಘ ಮತ್ತು ಸಮಾಜಕ್ಕಾಗಿ ವಿಚಾರವನ್ನು ಪ್ರಚಾರ ನೀಡಿದವರು. ಪುಸ್ತಕಗಳು ಜೀವನದ ದಿಕ್ಕನ್ನೇ ಬದಲಿಸಲಿವೆ. ಯುವಜನತೆ ಪುಸ್ತಕ ಓದಲು ಆಸಕ್ತಿ ವಹಿಸಬೇಕಿದೆ ಎಂದರು.
ಬಳ್ಳಾರಿ ವಿಭಾಗದ ಸಂಘಚಾಲಕರಾದ ಡಾ.ಎಚ್.ಎನ್.ಪಿ.ವಿಠಲ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೋತ್ಥಾನ ವಿದ್ಯಾಸಂಸ್ಥೆ ಕಾರ್ಯದರ್ಶಿ ಆರ್.ಬಸವನಗೌಡ್ರು, ವಿವಿ ಸಿಂಡಿಕೇಟ್ ಸದಸ್ಯರಾದ ಪದ್ಮಾ ವಿಠಲ್, ಡಾ.ಅಜ್ಜಯ್ಯ, ಪ್ರಮುಖರಾದ ಡಿ.ದುರುಗಣ್ಣ, ಸಕ್ರಹಳ್ಳಿ ಕೊಟ್ರೇಶ್, ನಟರಾಜ ಬೆಳ್ಳಕ್ಕಿ, ಯೋಗಾನಂದ ಮೇಟಿ ಇದ್ದರು.