ಮಹಲಿಂಗಪುರ

ಮೂರು ವರ್ಷದ ಬುದ್ದಿ ನೂರು ವರ್ಷದ ಬದುಕಿಗೆ ಆಸರೆ : ಡಾ.ಪ್ರಕಾಶ ಖಾಡೆ

ಮೂರು ವರ್ಷದ ಬುದ್ದಿ ನೂರು ವರ್ಷದ ಬದುಕಿಗೆ ಆಸರೆ : ಡಾ.ಪ್ರಕಾಶ ಖಾಡೆ

ಮಹಾಲಿಂಗಪುರ  17: ವಿದ್ಯಾರ್ಥಿಗಳಾಗಿದ್ದಾಗಲೇ ಒಳ್ಳೆ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಏಕೆಂದರೆ ಮೂರು ವರ್ಷದ ಒಳ್ಳೆಯ ಬುದ್ದಿ ನೂರು ವರ್ಷದ ಬದುಕಿಗೆ ಆಸರೆ ಎಂಬ ಗಾದೆ ಮಾತಿದೆ ಅದು ಸುಳ್ಳಾಗದು ಎಂದು ಬಾಗಲಕೋಟೆಯ ಸಾಹಿತಿ ಡಾ.ಪ್ರಕಾಶ ಖಾಡೆ ಹೇಳಿದರು.  

ಅವರು ಸಮೀಪದ ಬೆಳಗಲಿಯ ಶ್ರೀ ಸಿದ್ಧಾರೂಢ ಸರಕಾರಿ ಪ್ರೌಢ ಶಾಲೆಯಲ್ಲಿ ಹತ್ತನೇ ವರ್ಗದ ವಿದ್ಯಾರ್ಥಿಗಳಿಗೆ ಏರಿ​‍್ಡಸಿದ್ದ “ಅಮೃತ ಸಿಂಚನ” ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ನಾವು ಎಲ್ಲದರಲ್ಲಿಯೂ ಒಳ್ಳೆಯತನ ಕಂಡು, ಒಳ್ಳೆಯದನ್ನೇ ಮಾಡಿ, ಸಮಾಜದಲ್ಲಿ ಒಳ್ಳೆಯವರಾಗಿ ಬದುಕಬೇಕು. ಕೆಟ್ಟವರಾಗಲು ಹೆಚ್ಚು ಕಾಲ ಬೇಕಿಲ್ಲ. ಅದಕ್ಕೆ ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂದು ಹೇಳುತ್ತಾರೆ ಎಂದು ವಿಧ್ಯಾರ್ಥಿಗಳಿಗೆ ಒಳ್ಳೆಯ ಸಂಸ್ಕಾರ ಬೆಳೆಸಿಕ್ಕೊಳ್ಳಲು ತಿಳಿಸಿದರು. 

 ರಬಕವಿಯ ಹಿರಿಯ ವಿನೋದ ಸಾಹಿತಿ ಯಶವಂತ ವಾಜಂತ್ರಿ ನಗುವಿನಿಂದ ಆರೋಗ್ಯ ಸುಧಾರಿಸಿ, ಜೀವನಕ್ಕೆ ಲವಲವಿಕೆ ಸಿಗುತ್ತದೆ. ಅಭ್ಯಾಸದೊಂದಿಗೆ ನಗೆಯನ್ನೂ ಸಹ ಜೀವನದಲ್ಲಿ ಅಳವಡಿಸಿಕೊಂಡಿರಬೇಕು ಎಂದು ಹೇಳಿದರು.  

ಬಾಗಲಕೋಟೆಯ ಜಾನಪದ ಕವಿ ಬಸವರಾಜ ಕೊಣ್ಣೂರ ಶಾಯಿರಿ ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ಎಸ್‌.ಡಿ.ಎಮ್‌.ಸಿ.ಅಧ್ಯಕ್ಷ ಗೀರೀಶ ಸಂಕ್ರಟ್ಟಿ ವಹಿಸಿದ್ದರು. ಪೂಜಾ ಉಪ್ಪಾರ ಹಾಗೂ ಸಂಗಡಿಗರು ಪ್ರಾರ್ಥಿಸಿ, ಮುಖ್ಯ ಗುರುಮಾತೆ ಎಸ್‌.ಎಸ್‌.ಉದಪುಡಿ ಸ್ವಾಗತಿಸಿ, ಶಿಕ್ಷಕ ಬಿ.ಪಿ.ಚೋಪಡೆ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. 

ಈ ಸಂದರ್ಭದಲ್ಲಿ ವ್ಹಿ.ಎಂ.ಹೊಸೂರ,ಎಲ್‌. ವಾಯ್‌. ಶಾಸ್ತ್ರಿ, ಎಸ್‌.ಎಮ್‌.ಮೇಗಾಡಿ, ಎಲ್‌.ಕೆ.ಮಂಟೂರ, ಶ್ರೀಶೈಲ ಕಾಡದೇವರ, ಲಕ್ಷ್ಮಣ ಕುಂಬಾಳಿ, ಕಿರಣ ಪವಾರ, ರವಿಕುಮಾರ ಹಿರೇಕಲ್ಮಠ, ಶಿವಾನಂದ ನೀಲನ್ನವರ, ಮಾಯಪ್ಪ ಲೋಕ್ಯಾಗೋಳ, ಮಹಾಂತೇಶ ಲೋಕಾಪೂರ, ಪ್ರಭಾರಿ ಮುಖ್ಯ ಗುರು ಮಾತೆ ಎಸ್‌. ಎಸ್‌. ಉದಪುಡಿ, ವಿ. ಎಂ. ಹೊಸೂರ, ಪಿ.ಕೆ.ಪವಾರ, ಎಲ್‌. ವಾಯ್‌. ಶಾಸ್ತ್ರೀ, ಎಸ್‌. ಎಂ.ಮೇಗಾಡಿ, ಎಲ್‌.ಕೆ.ಮಂಟೂರ, ಡಾ.ಗೀತಾ ಬಡಿಗೇರ ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ