"ತಾಯಿ ಭಾಷೆಯೇ ಪುಸ್ತಕ ಆ ಪುಸ್ತಕವೇ ನಾಡಿಗೆ ರಕ್ಷಕ" - ಡಾ.ಪುಷ್ಪಲತಾ ಹೆಚ್
"ತಾಯಿ ಭಾಷೆಯೇ ಪುಸ್ತಕ ಆ ಪುಸ್ತಕವೇ ನಾಡಿಗೆ ರಕ್ಷಕ" - ಡಾ.ಪುಷ್ಪಲತಾ ಹೆಚ್
ಬಳ್ಳಾರಿ 07: ಕನ್ನಡ ಸಾಹಿತ್ಯ ಪರಿಷತ್ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ಘಟಕ ಹಾಗೂ ಸನ್ಮಾರ್ಗ ಗೆಳೆಯರ ಬಳಗ ಬಳ್ಳಾರಿ ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕೆ ಪಿ ಎಸ್ ಬಾಲಕಿಯರ ಪದವಿಪೂರ್ವ ಕಾಲೇಜು ನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಡಾಽಽ ಪುಷ್ಪಲತಾ ಹೆಚ್ ಸಹ ಪ್ರಾಧ್ಯಾಪಕರು ಸೂಕ್ಷ್ಮಜೀವಿ ವಿಭಾಗ , ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ ಬಳ್ಳಾರಿ ಇವರು ಕನ್ನಡ ನಾಡು ನುಡಿ ಬೆಳವಣಿಗೆಗೆ ಮಹಿಳೆಯರ ಕೊಡುಗೆ ಬಗ್ಗೆ ಮಾತನಾಡುತ್ತಾ " ತಾಯಿ ಭಾಷೆಯೇ ಪುಸ್ತಕ ಆ ಪುಸ್ತಕವೇ ನಾಡಿಗೆ ರಕ್ಷಕ "ಮಹಿಳೆಯರು ಓದಿ ಸದೃಢರಾಗಬೇಕು ಆ ದೃಢ ನಿರ್ಧಾರ ಪ್ರೀತಿಯಿಂದ, ಸಮನ್ವಯದಿಂದ ವಿವಿಧ ಕ್ಷೇತ್ರದ ಮೂಲಕ ನಾಡು ನುಡಿ ಬೆಳವಣಿಗೆಗೆ ಬೆಳಕು ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀಮತಿ ಎಂ ಎ ಮಾಬುನ್ನೀಸಾ ಬೇಗಂ ಕನ್ನಡ ಶಾಲೆಯಲ್ಲಿ ಓದಿ ಕನ್ನಡ ನಾಡಿನಲ್ಲೇ ಇದ್ದುಕೊಂಡು ನೌಕರಿ ಮಾಡುತ್ತಾ ಇದ್ದರೂ ಸಂತೋಷದಿಂದ ಸಂಸ್ಕಾರವನ್ನು ಅಳವಡಿಸಿಕೊಂಡು ಜೀವನ ನಡೆಸಲು ಕನ್ನಡ ಭಾಷೆ ಸಾಹಿತ್ಯದಿಂದ ಸಾಧ್ಯ ಎಂದು ಹೇಳಿದರು. ಸಿಂಧೂರ ಸರ್ಕಲ್ ಇನ್ಸ್ಪೆಕ್ಟರ್ ಬ್ರೂಸ್ಪೇಟೆ ನಗರ ಪೊಲೀಸ್ ಠಾಣೆ ರವರು ಮಹಿಳೆಯರ ರಕ್ಷಣೆಗೆ ಪೋಲಿಸ್ ಇಲಾಖೆ ಸದಾ ಸಿದ್ಧವಿದೆ ಮಹಿಳೆಯರ ರಕ್ಷಣೆಯೇ ನಾಡಿನ ರಕ್ಷಣೆ ಎಂದು ತಿಳಿಸಿದರು ಶ್ರೀಮತಿ ಸುಜಾತ ಕೆ ಬಡಿಗೇರ ದಾಸ್ತಾನು ಅಧಿಕಾರಿ ಕೆಎಸ್ಆರ್ಟಿಸಿ ಬಳ್ಳಾರಿ ರವರು ಮಹಿಳೆಯರ ಏಳಿಗೆಗೆ ಎಲ್ಲರ ಸಹಕಾರ ಮುಖ್ಯ ಆದರೆ ಸ್ವ ಪ್ರೇರಣೆಯಿಂದ ಸಾಧನೆ ಮಾಡಲು ಸಾಧ್ಯವಿದೆ ಎಂದು ತಿಳಿಸಿದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮೆಹತಾಬ್ ರವರು ಮಾತನಾಡುತ್ತಾ ಜೀವನ ಸುಂದರವಾಗಿ ಕಟ್ಟಿಕೊಳ್ಳಲು ತಂದೆ, ತಾಯಿ, ಭಾಷೆ, ಭಾವನೆ, ಪುಸ್ತಕದಿಂದ ಮಾತ್ರ ಬದುಕು ಬಂಗಾರ ವಾಗುವುದು ಎಂದು ತಿಳಿಸಿದರು ಶ್ರೀಮತಿ ಪಿ ಲಲಿತಮ್ಮ ಹೆಡ್ ಕಾನ್ಸ್ಟೇಬಲ್ ಎಸ್ ಪಿ ಕಚೇರಿ ಬಳ್ಳಾರಿ ರವರು ಮಾತನಾಡುತ್ತಾ ಇಂದು ಹೆಣ್ಣು ಮಕ್ಕಳ ಅಪಹರಣ ಅತ್ಯಾಚಾರ ಪ್ರಕರಣ ಹೆಚ್ಚಾಗಿವೆ ಅದಕ್ಕೆ ಜಾಗೃತರಾಗಿರಬೇಕು ಎಲ್ಲರ ರಕ್ಷಣೆಗೆ ಪೋಲಿಸ್ ಇಲಾಖೆ ಸದಾ ಸಿದ್ಧವಿದೆ ಎಂದು ಹೇಳಿದರು.ಎ ಎರ್ರಿಸ್ವಾಮಿ ಶಿಕ್ಷಕರು ಹಾಸ್ಯ ಕಲಾವಿದರು ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ಘಟಕ ರವರು ಹಾಸ್ಯದ ಮೂಲಕ ರಂಜಿಸಿದರು ಜಾನಪದ ಕಲಾವಿದರಾದ ಜಡೇಶ್ ಎಮ್ಮಿಗನೂರು ಹಾಡಿನ ಮೂಲಕ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀಮತಿ ಸುಲೇಖ ಬಿ ಪ್ರಾಂಶುಪಾಲರು ಕೆಪಿಎಸ್ ಬಾಲಕಿಯರ ಪದವಿಪೂರ್ವ ಕಾಲೇಜು ಬಳ್ಳಾರಿ ರವರು ಹೆಣ್ಣು ನಾಡಿಗೆ ಶಕ್ತಿ ಆ ಶಕ್ತಿ ಸಾಧಿಸಲು ವಿಧ್ಯೆ ಶ್ರದ್ಧೆ ವಿನಯ ಮುಖ್ಯ ಎಂದು ತಿಳಿಸಿದರು ಕಾರ್ಯಕ್ರಮದಲ್ಲಿ ಹಿರಿಯ ಉಪನ್ಯಾಸಕರಾದ ಮಂಜುನಾಥ್ ರೆಡ್ಡಿ, ತೇಜಾರಘುರಾಮ ಸನ್ಮಾರ್ಗ ಗೆಳೆಯರ ಬಳಗದ ಖಜಾಂಚಿಗಳು ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಡಾಽಽ ನಿಷ್ಠೆ ರುದ್ರ್ಪ ಪದಾಧಿಕಾರಿಗಳ ಗದಗಿನ್,ಜೆ ಹುಸೇನ್ ಭಾಷಾ ವಕೀಲರು, ಕಪ್ಪಗಲ್ ಚಂದ್ರಶೇಖರ ಆಚಾರ್ ಕಾರ್ಯದರ್ಶಿಗಳು, ಕಾಲೇಜಿನ ಎಲ್ಲಾ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಚಾಂದ್ ಪಾಶ ಉಪನ್ಯಾಸಕರು ಕಾರ್ಯಕ್ರಮ ನಿರೂಪಿಸಿದರು,ಡಾ ಶ್ರೀನಿವಾಸ ಉಪನ್ಯಾಸಕರು ರವರು ಸ್ವಾಗತಿಸಿ ವಂದಿಸಿದರು.