ಚಿಕ್ಕೋಡಿ

‘ಮನುಷ್ಯ ಪರಿಶುದ್ಧವಾದ ಭಾವನೆಯಿಂದ ಮುಕ್ತಿ ಮಾರ್ಗ ಕಂಡುಕೊಳ್ಳಬೇಕು’

‘ಮನುಷ್ಯ ಪರಿಶುದ್ಧವಾದ ಭಾವನೆಯಿಂದ ಮುಕ್ತಿ ಮಾರ್ಗ ಕಂಡುಕೊಳ್ಳಬೇಕು’

ಲೋಕದರ್ಶನ ವರದಿ 

ಮಾಂಜರಿ 17: ಮನುಷ್ಯ ಪರಿಶುದ್ಧವಾದ ಭಾವನೆ ಬೆಳೆಸಿಕೊಂಡು ಭಕ್ತಿ ಮತ್ತು ಸೇವೆಗೆ ಬದುಕು ಮುಡುಪಾಗಿಟ್ಟು ಮುಕ್ತಿ ಮಾರ್ಗ ಕಂಡುಕೊಳ್ಳಬೇಕು ಎಂದು ಕಾಶಿ ಪೀಠದ ಜಗದ್ಗುರುಗಳಾದ ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮೀಜಿಗಳು ತಿಳಿಸಿದರು. 

ಅವರು ಶುಕ್ರವಾರರಂದು ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಶ್ರೀ ಕಾಡ ಸಿದ್ದೇಶ್ವರ ಸಂಸ್ಥಾನ ಮಠದಲ್ಲಿ ಶ್ರೀಶೈಲ್ ಪೀಠದ ಜಗದ್ಗುರುಗಳಾದ ಡಾ. ಚೆನ್ನ ಸಿದ್ದರಾಮ ಪಂಡಿತರಾಜ್ಯ ಶಿವಾಚಾರ್ಯ ಮಹಾ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ  ಯೋಜಿ ಸಲದ ಧರ್ಮ ಸಭೆಯಲ್ಲಿ  ಆಶೀರ್ವಚನ ನೀಡಿದ ಶ್ರೀಗಳು, ಈ ಜಗತ್ತಿನ ಜಾತ್ರೆಯಲ್ಲಿ ಸಿಲುಕಿ ಆಸ್ತಿ ಅಧಿಕಾರ ಶ್ರೀಮಂತಿಕೆ ಗಳಿಸಿದ ಮನುಷ್ಯ ನಿಗೆ ನಮ್ಮೊಳಗಿರುವ ಜ್ಞಾನದ ಇರುವಿಕೆ ಅರಿತಾಗ ಮಾತ್ರ ನೆಮ್ಮದಿ ಸಾಧ್ಯ. ಅಜ್ಞಾನಿ ಗಳಾಗದೆ ಅನವಶ್ಯಕ ಆಗಿರುವುದೆಲ್ಲ ತೊರೆದು ಪ್ರಜ್ಞೆತುಂಬಿಕೊಳ್ಳಬೇಕು. ಕರ್ಮ ಯಾವುದಿರಲಿ ತ್ಯಾಗಮಯಿಯಾಗಿ ಯಾಗಿ ನಮ್ಮೊಳಗಿರುವ ಸತ್ಯ ಕಾಣಬೇಕು. ಮೋಹ ಮಾಯೆಯ ಪರದೆ ಸರಿಸಿ ಪರಿಶುದ್ಧ ಮನಸ್ಸಿನಲ್ಲಿ ಭಕ್ತಿ, ಜ್ಞಾನ ಗಳಿಸಿ ಸನ್ಮಾರ್ಗದಲ್ಲಿ ಮುನ್ನಡೆದರೆ ಜನ್ಮಾಂತರಗಳ ಸ್ವರ್ಗ ಸುಖ ಪ್ರಾಪ್ತಿ ಎಂದರು. 

ಶ್ರೀಶೈಲ ಪೀಠದ ಜಗದ್ಗುರುಗಳಾದ ಡಾ. ಚೆನ್ನ ಸಿದ್ದರಾಮ ಪಂಡಿತರಾಜ್ಯ ಶಿವಾಚಾರ್ಯ ಮಹಾಸ್ವಾಮಿಜಿಗಳ   ಆಶೀರ್ವಚನ ನೀಡಿ, ಧರ್ಮದ ಬುತ್ತಿ ಕಟ್ಟಿಕೊಂಡುಸತ್ಕಾರ್ಯಗಳನ್ನು ಮಾಡುವುದೇ ಪುಣ್ಯದ ಕಾಯಕ. ಇದಕ್ಕೆಲ್ಲ ಗುರುವಿನಮಾರ್ಗದರ್ಶನ ಬೇಕು. ಆದಿಚುಂಚನಗಿರಿ ಮಹಾಸಂಸ್ಥಾನ ಪೀಠಾಧಿಪತಿಗಳ ದರ್ಶನ ಆಶೀರ್ವಾದ ಬದುಕಿನ ಉನ್ನತಿಗೆ ದಾರೀದೀಪ ಎಂದು ನುಡಿದರು.ಹಳ್ಳಿಗಳಲ್ಲಿಇಂದುಸಾ ಇಂದುಸಾಮರಸ್ಯ ಬಂಧುತ್ವದ ಕೊರತೆ ಕಾಡು ತಿದ್ದು ಧರ್ಮ ಮೋಕ್ಷದ ಹಾದಿ ಕ್ಷೀಣಿಸುತ್ತಿದೆ. ಹಣಆಸ್ತಿಗಾಗಿನೆಮ್ಮದಿಕಳೆದುಕೊಳ್ಳುತ್ತಿದ್ದೇವೆ. ನಿತ್ಯ ಬದುಕಿನಜಂಜಾಟಗಳಗೊಡವೆ ಇಲ್ಲದ ಪಕ್ಷಿಗಳು ಸ್ವಚ್ಛಂದವಾಗಿ ಒಗ್ಗೂಡಿ ಆನಂದಮ ಯವಾಗಿ ಜೀವಿಸುತ್ತಿದ್ದು ಮನುಷ್ಯನಿಗೆಹೋಲಿಸಿದರೆ ಮೂಕ ಹಕ್ಕಿಗಳೇ ಮೇಲು. ಅರಿವಿನಕೊರತೆನೀಗಿಸಿಕೊಂಡುಪರೋಪಕಾರ ಗುಣಗಳನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದು ಹೇಳಿದರು.  

ಈ ವೇಳೆ ಚಂದುರ್ ಗ್ರಾಮದ ಬಳಗ ಪಾಟೀಲ್ ಇವರು ತಮ್ಮ ಪ್ರವಚನನ್ನು ಮತ್ತು ಹಿತನುಡಿಗಳನ್ನು ಹೇಳಿದರು ಈ ಕಾರ್ಯಕ್ರಮದಲ್ಲಿ ಗ್ರಾಮದ ಶ್ರಮಿಸಿದ   ಹಲವಾರು ಭಕ್ತಾದಿಗಳಿಗೆ ಶ್ರೀಶೈಲ್ ಪೀಠದ ಜಗದ್ಗುರುಗಳು ಹಾಗೂ ಕಾಶಿ ಪೀಠದ ಜಗದ್ಗುರುಗಳು ಸನ್ಮಾನಿಸಿದರು. 


ಸುದ್ದಿ ಓದಿ