ಶಂಕರಲಿಂಗ ಮಠದ "ಮಹಾಯಾತ್ರೆ"
ಸಂಕೇಶ್ವರ: ಎಂ.ಬಿ. ಘಸ್ತಿ
ಇಂದು ಶ್ರೀ ಶಂಕರಾಚಾರ್ಯ ಸಂಸ್ಥಾನ ಮಠದಲ್ಲಿ ಪ್ರತಿ ವರ್ಷದಂತೆ ಶ್ರೀ. ಸಿದ್ಧ ಸಾಂಖ್ಯೇಶ್ವರ ಮಹಾಯಾತ್ರೆಯ ಪ್ರಯುಕ್ತವಾಗಿ ಮುಂಜಾನೆ ಆದ್ಯ ಶ್ರೀ. ಶಂಕರಾಚಾರ್ಯ ವಿದ್ಯಾಶಂಕರಭಾರತಿ (ದೇವಗೋಸಾವಿ) ರ ಸಮಾಧಿಯ ಪೂಜೆಯನ್ನು ಮಠದ ಶ್ರೀಗಳಾದ ಸಚ್ಚಿದಾನಂದ ಅಭಿನವ ವಿದ್ಯಾನರಸಿಂಹ ಭಾರತಿ ಸ್ವಾಮಿಗಳು ಸಮಾಧಿಯ ಪೂಜೆಯನ್ನು ನೆರವೇರಿಸಿದರು.
ನಂತರ ಮಧ್ಯಾಹ್ನ 4 ಗಂಟೆಗೆ ಶಂಕರಲಿಂಗ ಮಠದಲ್ಲಿರುವ ಪರಮಾತ್ನನಿಗೆ ಕೈಮುಗಿದು ನಂತರ ಪಲ್ಲಕ್ಕಿಯಲ್ಲಿ ಕುಳಿತು ನಾರಾಯಣೇಶ್ವರ ಮಂದಿರ ಹಾಗೂ ಬನಶಂಕರಿ ದೇವಿಯ ಪೂಜೆ ಸಲ್ಲಿಸಿದ ನಂತರ ಕಬ್ಬಿನದ ಏಣಿಗಳ ಮೆಟ್ಟಿಲುಗಳ ಮೂಲಕ ರಥದಲ್ಲಿ ಕುಳಿತರು ಶ್ರೀಗಳ ಜೊತೆಗೆ ಮಠದ ಪುರೋಹಿತರಾದ ಶ್ರೀಪಾದ ಉಪಾಧ್ಯೆ ಮತ್ತು ಚಿಕ್ಕ ಮಕ್ಕಳು ರಥದಲ್ಲಿ ಕುಳಿತುಕೊಂಡಿದ್ದರು, ರಥೋತ್ಸವವು ಪುನಃ ಮಠದ ಕಡೆಗೆ ಆಗಮಿಸಿತೊಡಗಿತು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಟೆಂಗಿನಕಾಯಿ ಖಾರೀಕಗಳನ್ನು ರಥಕ್ಕೆ ಎಸೆದು ತಮ್ಮ ಭಕ್ತರು ಹರಿಕೆಗಳನ್ನು ಈಡೆರಿಸಿಕೊಂಡರು ಮತ್ತು ಭಕ್ತರು ಹರ-ಹರ ಮಹಾದೇವ ಎಂಬ ಘೋಷಣೆಗಳು ಆಕಾಶದಲ್ಲಿ ಮುಳುಗುತ್ತಿದ್ದವು, ರಥೋತ್ಸವವು ಮಧ್ಯಾಹ್ನ 4 ಗಂಟೆಯಿಂದ ಚಾಲನೆಗೊಂಡು ಸಾಯಂಕಾಲ 7 ಗಂಟೆ ಸುಮಾರಿಗೆ ಸೂರ್ಯಾಸ್ತದ ಒಳಗಾಗಿ ಪುನಃ ರಥವು ಮಠದ ಕಡೆಗೆ ಬಂದು ನಿಂತುಕೊಂಡಿತು.
ರಥೋತ್ಸವದಲ್ಲಿ ನಗರದ ಹಿರಿಯ ನಾಗರಿಕರಾದ ಅಪ್ಪಾಸಾಹೇಬ ಶಿರಕೋಳಿ, ಪ್ರಕಾಶ ಕಣಗಲಿ, ಶಿವಾನಂದ ಸಂಸುದ್ದಿ, ಗಜಾನನ ಕ್ವಳ್ಳಿ, ಬಸನಗೌಡಾ ಪಾಟೀಲ, ಸಂಜಯ ಶಿರಕೋಳಿ, ಜಯಾ ಪಾಟೀಲ, ಸಂತೋಷ ಪಾಟೀಲ, ದೀಲೀಪ ಹೊಸಮನಿ, ಶಂಕರರಾವ ಹೆಗಡೆ, ಅಮರ ನಲವಡೆ, ವಿರುಪಾಕ್ಷಿ ಮಲಕಟ್ಟಿ, ಮಹಾಂತೇಶ ಕಮತಗಿ, ಅಭಿಜೀತ ಕುರಣಕರ, ವಾಳಕಿ, ಮಹೇಶ ಹಟ್ಟಿಹೊಳಿ, ಬಂಡು ಹತನೂರೆ, ಪಿಂಟೂ ಕೋಳಿ, ಚಿದಾನಂದ ಕರ್ದನ್ನವರ, ಕುನಾಲ ಸಂಜಯಗೌಡಾ ಪಾಟೀಲ, ಎಂ.ಬಿ. ಘಸ್ತಿ, ರಾಜು ಸಂಸುದ್ದಿ, ಮಠಗಲ್ಲಿ ಹಾಗೂ ನದಿಗಲ್ಲಿಯ ಯುವಕರು ಉಪಸ್ಥಿತರಿದ್ದರು. ಶ್ರೀಮಠದಲ್ಲಿ ದಿನಪ್ರತಿ ಪಲ್ಲಕ್ಕಿ ಉತ್ಸವ ಮಂತ್ರ ಪುಷ್ಪ ಅಗ್ನಿಹೋತ್ರ ಯಜ್ಞ ಮುಂತಾದ ಮಂತ್ರಗಳ ಪಠಣೆ ನಡೆಯುತ್ತದೆ ಭಕ್ತರು ಭಗವಂತನ ಆಶೀರ್ವಾದ ಪಡೆದುಕೊಂಡು ಪುನೀತರಾಗಬೇಕೆಂದು ಶ್ರೀಗಳು ಭಕ್ತರಲ್ಲಿ ಅರಿಕೆ ಮಾಡಿಕೊಂಡಿದ್ದಾರೆ.