ಕಾರವಾರ

"ನನಗೆ ಉತ್ತಮ ಜ್ಞಾನವಿದೆ, ಅಂಗೂಟಾ ಛಾಪ್ ಅಲ್ಲ; ಕಾರವಾರ ಮಟ್ಟಿಗೆ ನಾನೇ ಸಿಎಂ" ; ಶಾಸಕ ಸತೀಶ್ ಸೈಲ್

"ನನಗೆ ಉತ್ತಮ ಜ್ಞಾನವಿದೆ, ಅಂಗೂಟಾ ಛಾಪ್ ಅಲ್ಲ; ಕಾರವಾರ ಮಟ್ಟಿಗೆ ನಾನೇ ಸಿಎಂ" ; ಶಾಸಕ ಸತೀಶ್ ಸೈಲ್
"I am well-informed, not illiterate; as far as Karwar is concerned, I am the CM myself" – MLA Satish

ಕಾರವಾರ 06 : ನನಗೆ ಉತ್ತಮ ಜ್ಞಾನವಿದೆ. ನಾನು ಅಂಗೂಟಾ ಛಾಪ್ ಅಲ್ಲ. ಸಚಿವ ಸ್ಥಾನ ಸಿಗಲಿಲ್ಲ ಎಂದು ಅತ್ತುಕೊಂಡು ಕೂರುವ ವ್ಯಕ್ತಿಯೂ ಅಲ್ಲ" ಎಂದು ಕಾರವಾರ ಶಾಸಕ ಸತೀಶ್ ಸೈಲ್ ಹೇಳಿದರು.  ಕಾರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರಿ​‍್ಬ. ತಿಮ್ಮಾಪುರ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರೀಶೀಲನಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ಸಿಗದ ವಿಚಾರಕ್ಕೆ ಪ್ರತಿಕ್ರಿಯಿಸಿದರು. 

"ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ನಾನು ಬೇಸರ ಮಾಡಿಕೊಂಡಿಲ್ಲ. ಮುಖ್ಯಮಂತ್ರಿ ಮತ್ತು ಸರ್ಕಾರದ ಸಹಕಾರದಿಂದ ಕ್ಷೇತ್ರಕ್ಕೆ ಅಗತ್ಯವಿರುವ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಸಿಕೊಳ್ಳುವ ಸಾಮರ್ಥ್ಯ ನನಗಿದೆ. ’ನೀನು ಸಹ ಸಿಎಂ ಇದ್ದಂತೆ, ನಾನು ಸಹ ಸಿಎಂ; ವ್ಯತ್ಯಾಸವೇನು ಎಂದು ಹೇಳಲಾಗಿದೆ. ಆದ್ದರಿಂದ ಕಾರವಾರ ಕ್ಷೇತ್ರದ ಮಟ್ಟಿಗೆ ನಾನೇ ಸಿಎಂ ಎಂಬಂತೆ ಕೆಲಸ ಮಾಡುತ್ತೇನೆ"  ಎಂದು ಹೇಳಿದರು. 

ಕ್ಷೇತ್ರದ ಅಭಿವೃದ್ಧಿಯೇ ತಮ್ಮ ಪ್ರಮುಖ ಗುರಿಯಾಗಿದ್ದು, ಕಾಳಿ ನದಿಗೆ    ಸಂಪರ್ಕಿಸುವ ಮತ್ತೊಂದು ಸೇತುವೆ ಮಂಜೂರು ಮಾಡಿಸಿಕೊಳ್ಳುವುದಾಗಿ ತಿಳಿಸಿದರು. ಜೊತೆಗೆ   ಸಂಪರ್ಕ ಸೇತುವೆ ನಿರ್ಮಾಣಕ್ಕೆ ರೂ30 ಕೋಟಿ ಮಂಜೂರಾಗಿದ್ದು, ಇದರಿಂದ ಸಂಚಾರ ಸುಗಮವಾಗುವುದರ ಜೊತೆಗೆ ಇಂಧನ ಉಳಿತಾಯಕ್ಕೂ ಅನುಕೂಲವಾಗಲಿದೆ ಎಂದು ಹೇಳಿದರು. ಹಾರವಾಡ ಶಾಲೆಯ ದುರಸ್ತಿಗೆ ತಕ್ಷಣ ರೂ30 ಲಕ್ಷ ಅನುದಾನ ನೀಡಲಾಗಿದೆ. ಹೆಚ್ಚುವರಿ ಅನುದಾನದ ಅಗತ್ಯವಿದ್ದರೆ ಶಾಸಕರ ನಿಧಿಯಿಂದ ಒದಗಿಸುವುದಾಗಿ ಭರವಸೆ ನೀಡಿದರು.

ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದು, ಕೈಗಾ ಯೋಜನೆಗೆ ಸಂಬಂಧಿಸಿದ ಭಾರೀ ವಾಹನಗಳ ಸಂಚಾರ ಸುಗಮವಾಗಲು ಮುನ್ನೆಚ್ಚರಿಕಾ ಕ್ರಮವಾಗಿ ಕೆಲವು ಡಿವೈಡರ್ಗಳನ್ನು ತೆರವುಗೊಳಿಸಲಾಗಿದೆ ಎಂದರು.  ವಿರೋಧ ಪಕ್ಷದ ಟೀಕೆಗಳಿಗೆ ಪ್ರತಿಕ್ರಿಯಿಸಿದ ಸೈಲ್, "ಹಿಂದಿನ ಬಿಜೆಪಿ ಸರ್ಕಾರಕ್ಕಿಂತ ಹೆಚ್ಚಿನ ಅನುದಾನವನ್ನು ಕಾರವಾರ ಕ್ಷೇತ್ರಕ್ಕೆ ತಂದು ತೋರಿಸುತ್ತೇನೆ. ಆರೋಪ ಮಾಡುವವರು ದಾಖಲೆಗಳೊಂದಿಗೆ ಅಧಿಕಾರಿಗಳ ಸಮ್ಮುಖದಲ್ಲಿ ಚರ್ಚೆಗೆ ಬರಲಿ" ಎಂದು ಸವಾಲು ಹಾಕಿದರು. 


ಸುದ್ದಿ ಓದಿ