"ಸ್ವಾಮಿ ವಿವೇಕಾನಂದರ ಜಯಂತಿ ಜೊತೆಗೆ ಸಂಕ್ರಾಂತಿಯ ವೈಭವ"
ಮಹಾಲಿಂಗಪುರ 13: ಸಮೀಪದ ಬೆಳಗಲಿಯ ಸರ್ಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ದಂದು ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಜಯಂತಿಯ ಜೊತೆಗೆ ಮಕರ ಸಂಕ್ರಾಂತಿ ಹಬ್ಬವು ಭಾರತೀಯ ಸಂಪ್ರದಾಯದ ವಿಶೇಷ ಉಡುಗೆ ತೊಟ್ಟು ಸಂಬ್ರಮ ಸಡಗರದಿಂದ ಆಚರಿಸಿದರು.
ಯೋಗ ಶಿಕ್ಷಕ ರಾಘವೇಂದ್ರ ನೀಲಣ್ಣವರ 12 ವರ್ಷಕೊಮ್ಮೆ ಜರಗುವ ಮಹಾ ಕುಂಭಮೇಳದ ಪುಣ್ಯ ಗಳಿಗೆಯ ಸಂದರ್ಭವಾದ ಈ ದಿನ, ಸಂಕ್ರಾಂತಿ ಹಬ್ಬದ ಜೊತೆಗೆ ವಿಶ್ವಕ್ಕೆ ಭಾರತೀಯ ಜ್ಞಾನದ ಮಹತ್ವನವನ್ನು ಪರಿಚಯಿಸಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ ಮಹತ್ವಪೂರ್ಣವಾಗಿದೆ. ಸುಗ್ಗಿಯ ಸಂಭ್ರಮದಲ್ಲಿ ರೈತ ತನಗೆ ಆಶ್ರಯವಾದ ಎಲ್ಲಾ ಕಸುಬುದಾರರಿಗೆ ಫಸಲನ್ನು ಹಂಚಿ ಸಂತಸ ಪಡುವ ದಿನವೇ ಸಂಕ್ರಾಂತಿ, ದಕ್ಷಿಣಾಯನ ಮುಗಿದು ಉತ್ತರಾಯನ ಪ್ರಾರಂಭಗೊಳ್ಳುವ ಪುಣ್ಯಗಳಿಗೆ ಸಂಕ್ರಾಂತಿ,ದೇವಗಂಗೆ ಧರೆಗೆ ಬಂದ ದಿನ, ಭೂಮಂಡಲ ಎಲ್ಲಾ ನದಿಗಳು ಪವಿತ್ರ ಗೊಳ್ಳುವ ಪುಣ್ಯ ದಿನ, ಸೂರ್ಯದೇವನ ಆರಾಧನೆಯ ಮಹತ್ವದ ದಿನ ಹೀಗೆ ಹತ್ತು ಹಲವು ವಿಶೇಷಗಳನ್ನು ಒಳಗೊಂಡ ಹಬ್ಬವೇ ಸಂಕ್ರಾಂತಿ, ಕಾಗಿ ಭೋಗಿ ಎಂದರೆ ಕಾಗೆಯ ಗುಣದಂತೆ ಭೋಗವನ್ನು ಸರ್ವರ ಜೊತೆಗೆ ಹಂಚಿ ಜೊತೆ ಸೇರಿ ಅನುಭವಿಸುವುದೇ ಕಾಗಿಬೋಗಿ.ರೈತನಗೆ ಆಸರೆಯಾದ ಎತ್ತುಗಳ ಸಿಂಗರಿಸಿ ಅವುಗಳ ದೃಷ್ಟಿ ತೆಗೆಯುವ ಹಬ್ಬವೇ ಸಂಕ್ರಾಂತಿ ಎಂದು ಹೇಳಿದರು.
ಈ ಕಾರ್ಯಕ್ರಮದ ಉದ್ಘಾಟನೆಯನ್ನ ಎಸ್ ಪಿ ಜೋಶಿ ಮಾಡಿದರು ಅಧ್ಯಕ್ಷತೆ ಎಸ್ ಎಲ್ ಕಠಾರೆ ವಹಿಸಿ ಕಾರ್ಯಕ್ರಮ ಕುರಿತು ಮಾತನಾಡಿದರು.ಕಾರ್ಯಕ್ರಮ ನೇತೃತ್ವವನ್ನು ಆರ್ ಡಿ ಬಂಡಿ,ಹೆಚ್ ಬಿ ಜಮಾದಾರ,ಕುಮಾರಿ ರೂಪಾ ದಂಡಿನ ವಹಿಸಿದರು.
ಇದೇ ಸಂದರ್ಭದಲ್ಲಿ ಬೊರವ್ವ ಮೈಗೂರ, ಗುರವ್ವ ಚಿಮ್ಮಡ, ಹಣಮವ್ವ ಮುಧೋಳ,ಯಲ್ಲವ್ವಾ ಶಿರೋಳ, ಶೀಫಾ ಇನಾಮದಾರ, ಕಾಳಮ್ಮ ಬಡಿಗೇರ, ಶೋಭ ವೀರಘಂಟಿ, ಭಾರತಿ ಮಳ್ಳಿಗೇರಿಸೇರಿ ಇನ್ನು ಹಲವಾರು ಜನ ಪಾಲ್ಗೊಂಡಿದ್ದರು.