"ಶ್ರಮದಾನ ಮೂಲಕ ಸಂಸ್ಥಾಪನಾ ದಿನಾಚರಣೆ ಆಚರಣೆ"
ಮಹಾಲಿಂಗಪುರ 28: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಬಾಗಲಕೋಟೆ ಸ್ಥಳೀಯ ಸಂಸ್ಥೆ ಮುಧೋಳ ಇವರ ಸಂಯುಕ್ತ ಆಶ್ರಯದಲ್ಲಿ ಮಹಾಲಿಂಗಪುರದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ನ ಸಂಸ್ಥಾಪನ ದಿನಾಚರಣೆ ಹಾಗೂ ಚಿಂತನಾ ದಿನಾಚರಣೆ ವಿಶೇಷವಾಗಿ ಎಲ್ಲ ಶಾಲೆಗಳ ಸಂಯೋಗ ಸಹಯೋಗದೊಂದಿಗೆ ಆಚರಿಸಲಾಯಿತು.
ಜಿಲ್ಲೆಯ ಸ್ಕೌಟ್ ಮತ್ತು ಗೈಡ್ ಅಧಿಕಾರಿ ಪ್ರಮೋದ್ ಚೌಗುಲೆ ಹಾಗೂ ಕೆಎಲ್ಇ ಸಂಸ್ಥೆಯ ಎಸ್ಸಿಪಿ ಪ್ರೌಢಶಾಲೆಯ ಉಪ ಪ್ರಾಂಶುಪಾಲ ಬಿ.ಎನ್.ಅರಿಕೇರಿ ಹಸಿರು ನಿಶಾನೆ ತೋರಿಸಿ ಜಾಥಾಗೆ ಚಾಲನೆ ನೀಡಿದರು.
ತನ್ನಿಮಿತ್ತ ಪೊಲೀಸ್ ಠಾಣೆಯಲ್ಲಿ ಸ್ಕೌಟ್ ಮತ್ತು ಗೈಡ್ ವಿದ್ಯಾರ್ಥಿಗಳು ಶ್ರಮದಾನ ಮಾಡಿದರು. ಸ್ಕೌಟ್ ಮಾಸ್ಟರ್ ಎಸ್.ಜಿ.ಜುಟನಟಿ, ಸಪ್ನಾ ಅನಿಗೋಳ್ ತಯಾರಿಸಿದ ಕಾಟನ್ ಬಟ್ಟೆಯ ಚೀಲಗಳನ್ನು ಸಿಬ್ಬಂದಿಗಳಿಗೆ ಹಂಚಲಾಯಿತು.
ಬೆಡನ್ ಪಾವಲ್ ಹಾಗೂ ಲೇಡಿ ಬೆಡನ್ ಪಾವಲ್ ಅವರು ಸ್ಕೌಟ್ ಗೈಡ್ ಚಳುವಳಿಯನ್ನು ಹುಟ್ಟು ಹಾಕಿದ್ದು ಅವರ ಜನುಮದಿನವನ್ನು ಸಂಸ್ಥಾಪನ ದಿನ ಹಾಗೂ ಚಿಂತನ ದಿನವಾಗಿ ಆಚರಿಸಲಾಗುತ್ತದೆ .
ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಕೆ.ಜೆ ಸೋಮಯ್ಯ ಆಂಗ್ಲ ಮಾಧ್ಯಮ ಶಾಲೆ, ಸಿ.ಕೆ.ಚಿಂಚಲಿ ಶಾಲೆ, ಎಸ್ಸಿಪಿ ಪ್ರೌಢಶಾಲೆಯ ಅಂದಾಜು 200 ಸ್ಕೌಟ್ ಮತ್ತು ಗೈಡ್ ವಿದ್ಯಾರ್ಥಿಗಳು ಪ್ರಮುಖ ರಸ್ತೆಗಳಲ್ಲಿ ಸುತ್ತಾಡಿ ಮಕ್ಕಳಲ್ಲಿ ಶಿಸ್ತು ಸ್ವಾವಲಂಬನೆ ಪರಿಸರ ಪ್ರೇಮ ದೇಶಾಭಿಮಾನ ಬಗ್ಗೆ ಜಾಗೃತಿ ಮೂಡಿಸಿದರು. ಮಹಾಲಕ್ಷ್ಮಿ ಪೆಟ್ರೋಲಿಯಂ ಅಂಗಡಿಯವರು ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಕ್ಯಾಪ್ ವಿತರಿಸಿದರ ಜಹಗಿದಾರ್ ಮಕ್ಕಳಿಗೆ ಸಿಹಿ ಹಂಚಿದರು.
ಸ್ಕೌಟ್ ಮಾಸ್ಟರ್ಸ ಎಸ್.ಜಿ ಜುಟನಟ್ಟಿ, ಸುರೇಶ್ ಬಾಡಗಿ, ಶಿವನಪ್ಪ ರೆಡ್ಡೇರಟ್ಟಿ, ಮೈತ್ರಿ, ರಾಜಪ್ಪ ನಡೆಗೇರಿ, ತನುಜಾ ಬಾಡಗಿ, ಕ್ಯಾಪ್ಟನ್ಸ್ ಪ್ರತಿಮಾ ಪಡೆಸುರ, ತಬ್ಬಸುಮ್ ಗೋರಿ, ಸಪ್ನ ಅನೆಗೊಳ್, ಪರಮಾನಂದ ಹಿಪ್ಪರಿಗಿ ಇದ್ದರು.