ಹಸಿರು ತೋರಣ ಬಳಗದಿಂದ ಐವರಿಗೆ "ಪರಿಸರ ರಕ್ಷಕ" ಪ್ರಶಸ್ತಿ
ಮುದ್ದೇಬಿಹಾಳ 05: ಪಟ್ಟಣದ ಹಸಿರು ತೋರಣ ಗೆಳೆಯರ ಬಳಗ ಪ್ರತೀ ವರ್ಷ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ನೀಡುವ 2026 ನೇ ಸಾಲಿನ "ಪರಿಸರ ರಕ್ಷಕ" ಪ್ರಶಸ್ತಿಗೆ ಐವರನ್ನು ಆಯ್ಕೆ ಮಾಡಲಾಗಿದೆ. ಪರಿಸರ ಉಳಿಸಿ, ಬೆಳೆಸುವುವರನ್ನು ಗುರುತಿಸಿ ಕಳೆದ ಒಂಬತ್ತು ವರ್ಷಗಳಿಂದ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಮಿಥುನ ನೇಮಪ್ಪ ಚವ್ಹಾಣ ಅಡವಿ ಹುಲಗಬಾಳ (ಪ್ರಾದೇಶಿಕ ಅರಣ್ಯ), ಸಂಗಪ್ಪ ನಂದಪ್ಪ ನಾಗಾವಿ ಕಾರಕೂರ (ಸಾಮಾಜಿಕ ಅರಣ್ಯ), ಮಾನಪ್ಪ ಸಂಜೀವಪ್ಪ ಕರಡಿ ಆನೇಹೊಸೂರ (ಕೆಬಿಜೆಎನ್ನೆಎಲ್ ಅರಣ್ಯ), ರಾಮಣ್ಣ ಪರ್ಪಗೋಳ (ಸಂತ ಕನಕದಾಸ ಶಾಲೆ ಮುದ್ದೇಬಿಹಾಳ) ಹಾಗೂ ತಂಗಡಗಿ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕರಾದ ವಿಠ್ಠಲ ಸಿ ತೆಗ್ಗಿ ಅವರನ್ನು ಪರಿಸರ ರಕ್ಷಕ ಪ್ರಶಸ್ತಿ ಗೆ ಆಯ್ಕೆ ಮಾಡಲಾಗಿದೆ ಎಂದು ಹಸಿರು ತೋರಣ ಗೆಳೆಯರ ಬಳಗದ ಅಧ್ಯಕ್ಷರಾದ ಅಮರೇಶ ಗೂಳಿ, ಕಾರ್ಯದರ್ಶಿ ಬಸವರಾಜ ಬಿಜ್ಜೂರ ತಿಳಿಸಿದರು. ಪ್ರಶಸ್ತಿಗೆ ಒಟ್ಟು ಆರು ಜನ ಅರ್ಜಿ ಅಥವಾ ಶಿಫಾರಸು ಬಂದಿದ್ದವು. ಪ್ರಶಸ್ತಿಗಳನ್ನು ಇದೇ ಜೂನ್ 7 ರಂದು ಭಾನುವಾರ ಬೆಳಿಗ್ಗೆ 8 ಗಂಟೆಗೆ ಹಸಿರು ತೋರಣ ಉದ್ಯಾನವನದಲ್ಲಿ ನೀಡಿ ಸನ್ಮಾನಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.