ಸಂಕೇಶ್ವರ

"ಭಕ್ತ ವತ್ಸಲ" ತ್ರೈಮಾಸಿಕ ಪುಸ್ತಕ ಬಿಡುಗಡೆ

"ಭಕ್ತ ವತ್ಸಲ" ತ್ರೈಮಾಸಿಕ ಪುಸ್ತಕ ಬಿಡುಗಡೆ

ವರದಿ: ಎಂ.ಬಿ. ಘಸ್ತಿ 

ಸಂಕೇಶ್ವರ 07: ನ್ಯಾಯ ನೀತಿ ಧರ್ಮ ಸಂಸ್ಕಾರ ಸ್ವಂತ ಜೀವನ ಮತ್ತು ಶ್ರೀ. ಪಂತ ಮಹಾರಾಜರ ತತ್ವಜ್ಞಾನ ಸಮಾಜಧಾರಣೆಗಳಿಂದ ಸಮೃದ್ಧವಾದ ಹಾಗೂ ಮಹಾರಾಜರು ಭಕ್ತರಿಗಾಗಿ ಹಾಕಿಕೊಟ್ಟ ಹತ್ತು ನಿಯಮಗಳನ್ನು ಒಳಗೊಂಡ ತ್ರೈಮಾಸಿಕ "ಭಕ್ತ ವತ್ಸಲ" ಎಂಬ ಪುಸ್ತಕವನ್ನು ಶಂಕರಲಿಂಗ ಮಠದ ಶ್ರೀಗಳ ಅಮೃತ ಹಸ್ತದಿಂದ ದಿ: 6 ರಂದು ಬಿಡುಗಡೆ ಮಾಡಲಾಯಿತು. 

 ಸಮಾರಂಭದಲ್ಲಿ ಚಿಕ್ಕೋಡಿಯ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆಯವರು, ಸತ್ಪುರುಷ ಸಂತ ಮಹಾರಾಜರ ಅವರ ಆದರ್ಶಗಳನ್ನು ಭಕ್ತರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ತಮ್ಮ ಬದುಕನ್ನು ಸುಂದರಗೊಳಿಸಬೇಕೆಂದು ಜೊಲ್ಲೆಯವರು ಭಕ್ತರಿಗೆ ಕರೆ ನೀಡಿದರು, ಶ್ರೀಗಳಾದ ಸಚ್ಚಿದಾನಂದ ಅಭಿನವ ವಿದ್ಯಾನರಸಿಂಹ ಭಾರತಿ ಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ ಪಂತ ಮಹಾರಾಜರು ಸನ್ಯಾಸಿಗಳಕ್ಕಿಂತ ಪವಾಡ ಪುರುಷರೆಂದು ಶ್ರೀಗಳು ಕೊಂಡಾಡಿದರು. 


ಸುದ್ದಿ ಓದಿ