ಮಹಲಿಂಗಪುರ

"ಅಪ್ಪು ನೆನಪು"- ಅಭಿಮಾನಿಗಳಿಗೆ ಕಡಿಮೆ ದರದಲ್ಲಿ ಯುವರತ್ನ ಚಲನಚಿತ್ರ ಪ್ರದರ್ಶನ

"ಅಪ್ಪು ನೆನಪು"- ಅಭಿಮಾನಿಗಳಿಗೆ ಕಡಿಮೆ ದರದಲ್ಲಿ ಯುವರತ್ನ ಚಲನಚಿತ್ರ ಪ್ರದರ್ಶನ


 ಮಹಾಲಿಂಗಪುರ26:  ಪಟ್ಟಣದ ಅಷ್ಟಗಿ ಚಲನ ಚಿತ್ರಮಂದಿರದಲ್ಲಿ ಇತ್ತೀಚೆಗೆ ನಿಧನರಾದ ಪವರ್ ಸ್ಟಾರ್ ಪುನೀತ್ ರಾಜಕುಮಾರ ಅಭಿಮಾನಿಗಳಿಗೆ ಶುಕ್ರವಾರ 'ಅಪ್ಪು ನೆನಪು ' ಕಾರ್ಯಕ್ರಮದಡಿ ಡಾ.ರಾಜ್ ಹಾಗೂ ಪುನೀತ್ ಅಭಿಮಾನಿ ಬಳಗ 20 ರೂಗಳ ಕಡಿಮೆ ದರದಲ್ಲಿ ಯುವರತ್ನ ಚಲನ ಚಿತ್ರ ಪ್ರದರ್ಶನ ಏರಿ​‍್ಡಸಿ ಅವರ ಆತ್ಮಕ್ಕೆ ಶಾಂತಿ ಕೋರಿದರು. 

ಚಿತ್ರಮಂದಿರದಲ್ಲಿ ದಿ. ಪುನೀತ್ ರಾಜಕುಮಾರ ಅವರ ಭಾವಚಿತ್ರಕ್ಕೆ ಗಣ್ಯರು ಪೂಜೆ ನೆರವೇರಿಸಿದರು. ನಂತರ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲ ಅಭಿಮಾನಿಗಳಿಗೆ, ಚಿತ್ರ ವೀಕ್ಷಕರಿಗೆ ಅನ್ನ ಸಂತರೆ​‍್ಣ ಕಾರ್ಯ ನಡೆಯಿತು. 

ಈ ಸಂದರ್ಭದಲ್ಲಿ ಪಿಕೆಪಿಎಸ್ ಅಧ್ಯಕ್ಷ ಬಸನಗೌಡ ಪಾಟೀಲ್ ಹಾಗೂ ಸದಸ್ಯರಾದ ಈರ​‍್ಪ ದಿನ್ನಿಮನಿ, ಶಿವಲಿಂಗಪ್ಪ ಘಂಟಿ ಮತ್ತು ಶ್ರೀಮಂತ ಹಳ್ಳಿ,ಭೀಮಶಿ ಗೌಂಡಿ, ಶಿವಬಸು ಗೌಂಡಿ, ಚಂದ್ರು ಅಷ್ಟಗಿ, ಜಮೀರ ಯಕ್ಸಂಬಿ, ಹನಮಂತ ಬುರುಡ, ಈರ​‍್ಪ ಜಾನಕುಣ್ಣನ್ನವರ, ಪ್ರಕಾಶ ಮೋರೆ, ಪ್ರಶಾಂತ ಮುಕ್ಕೆನ್ನವರ ಇನ್ನು ಮುಂತಾದವರಿದ್ದರು. 


ಸುದ್ದಿ ಓದಿ