ಅಭಿಪ್ರಾಯ

ಗ್ರಾಮೀಣ ವಿದ್ಯಾಥರ್ಿಗಳಿಗೆ ಆನ್ಲೈನ್ ಶಿಕ್ಷಣದ ಸಮಸ್ಯೆಗಳು

ಗ್ರಾಮೀಣ ವಿದ್ಯಾಥರ್ಿಗಳಿಗೆ ಆನ್ಲೈನ್ ಶಿಕ್ಷಣದ ಸಮಸ್ಯೆಗಳು 

 ಕೊರೋನ ಬಿಕ್ಕಟ್ಟು ನಮ್ಮ ಬದುಕಿನ ದಿಕ್ಕನ್ನೇ ಬೇರೊಂದು ಕಡೆ ಕೊಂಡುಯ್ಯುತ್ತಿದ್ದು, ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿದೆ.  ಆ ಸಮಸ್ಯೆಗಳಲ್ಲಿ ಆನ್ಲೈನ್ ಶಿಕ್ಷಣ ಸಮಸ್ಯೆ ಕೂಡ ಒಂದಾಗಿದೆ.  ಸಾಂಪ್ರದಾಯಿಕ ಕ್ಲಾಸ್ ರೂಮ್ ಶಿಕ್ಷಣದಿಂದ ಹೊರಬಂದು ಆನ್ಲೈನ್ ಪಾಠಕ್ಕೆ ಹೊಂದಿಕೊಳ್ಳುವುದು ಕಷ್ಟಕರವಾದವಾಗಿ, ಯಾಂತ್ರಿಕವಾಗಿ ಒನ್ ವೇ ಪಾಠ ಬೋಧನೆ ಪರಿಣಾಮಕಾರಿಯಾಗಲು ಸಾಧ್ಯವೇ? ಆನ್ ಲೈನ್ ಕ್ಲಾಸ್ ಎಂಬುದು ಗ್ರಾಮೀಣ ಪ್ರದೇಶದ ವಿದ್ಯಾಥರ್ಿಗಳಿಗೆ  ಅನೇಕ ಸಮಸ್ಯೆಗಳ ಆಗರವಾಗಿದೆ. ಶಿಕ್ಷಕರು ಮತ್ತು ವಿದ್ಯಾಥರ್ಿಗಳ ಬಾಂಧವ್ಯಕ್ಕೆ ಚ್ಯುತಿ ತರುವಂತಿದೆ. 

ಸಮಸ್ಯೆಗಳ ಆಗರ : ಆನ್ ಲೈನ್ ಶಿಕ್ಷಣದಿಂದ ಅನೇಕ ವಿದ್ಯಾಥರ್ಿಗಳು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ, ಮತ್ತು ಕಣ್ಣಿನ ಸಮಸ್ಯೆ ಎದುರಾಗಿದೆ. ಹಣಕಾಸಿನ ಸಮಸ್ಯೆ,  ಕೌಟುಂಬಿಕ ಸಮಸ್ಯೆ, ವೈಯಕ್ತಿಕ ಸಮಸ್ಯೆಗಳು, ನೆಟ್ ವಕರ್್ ವ್ಯವಸ್ಥೆ ಸರಿಯಿಲ್ಲದಿರುವುದು, ಸರಿಯಾಗಿ ವಿದ್ಯುತ್ ಪೂರೈಕೆಯಾಗದಿರುವುದು ಇನ್ನೂ ಅನೇಕ ಸಮಸ್ಯೆಗಳು ಬಾಧಿಸುತ್ತಿವೆ.  

 ವಿದ್ಯಾಥರ್ಿಗಳಿಗೆ ಸಮಸ್ಯೆ : ಆನ್ ಲೈನ್ ಶಿಕ್ಷಣ ಮಕ್ಕಳ ಮೇಲೆ ಅನೇಕ ಪರಿಣಾಮಗಳನ್ನು ಬೀರುತ್ತಿದ್ದು, ಕಲಿಕೆ ಬಗ್ಗೆ ಆತ್ಮವಿಶ್ವಾಸದ ಕೊರತೆ ಎದ್ದು ಕಾಣುತ್ತಿದೆ.  ಮೊಬೈಲ್ ಇಲ್ಲದಿರುವುದು,  ಕಣ್ಣಿನ ನೋವು, ಪ್ರತ್ಯೇಕ ಕೊಠಡಿಯ ಕೊರತೆ, ದಿನಕ್ಕೆ ಮೂರ್ನಾಲ್ಕು ತಾಸು ಪಾಠ ಕೇಳಬೇಕೆಂದರೆ ಮೊಬೈಲ್ ಬ್ಯಾಟರಿ ಸಾಕಾಗದು. ಪಠ್ಯೇತರ ಚಟುವಟಿಕೆಗಳು, ಕ್ರೀಡೆ ಇತ್ಯಾದಿ ಚಟುವಟಿಕೆಗಳಿಲ್ಲದೆ  ಸೃಜನಾತ್ಮಕ, ಕ್ರಿಯಾಶೀಲ ವಿದ್ಯಾಥರ್ಿಗಳನ್ನಾಗಿ ಮಾಡಲು ಸಾಧ್ಯವಿಲ್ಲ. ವಿದ್ಯಾಥರ್ಿಗಳಿಗೆ ಏಕಾಗ್ರತೆ, ಬದ್ಧತೆಯಿಂದ ಕಲಿಯಲೂ ಸಾಧ್ಯವಿಲ್ಲ.  ಲಭ್ಯವಿರುವ ಇ-ಪಠ್ಯ ಪುಸ್ತಕಗಳ ಬಗ್ಗೆ ಅನೇಕ ವಿದ್ಯಾಥರ್ಿಗಳಿಗೆ ಮಾಹಿತಿ ಕೊರತೆಯೂ ಎದ್ದು ಕಾಣುತ್ತಿದೆ.  

ಶಿಕ್ಷಕರಿಗೆ ಸಮಸ್ಯೆಗಳು : ಆನ್ ಲೈನ್ ಬೋಧನೆ ಮಾಡುವ ಜವಾಬ್ದಾರಿಯನ್ನು ಶಿಕ್ಷಕರ ಮೇಲೆ ಹೊರಿಸಲಾಗಿದೆ. ಆದರೆ ಆನ್ ಲೈನ್ ಬೋಧನೆ ಮಾಡುವ ವಿಧಾನಗಳನ್ನು ಕುರಿತು ಶಿಕ್ಷಕರಿಗೆ ಅನುಭವವಿಲ್ಲ. ತರಬೇತಿಯನ್ನೂ ನೀಡಿಲ್ಲ. ಅನೇಕ ಶಿಕ್ಷಕರಿಗೆ ಮೊಬೈಲ್ ಅಥವಾ ಕಂಪ್ಯೂಟರ್ ಬಳಸಲೂ ಬರುವುದಿಲ್ಲ. ವಿದ್ಯಾಥರ್ಿಗಳಿಗೆ ಆಸಕ್ತಿ ಮೂಡಿಸಿ  ಪರಿಣಾಮಕಾರಿ ಬೋಧನೆ ಮಾಡಲು ಸಾಧ್ಯವಾಗುತ್ತಿಲ್ಲ. 

ಪೋಷಕರ ಸಮಸ್ಯೆಗಳು : ಪೋಷಕರ ಬಳಿ ಸ್ಮಾಟರ್್ಪೋನ್ ಇಲ್ಲ, ಇದ್ದರೂ ಮೊಬೈಲ್ನೊಂದಿಗೆ ಕೆಲಸಕ್ಕೆ ಹೋಗುವ ಪೋಷಕರು ಹೊಟ್ಟೆಪಾಡಿಗಾಗಿ ಮಕ್ಕಳನ್ನೂ ಕೆಲಸಕ್ಕೆ ಕರೆದುಕೊಂಡು ಹೋಗುತ್ತಾರೆ. ಆಥರ್ಿಕ ಸಂಕಷ್ಟಕೂಡ ಅನೇಕ ರೈತರು ಮತ್ತು ಕೂಲಿ ಕಾಮರ್ಿಕರನ್ನು ಕಾಡುತ್ತಿದೆ.  ಇಬ್ಬರು, ಮೂರು ಮಕ್ಕಳಿರುವ ಪೋಷಕರು ಊಟವಿಲ್ಲದೆ ಪರದಾಡುತ್ತಿರುವಾಗ   ಮಕ್ಕಳಿಗೆ ಸ್ಮಾಟರ್್ ಪೋನ್  ಕೊಡಿಸಬೇಕೆಂದರೆ ಕನಿಷ್ಟ ಮೂವತ್ತು ಸಾವಿರ ರೂಪಾಯಿಗಳು ಬೇಕಾಗುತ್ತದೆ.  ಮೊಬೈಲ್ಪಾಠ ಕೇಳಬೇಕೆಂದರೆೆ ತಿಂಗಳಿಗೆ  ಒಬ್ಬರಿಗೆ 250 ರೂಪಾಯಿಗಳ ಕರೆನ್ಸಿಬೇಕು. 

ಇದರಿಂದ ಬಾಲ ಕಮರ್ಿಕರು ಹೆಚ್ಚಾಗಿದ್ದು, ಬಾಲ್ಯ ವಿವಾಹ ಸಂಖ್ಯೆ ಕೂಡ ಹೆಚ್ಚಾಗಿದೆ, ವಿದ್ಯಾಥರ್ಿಗಳು ಪಾಠ ಕೇಳುವುದಕ್ಕಿಂತ ಹೆಚ್ಚಾಗಿ ಮೊಬೈಲ್ ಮೋಹಿನಿಗೆ ಬಲಿಯಾಗಿ ಬೇರೆ, ಬೇರೆ ಹವ್ಯಾಸಗಳಲ್ಲಿ ತೊಡಗಿದ್ದಾರೆ. ಗ್ರಾಮೀಣ ಭಾಗದ ಶೇ.75 ವಿದ್ಯಾಥರ್ಿಗಳಿಗೆ ಈ ಎಲ್ಲಾ ಸಮಸ್ಯೆಗಳಿವೆ. ಪ್ರಾಥಮಿಕ ಶಾಲಾ  ವಿದ್ಯಾಥರ್ಿಗಳಿಗಲ್ಲದೆ ಪಿಯು ಮತ್ತು ಪದವಿ ವಿದ್ಯಾಥರ್ಿಗಳಿಗೂ ಈ ತೊಂದರೆ ತಪ್ಪಿದ್ದಲ್ಲ.   ಡಿಜಿಟಲ್ ಕಲಿಕೆ ಹೊಸತು, ಆದರೆ ಮುಂದಿನ ದಿನಗಳಲ್ಲಿ ಆನ್ ಲೈನ್ ಶಿಕ್ಷಣ, ಶಿಕ್ಷಣದ ಪದ್ದತಿಯನ್ನೇ ಬದಲಾಯಿಸಿದರೆ ಅಚ್ಚರಿಪಡುವ ಅಗತ್ಯವಿಲ್ಲ.  ಭವಿಷ್ಯದಲ್ಲಿ ಆನ್ ಲೈನ್ ಶಿಕ್ಷಣ ಜೀವನದ ಅವಿಭಾಜ್ಯ ಅಂಗ ಆಗಬಹುದು. ಏನೇ ಆದರೂ ಪರಿಸ್ಥಿತಿಗೆ ಹೊಂದಿಕೊಳ್ಳುವುದು ಅನಿವಾರ್ಯವಾಗಿದೆ. 


- ಹೆಚ್.ಮಲ್ಲಿಕಾರ್ಜುನ ಹರಪನಹಳ್ಳಿ

 

ಸುದ್ದಿ ಓದಿ