ರೈತರ ಹೋರಾಟಕ್ಕೆ ದೊರೆತ ಗೆಲವು ಮುಖಂಡರು ಕೃಷಿ ಕಾರ್ಮಿಕರಿಂದ ಸಂಭ್ರಮ
ಸಿರುಗುಪ್ಪ 20: ರೈತರು ನಡೆಸಿದ ಬಹುತೇಕ ಶಾಂತಿಯುತ ಮತ್ತು ದೃಢ ಮನಸ್ಸಿನ ಹೋರಾಟಕ್ಕೆ ದೊರೆತ ಮೊದಲ ಗೆಲುವು ಇದನ್ನು ಪರಿಗಣಿಸಬಹುದು ಎಂದು ಬಳ್ಳಾರಿ ಜಿಲ್ಲೆಯ ಜಮೀನ್ದಾರ್ ಸೈಯದ್ ಶಾ ಮೊಹಿಯುದ್ದಿನ್ ಖಾದ್ರಿ ಮತ್ತು ಅವರ ಸಹೋದರರು ಹೇಳಿದರು ಕೇಂದ್ರ ಸರ್ಕಾರ ರೂಪಿಸಿದ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ 3ಕಾಯಿದೆಗಳನ್ನು ಹಿಂದಕ್ಕೆ ಪಡೆಯುವುದಾಗಿ ಪ್ರಧಾನಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಘೋಷಿಸಿರುವುದಕ್ಕೆ ಖಲೀಫಾ ಸರ್ ಖಾಜಿ ಸೈಯದ್ ಅಬ್ದುಲ್ ರಜಾಕ್ ಖಾದ್ರಿ ಅಶ್ರಫಿ ಅವರು ಸ್ವಾಗತಾರ್ಹ ಎಂದರು ಕಾಯ್ದೆಗಳು ಅಂಗೀಕಾರವಾಗಿ 406 ದಿನ ಬಳಿಕ ಈ ನಿರ್ಧಾರ ನರೇಂದ್ರ ಮೋದಿ ಪ್ರಕಟಿಸಿದುದಕ್ಕೆ ರೈತರಿಗೆ ಅರ್ಧ ಗೆಲವು ಸಿಕ್ಕಿದೆ 3 ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂತೆಗೆದು ಕೊಳ್ಳುವ ನಿರ್ಧಾರ ಸ್ವಾಗತಾರ್ಹ ವಾಗಿದ್ದರೂ ಆದರೆ ಎಲ್ಲಿಯ ವರೆಗೂ ಕನಿಷ್ಠ ಬೆಂಬಲ ಬೆಲೆಯನ್ನು ರೈತರ ಕಾನೂನು ಬದ್ಧ ಹಕ್ಕನ್ನಾಗಿ ಮಾಡುವುದಿಲ್ಲವೋ ಅಲ್ಲಿಯವರೆಗೂ ಕೃಷಿಕರ ಸಂಕಷ್ಟಕ್ಕೆ ಕೊನೆಯಿಲ್ಲ ಎಂದು ಪ್ರಗತಿಪರ ಸ್ವತಂತ್ರ ಹೋರಾಟಗಾರ ಕೃಷಿ ಕಾರ್ಮಿಕ ಸಾಕ್ಷರ ಕಾರ್ಯಕರ್ತ ಎ ಅಬ್ದುಲ್ ನಬಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ವಿವಾದಿತ 3ಕೃಷಿ ಕಾಯಿದೆಗಳನ್ನು ಕೈಬಿಡುವ ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ ನವೆಂಬರ್ 20 ಅನ್ನೋ ಕಿಸಾನ್ ವಿಜಯ್ ದಿವಸ್ ಆಗಿ ಆಚರಿಸಲು ಕಾಂಗ್ರೆಸ್ ಪಕ್ಷ ತೀರ್ಮಾನಿಸಿ ಪ್ರಕಟಿಸಿದೆ ದೇಶಾದ್ಯಂತ ವಿಜಯೋತ್ಸವವನ್ನು ಆಚರಿಸಲಾಗುತ್ತದೆ ಎಂದು ಭೂ ನ್ಯಾಯ ಮಂಡಳಿ ಹಾಗೂ ತಾಲ್ಲೂಕು ಯುವ ಕಾಂಗ್ರೆಸ್ ಗೌರವ ಅಧ್ಯಕ್ಷ ಹಂಡಿ ಹಾಜಿ ಹುಸೇನ್ ಬಾಷಾ ಹೇಳಿದರು.
ರೈತ ಮುಖಂಡ ಕೃಷಿ ಕಾರ್ಮಿಕರು ಎ.ಮೊಹಮ್ಮದ್ ಇಬ್ರಾಹಿಂ, ಎ.ಮೊಹಮ್ಮದ್ ರಫಿ, ಎ.ಮೊಹಮ್ಮದ್ ನೌಷಾದ್ ಅಲಿ ಅವರು ರಾಜ್ಯದಲ್ಲಿ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಕೃಷಿಕರ ಪರವಾಗಿ ಕೋರಿದರು. ದೇಶದಲ್ಲಿ ರೈತರ ಹೋರಾಟದ ಗೆಲುವಿಗೆ ರೈತ ಮುಖಂಡರು ಕೃಷಿ ಕಾರ್ಮಿಕರು ಸಂಭ್ರಮಿಸಿದರು.