ಬನ್ನಿಕೊಪ್ಪ ಚಕ್ ಪೋಸ್ಟ್ ಗೆ ತಡರಾತ್ರಿ ಚುನಾವಣಾಧಿಕಾರಿ ದಿಢೀರ್ ಭೇಟಿ, ಎಲ್ಲ ವಾಹನಗಳನ್ನು ತಪಾಸಣೆ ಮಾಡಿ : ಕಾವ್ಯರಾಣಿ
ಲೋಕದರ್ಶನ ವರದಿ
ಯಲಬುರ್ಗಾ 08: ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಕುಕನೂರ ತಾಲೂಕಿನ ಬನ್ನಿಕೊಪ್ಪ ಚಕ್ ಪೋಸ್ಟ್ ಗೆ ತಡರಾತ್ರಿ 3.30ಕ್ಕೆ ಚುನಾವಣಾಧಿಕಾರಿಗಳಾದ ಕಾವ್ಯರಾಣಿ ಕೆ.ವಿ ಅವರು ಭೇಟಿನೀಡಿ ಚಕ್ ಪೋಸ್ಟ್ ಕಾರ್ಯವೈಕರಿಯನ್ನು ಪರಿಶೀಲಿಸಿ, ಎನ್ಎಚ್ 63 ನಲ್ಲಿ ಹಾದುಹೋಗುವ ಗೂಡ್ಸ್, ಕಾರ್, ಪ್ಯಾಸೆಂಜರ್ ವಾಹನವನ್ನು ಕಡ್ಡಾಯವಾಗಿ ತಪಾಸಣೆ ಮಾಡಬೇಕು ಎಂದು ಸೂಚಿಸಿದರು.
ಅಂತರ್ ಜಿಲ್ಲಾ ಸಂಪರ್ಕ ಕಲ್ಪಿಸುವ ಬನ್ನಿಕೊಪ್ಪ ಚಕ್ಪೋಸ್ಟ್ ನಲ್ಲಿ ನಿವ್ರ ನಿಗಾವಹಿಸಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕ್ರಮ ವಹಿಸಬೇಕು. ಪ್ರವಾಸಿಗರಿಗೆ ಹಾಗೂ ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು. ನೀತಿಸಂಹಿತೆ ಪ್ರಕಾರ ದಾಖಲೆ ಇಲ್ಲದ ಹಣ, ಸಾಮಗ್ರಿ, ಚಿನ್ನಾಭರಣ, ವಸ್ತುಗಳು, ಬಟ್ಟೆ, ಗೃಹ ಉಪಯೋಗಿ ವಸ್ತುಗಳ ದಾಖಲೆಗಳನ್ನು ಕಡ್ಡಾಯವಾಗಿ ಪರಿಶೀಲನೆ ಮಾಡಬೇಕು.
ಅನುಮಾನಾಸ್ಪದ ವಸ್ತು ಸಾಕಾಣಿಕೆ ಕಂಡುಬಂದರೆ ತಕ್ಷಣ ತಡೆದು ಪರಿಶೀಲಿಸಬೇಕು. ಒಂದುವೇಳೆ ದಾಖಲೆಗಳು ಇಲ್ಲದ ವಸ್ತುಗಳು, ನಗದು ಕಂಡುಬಂದಲ್ಲಿ ಕೂಡಲೇ ವಶಕ್ಕೆ ಪಡೆಯಬೇಕು ಎಂದರು. ಈ ಸಂದರ್ಭದಲ್ಲಿ ಎಸ್ ಎಸ್ ಟಿ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಹಾಜರಿದ್ದರು