ಕಾಲುವೆಯಲ್ಲಿ ಹೂಳು: ಐನಾಪೂರ ಏತ್ ನೀರಾವರಿ ಯೋಜನೆ ಸ್ಥಗಿತ ಯೋಜನೆ ಪ್ರಾರಂಭವಾಗದಿದ್ದರೆ, ಉಗ್ರ ರಸ್ತೆ ತಡೆ: ರೈತ ಮುಖಂಡರ ಎಚ್ಚರಿಕೆ
ಕಾಲುವೆಯಲ್ಲಿ ಹೂಳು: ಐನಾಪೂರ ಏತ್ ನೀರಾವರಿ ಯೋಜನೆ ಸ್ಥಗಿತ
ಯೋಜನೆ ಪ್ರಾರಂಭವಾಗದಿದ್ದರೆ, ಉಗ್ರ ರಸ್ತೆ ತಡೆ: ರೈತ ಮುಖಂಡರ ಎಚ್ಚರಿಕೆ
ಕಾಗವಾಡ 03: ಕೇವಲ 4 ದಿನಗಳ ಹಿಂದೆ ಪ್ರಾರಂಭಿಸಿದ, ಐನಾಪೂರ ಏತ್ ನೀರಾವರಿ ಯೋಜನೆ ನದಿಯಲ್ಲಿ ನೀರಿನ ಪ್ರಮಾಣ ಇಳಿಮುಖವಾಗಿದ್ದರಿಂದ ಯೋಜನೆ ಸ್ಥಗಿತಗೊಂಡಿದೆ. ಯೋಜನೆ ಸ್ಥಗಿತಗೊಂಡಿದ್ದರಿಂದ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರೈತ ಮುಖಂಡ ಉತ್ತಮಣ್ಣಾ ಪಾಟೀಲ, ರವೀಂದ್ರ ಗಾಣಿಗೇರ ಸೇರಿದಂತೆ ರೈತರು ಯೋಜನೆಗೆ ಭೇಟಿ ನೀಡಿ, ಬರುವ 4 ದಿನಗಳಲ್ಲಿ ಯೋಜನೆ ಪ್ರಾರಂಭವಾಗದೆ ಇದ್ದರೆ, ಕಾಗವಾಡ-ಅಥಣಿ ರಾಜ್ಯ ಹೆದ್ದಾರಿ ಮೇಲಿನ ಮುರಗುಂಡಿ ಹತ್ತಿರ ಉಗ್ರವಾದ ರಸ್ತೆ ತಡೆ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಸಂಜೆ ಐನಾಪೂರ ಏತ್ ನೀರಾವರಿ ಯೋಜನೆಯ ನದಿ ತೀರದ ಜಾಕವೇಲ್, ನದಿ ನೀರು ಇಲ್ಲಿಯ ಸ್ಥಿತಿಗತಿ ವೀಕ್ಷಣೆ ಮಾಡಿದ ಬಳಿಕ, ರೈತ ಮುಖಂಡರಾದ ಉತ್ತಮಣ್ಣಾ ಪಾಟೀಲ, ಐನಾಪೂರ ಪಟ್ಟಣ ಪಂಚಾಯತಿ ಉಪಾಧ್ಯಕ್ಷರು ಹಾಗೂ ರೈತ ಮುಖಂಡರಾದ ರವೀಂದ್ರ ಗಾಣಿಗೇರ, ಈ ನೀರಾವರಿ ಯೋಜನೆಯ ಹೋರಾಟಗಾರ ಮಲ್ಲಪಣ್ಣಾ ಚುಂಗ್ ಇವರು ಅವ್ಯವಸ್ಥೆ ಕಂಡು, ನಿರಾಸೆ ವ್ಯಕ್ತಪಡಿಸಿದರು.
ಕಾಗವಾಡ ತಾಲೂಕಿನ ಕೆಂಪವಾಡ, ಮದಭಾವಿ, ಜಂಬಗಿ ಸೇರಿದಂತೆ ಅನೇಕ ಗ್ರಾಮದ ರೈತರಿಗಾಗಿ, ಈ ಯೋಜನೆ ಪ್ರಾರಂಭಿಸಿದ್ದು. ಆಗಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣಾ, ನೀರಾವರಿ ಸಚಿವ ಎಚ್.ಕೆ.ಪಾಟೀಲ ಇವರ ಪ್ರೇರಣೆಯಿಂದ ಯೋಜನೆ ರೂಪ ತಾಳಿದೆ.
ಆದರೆ ನೀರಾವರಿ ಇಲಾಖೆ ಅಧಿಕಾರಿಗಳ ತೀವ್ರ ನಿರ್ಲಕ್ಷತೆಯಿಂದ ಯೋಜನೆ ಹಾಳಾಗುತ್ತಿದೆ. ಪ್ರತಿ ವರ್ಷ ನದಿಗೆ ನೀರು ಬಂದಾಗ ಈ ಪರಿಸರದಲ್ಲಿ ನೀರು ಕಾಲುವೆ ಮುಖಾಂತರ ಹರಿಸುವದಿದೆ. ಸರಕಾರದ ಸಚಿವರು ಮೇಲಾಧಿಕಾರಿಗಳು, ಅನುದಾನದ ವ್ಯವಸ್ಥೆ ಮಾಡಿದ್ದರು.
ಇಲ್ಲಿಯ ಇಲಾಖೆ ಅಧಿಕಾರಿಗಳು ಬೇಸಿಗೆಯಲ್ಲಿ, ಕಾಲಹರಣ ಮಾಡುತ್ತಿದ್ದಾರೆ. ನದಿಯಿಂದ ನೀರು ಸೆಳೆಯುವ ಜಾಕವೇಲ್ವರೆಗೆ ಕೋರೆದ ಕೆನಾಲ್ನಲ್ಲಿ, ನೀರು ಹರಿದು ಬರುತ್ತಿಲ್ಲಾ. ಇದರ ಮಾಹಿತಿ ಅಧಿಕಾರಿಗಳಿಗೆ ಇದೆ. ಅಧಿಕಾರಿಗಳು ಕೇವಲ ಸಂಬಳಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜೂನ್ ತಿಂಗಳು ಮಳೆಬಾರದೆ ಇದಿದ್ದರಿಂದ, ರೈತರು ತ್ತನೆ ಮಾಡಿಲ್ಲಾ.
ಜುಲೈ ತಿಂಗಳಿನಲ್ಲಿ ಯೋಜನೆ ನೀರು ಬಳಿಸಿ, ಬಿತ್ತನೆ ಮಾಡುವ ಪ್ರಯತ್ನದಲ್ಲಿದ್ದರು. ನೀರಿಲ್ಲದೆ ಯೋಜನೆ ಸ್ಥಗಿತಗೊಂಡಿದೆ. ಇದರಿಂದ ರೈತರು ರೊಚ್ಚಿಗೆ ಎದ್ದಿದ್ದು. ರಸ್ತೆ ತಡೆ ಮಾಡುವ ವಿಚಾರ ವ್ಯಕ್ತಪಡಿಸಿದ್ದಾರೆ.
ರೈತ ಮುಖಂಡರಾದ ಮಲ್ಲಪ್ಪಾ ಚುಂಗ್, ರಮೇಶ ತೇಲಿ, ಸುಧಾಕರ್ ಮಾಳಿ, ಕುಮಾರ ಮಾಳಿ ಸೇರಿದಂತೆ ಅನೇಕ ರೈತರು ಪಾಲ್ಗೊಂಡಿದ್ದರು.
ಫೋಟೊ ಶಿಷರ್ಿಕೆ: 02