ಬೀಜೋಪಚಾರ ತರಬೇತಿ ಕಾರ್ಯಕ್ರಮಕ್ಕೆ ನಿರ್ದೇಶಕ ಎಸ್ ಬಿ ಪಾಟೀಲ್ ಚಾಲನೆ
ಸಿರುಗುಪ್ಪ : ಪ್ರಸಕ್ತ ಸಾಲಿನ ಮುಂಗಾರು ಮಳೆ ವಿಳಂಬವಾಗಿದೆ ಬಿತ್ತನೆ ಕುಂಠಿತವಾಗಿದೆ ಮೂರು ಅಥವಾ ನಾಲ್ಕನೇ ವಾರದಲ್ಲಿ ಮುಂಗಾರು ಪ್ರವೇಶವಾಗುವ ನಿರೀಕ್ಷೆ ಇದೆ ರೈತರು ತಮ್ಮ ಜಮೀನುಗಳನ್ನು ಹದ ಮಾಡಿ ಇಟ್ಟುಕೊಳ್ಳಬೇಕು ಸಹಾಯ ಕೃಷಿ ನಿರ್ದೇಶಕ ಎಸ್ ಬಿ ಪಾಟೀಲ್ ಹೇಳಿದರು ತಾಲೂಕಿನ ಸಿರಿಗೇರಿ ಗ್ರಾಮದ ನಾಗನಾಥೇಶ್ವರ ದೇವಸ್ಥಾನ ಸಭಾಂಗಣದಲ್ಲಿ ಕೃಷಿ ಇಲಾಖೆಯಿಂದ ಹಮ್ಮಿಕೊಂಡ ಬೀಜೋಪಚಾರ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಹೇಶ್, ತೋಟಗಾರಿಕೆ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು ಕೃಷಿ ಅಧಿಕಾರಿ ಹೇಮಲ ನಾಯಕ್ , ತೋಟಗಾರಿಕೆ ಇಲಾಖೆ ಅಧಿಕಾರಿ ಗೋಪಿ ನಾಯಕ್, ಬಿಟಿಎಂ ಹರೀಶ್, ಎಟಿಎಂ ಸಾಯಿ, ಕೃಷಿ ಸಖಿ ಕೆಂಚಮ್ಮ, ನಬಿಸಾಬ್, ಅನುವುಗಾರರಾದ ಜೆ ಎರೀ ಸ್ವಾಮಿ, ಬಿ ಲಕ್ಷ್ಮೀಶ ಮತ್ತು ವಿವಿಧ ಗ್ರಾಮಗಳ ರೈತರು ಭಾಗವಹಿಸಿದ್ದರು