ಮಹಲಿಂಗಪುರ

ಸರ್ಕಾರದಿಂದ ಬಂದ ಆದೇಶ ಪತ್ರ ತೆಗೆದುಕೊಂಡ ಕೂಡಲೇ ಮನೆ ಪ್ರಾರಂಭ ಮಾಡಿ

ಸರ್ಕಾರದಿಂದ ಬಂದ ಆದೇಶ ಪತ್ರ ತೆಗೆದುಕೊಂಡ ಕೂಡಲೇ ಮನೆ ಪ್ರಾರಂಭ ಮಾಡಿ

ಪುರಸಭೆಯಲ್ಲಿ ಮನೆ ಮಂಜೂರಾತಿ ಹಾಗೂ ಕಾಮಗಾರಿ ಆದೇಶ ಪತ್ರ ವಿತರಣೆ ಕಾರ್ಯಕ್ರಮ

ಮಹಾಲಿಂಗಪುರ : ಪುರಸಭೆಯಲ್ಲಿ ಮನೆಕಟ್ಟಲು ಅರ್ಜಿ  ಹಾಕಿ ಆದೇಶ ಪತ್ರ ಬಂದ ತಕ್ಷಣದಿಂದಲೇ ನೀವು ಮನೆ ಕಟ್ಟಿಕೊಳ್ಳುವ ಕೆಲಸ ಮಾಡಬೇಕು ಇಲ್ಲದಿದ್ದರೆ ನಿಮಗೆ ಅದು ಅವಶ್ಯಕತೆ ಇಲ್ಲ ಎಂದು ತಿಳಿದು ಬಂದ ಹಣ ವಾಪಸ ಹೋಗಿಬಿಡುತ್ತದೆ ಕಾರಣ ಫಲಾನುಭವಿಗಳು ಮನೆ ಕಟ್ಟಲು ಪ್ರಾರಂಬಿಸಿ, ಮನೆ ಕಂತಿನ ಹಣ ತಾನಾಗಿಯೇ ಬರುತ್ತದೆ ಎಂದರು. 

   ಪುರಸಭೆ ಆವರಣದಲ್ಲಿ ಸನ್ 2021-22 ಸಾಲೀನ ಹೆಚ್ಚುವರಿ ವಾಜಪೇಯ ನಗರ ವಸತಿ ಯೋಜನೆ ಮತ್ತು ಡಾ.ಬಿ.ಆರ್ ಅಂಬೇಡ್ಕರ ನಿವಾಸ ಯೋಜನೆಯಡಿ 125 ಮನೆ ಮಂಜೂರಾತಿ  ಹಾಗೂ ಕಾಮಗಾರಿ ಆದೇಶ ಪತ್ರವನ್ನು ಫಲಾನುಭವಿಗಳಿಗೆ ವಿತರಣೆ ಮಾಡಿ ಮಾತನಾಡಿದ ಅವರು2021-22 ನೇ ಸಾಲೀನ ಸ್ಥಳೀಯ ನಿಧಿ 5% ಯೋಜನೆಯಲ್ಲಿ ವಿಶೇಷ ವಿಕಲಚೇತನರಿಗೆ ಫೋಷನಾ ಭತ್ಯಯನ್ನು 27 ಜನರಿಗೆ ಚಕ್ ವಿತರಣೆ ಮಾಡಲಾಗಿದೆ. ಮತ್ತು ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ಮಾರಾಟ ಪ್ರಮಾಣ ಪತ್ರವನ್ನು 270 ಜನರಿಗೆ ವಿತರಣೆ ಮಾಡಲಾಗಿದೆ. ಇನ್ನೂ ಯಾರಾದರು ಜಾಗಿ ಇದ್ದು ಮನೆ ಕಟ್ಟಲಾಗದವರು, ಮತ್ತು ಮನೆ ಬಿದ್ದು ಹೋಗಿರುವುವರು ಕೂಡಲೇ ಅಜರ್ಿನೀಡಿ ನಿಮಗೂ ಸಹ ಮನೆ ಕಟ್ಟಿಸಿಕೊಳ್ಳಲು ನಮ್ಮ ಸರ್ಕಾರ ಸಹಾಯ ಮಾಡುತ್ತದೆ.

ಒಟ್ಟಿನಲ್ಲಿ ನಿಮ್ಮ ಯಾವುದೇ ಸಮಸ್ಯೆಗಳಿಗೆ ನಾನು ಸ್ಪಂದಿಸಲು ಸಿದ್ದು ಆದರೆ ನೀವು ಸುಮ್ಮನೆ ಮನೆಲಿ ಕುಳಿತು ಸರ್ಕಾರ ಯೋಜನೆಗಳ ನಮಗೆ ಸಿಕ್ಕಿಲ್ಲ ಎಂದು ತಿಳಿಯದೆ ನಮ್ಮನ್ನು ಸಂಪರ್ಕ ಮಾಡಿ ನಿಮ್ಮ ಸಮಸ್ಯೆಗಳ ನಿವಾರಣೆಗಾಗಿ ನಾವು ಯಾವತ್ತು ಸಿದ್ದರಿದ್ದೇವೆ, ಅಂಗವಿಕಲರಿಗೆ ಹಿಂದಿನ ಸರ್ಕಾರದಲ್ಲಿ ಬರೀ ಮೂರು % ಇತ್ತು ಈಗ ನಮ್ಮ ಸರ್ಕಾರ ನಿಮ್ಮ ಏಳ್ಗೆಯನ್ನು ಮನದಲ್ಲಿಟ್ಟುಕೊಂಡು ಶೇ 5  ಮಾಡಿದೆ ಇದರ ಸದುಪಯೋಗ ಮಾಡಿಕೊಳ್ಳಿ, ಅಲ್ಲದೆ ಇಗಾಗಲೆ ಸುಮಾರು 15 ಕೋಟಿ ನಗರೋತ್ತಾನದಲ್ಲಿ ಬಂದಿದ್ದು ಆಗಲೇ ಟೆಂಡರ ಕರೆದಿದ್ದು. ಅವುಗಳ ಕೆಲಸವು ಕೂಡಾ ಪ್ರಾರಂಭದ ಹಂತದಲ್ಲಿವೆ, ಅಲ್ಲದೆ ಕುಡಿಯುವ ನೀರಿನ ತೊಂದರೆಯಾಗದಂತೆ ಮುಂಜಾಗೃತವಾಗಿ ಬೋರುಗಳನ್ನು ಕೊರೆಸಲಾಗಿದೆ ಈಗ ನೀರಿನ ಸೌಕರ್ಯವು ಹೆಚ್ಚಾಗಿದೆ ಎಂದರು. 

ನಂತರ ಮಾತನಾಡಿದ ಪುರಸಭೆ ಅಧ್ಯಕ್ಷ ಬಸವರಾಜ ಹಿಟ್ಟಿನಮಠ ನಮ್ಮ ಸರ್ಕಾರ ಪ್ರತಿವರ್ಷ ಬಡವರ ಉದ್ದಾರಕ್ಕಾಗಿಯೇ ಸಾಕಷ್ಟು ಯೋಜನೆಗಳನ್ನು ತರುತ್ತಿದ್ದು. ಅದರ ಸಂಪೂರ್ಣ ಉಪಯೋಗವನ್ನು ನೀವು ಮಾಡಿಕೊಳ್ಳಬೇಕು.ಯಾರಿಗೆ ಮನೆಯೂ ಇಲ್ಲ, ಜಾಗೆಯೂ ಇಲ್ಲ ಅಂತವರಿಗೂ ಮನೆ ಕಟ್ಟಿಕೊಡುವ ಕೆಲಸ ನಮ್ಮ ಸರ್ಕಾರ ಮಾಡುತ್ತಿದೆ.ಒಟ್ಟಿನಲ್ಲಿ ನಮ್ಮದು ಜನಪರ ಆಡಳಿತ ಬಡವರ, ದೀನ ದಲೀತರ ಅಬ್ಯುದಯಕ್ಕಾಗಿ ನಾವು ಸಾದಾ ಕೆಲಸ ಮಾಡಲು ಸಿದ್ದರಾಗಿದ್ದೇವೆ ಎಂದರು. 

  ಬಿಜೆಪಿ ಮುಖಂಡ ಬಸನಗೌಡ ಪಾಟೀಲ, ಪುರಸಭೆ ಸದಸ್ಯ ರಾಜು ಚಮಕೇರಿ,ಮತ್ತು ಗಣ್ಯರಾದ ಶಿವಾನಂದ ಅಂಗಡಿ,ಶಿವಲಿಂಗ ಘಂಟಿ, ಹನಮಂತ ಯರಗಟ್ಟಿ, ಮಾನಿಂಗ ಮುದ್ದಾಪೂರ, ಚನ್ನಪ್ಪ ರಾಮೋಜಿ, ಅಜರ್ುನ ಮೋಫಗಾರ, ತಿಮ್ಮಣ್ಣ ಬಂಡಿವಡ್ಡರ,ಜಮೀರ ಯಕ್ಷಂಬಿ, ಈರಪ್ಪ ಚುನಮರಿ, ಮುಖ್ಯಾಧಿಕಾರಿ ಜಗದೀಶ ಈಟಿ, ಪುರಸಭೆ ಸಿಬ್ಬಂದಿಯಾದ ಬಿ.ವಾಯ್. ಮರ್ಧಿ,ಎಸ್.ಎನ್ ಪಾಟೀಲ, ಮಾನಿಂಗ ಮುಗಳಖೋಡ, ರವಿ ಹಲಸಪ್ಪಗೋಳ,ಮಾನಿಂಗ ಗಸ್ತಿ, ರಾಮು ಮಾಂಗ ಸೇರಿದಂತೆ ಹಲವರು ಇದ್ದರು. 



ಸುದ್ದಿ ಓದಿ