ಅಮೇರಿಕದಿಂದ 13,500 ಕೋಟಿ ರೂ. ರಕ್ಷಣಾ ಮತ್ತು ಶಸ್ತ್ರಸಜ್ಜಿತ ಹೆಲಿಕಾಪ್ಟರ್ ಖರೀದಿಗೆ ಭಾರತ ನಿರ್ಧಾರ
ನವದೆಹಲಿ: ಭಾರತೀಯ ಸೇನೆಯ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂದಾಗಿದ್ದು, ಅಮೆರಿಕದಿಂದ ಸುಮಾರು 13,500 ಕೋಟಿ ರೂ. ರಕ್ಷಣಾ ಮತ್ತು ಶಸ್ತ್ರಸಜ್ಜಿತ ಹೆಲಿಕಾಪ್ಟರ್ ಖರೀದಿಗೆ ನಿರ್ಧರಿಸಿದೆ.
ರಷ್ಯಾ ಜತೆ ಎಸ್-400 ಟ್ರಂಪ್ ಕ್ಷಿಪಣಿ ಖರೀದಿಯ ಬೆನ್ನಲ್ಲೇ ಅಮೆರಿಕದ ಮುನಿಸಿಗೆ ಕಾರಣವಾಗಿದ್ದ ಭಾರತ, ಇದೀಗ ಟ್ರಂಪ್ ಸರಕಾರದ ಜತೆ ನೇರವಾಗಿ ಮತ್ತೊಂದು ರಕ್ಷಣಾ ಖರೀದಿಗೆ ಮುಂದಾಗಿದೆ.
ಅಮೆರಿಕದ ಸಿಕೋಸ್ಕಿ ಲಾಕ್ ಹೀಡ್ ಮಾರ್ಟಿನ್ ನಿರ್ಮಾಣದ ಬಹುಪಯೋಗಿ ಎಂಎಚ್-60 ರೋಮಿಯೋ ಹೆಲಿಕಾಪ್ಟರ್ ಗಳನ್ನು ಭಾರತ ಖರೀದಿಸಲು ಮುಂದಾಗಿದ್ದು, ಈ ಚಾಪರ್ ಗಳು ಟಾರ್ಪೆಡೋ ಮತ್ತು ಕ್ಷಿಪಣಿ ವ್ಯವಸ್ಥೆಯನ್ನು ಹೊಂದಿವೆ. ಅಂತೆಯೇ ಆಗಸದಿಂದಲೇ ಶತೃಪಾಳಯದ ಜಲಾಂತರ್ಗಾಮಿ ನೌಕೆಗಳನ್ನು ಕಂಡು ಹಿಡಿದು ದಾಳಿ ನಡೆಸುವ ಸಾಮರ್ಥ್ಯ ಹೊಂದಿವೆ.
ಈ ಹೆಲಿಕಾಪ್ಟರ್‌ಗಳ ಖರೀದಿಗೆ ಮುಂದಾಗಿರುವ ಭಾರತ, ಅವುಗಳನ್ನು 2020-2024ರೊಳಗಾಗಿ ಒದಗಿಸಿಕೊಡುವಂತೆ ಬೇಡಿಕೆ ಸಲ್ಲಿಸಲಿದೆ ಎನ್ನಲಾಗಿದೆ. ಈಗಾಗಲೇ ಸಾಗರದಲ್ಲಿ ಚೀನಾದ ಜಲಾಂತರ್ಗಾಮಿ ನೌಕೆಗಳು ನಿರಂತರ ಕಣ್ಗಾವಲು ಇರಿಸಿದ್ದು, ದೇಶದ ಜಲಪರಿಧಿಯನ್ನೂ ಪ್ರವೇಶಿಸಲು ಯತ್ನಿಸುತ್ತವೆ. ಹೀಗಾಗಿ ಚೀನಾದ ಹಾರಾಟಕ್ಕೆ ಮಿತಿ ಹಾಕಲು ಮತ್ತು ದೇಶದ ಸಾಗರ ರಕ್ಷಣೆ, ನೌಕಾಪಡೆಯ ಬಲವರ್ಧನೆಗೆ ಎಂಎಚ್-60 ಬಹುಪಯೋಗಿ ಹೆಲಿಕಾಪ್ಟರ್ ನ ಅವಶ್ಯಕತೆಯಿದೆ ಎನ್ನಲಾಗಿದೆ.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 