ದೇವಲಾಪುರ ವಿದ್ಯುತ್ ಆಕಸ್ಮಿಕ ಬೆಂಕಿ ಭತ್ತದ ಮೇವು ಬಣವೆಗಳು ಭಸ್ಮ
ಸಿರುಗುಪ್ಪ : ತಾಲೂಕಿನ ಹೊಸ ದೇವಲಾಪುರ ಗ್ರಾಮದ ಗೋಪಾಲ್ ರಾವ್ ಅವರ ಖಾಲಿ ನಿವೇಶನದಲ್ಲಿ ರೈತರಾದ ನರಸ ರೆಡ್ಡಿ ಮತ್ತು ರಾಮಣ್ಣ ಸಂಗ್ರಹಿಸಿದ ಭತ್ತದ ಬೇವಿನ ಬಣವಿಗಳಿಗೆ ವಿದ್ಯುತ್ ಆಕಸ್ಮಿಕ ಬೆಂಕಿಯಿಂದ ಸೋಮವಾರ ಭಸ್ಮವಾಗಿವೆ ಜಾನುವಾರು ಆಹಾರಕ್ಕೆ ಖರೀದಿಸಿ ಭತ್ತದ ಮೇವನ್ನು ಸಂಗ್ರಹಿಸಿಟ್ಟಿದ್ದರು ವಿದ್ಯುತ್ ತಂತಿಗಳಿಂದ ಬಣವೆಗಳಿಗೆ ಬೆಂಕಿ ಹೊತ್ತಿಕೊಂಡಿತು ಪ್ರತ್ಯಕ್ಷ ದರ್ಶಿಗಳಿಂದ ತಿಳಿದುಬಂದಿದೆ ಈ ಘಟನೆಗೆ ಮುನ್ನ ಅತಿಯಾದ ಗಾಳಿ ಬೀಸಿ ವಿದ್ಯುತ್ ತಂತಿಗಳು ಹಾಗೂ ಗಿಡಗಳು ಒಂದಕ್ಕೊಂದು ತಗುಲಿ ಸ್ಪರ್ಶವಾಗಿತ್ತು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಎರಡು ಜಲ ವಾಹನದೊಂದಿಗೆ ಬೆಂಕಿ ನಂದಿಸಲಾಯಿತು ಎಂದು ಅಗ್ನಿಶಾಮಕ ಠಾಣಾಧಿಕಾರಿ ಆರ್ ಎಲ್ ಪೂಜಾರಿ ಅವರು ತಿಳಿಸಿದರು