ಶೈಕ್ಷಣಿಕ ತಾಂತ್ರಿಕತೆಯಿಂದ ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸ ಸಾಧ್ಯ: ಶಾಸಕ ಬಯ್ಯಾಪುರ
ಕುಷ್ಟಗಿ 18: ಖಾಸಗಿ ಶೈಕ್ಷಣಿಕ ಸಂಸ್ಥೆಗಳು ಮತ್ತು ಇನ್ನಿತರ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿರುವ ಸೌಲಭ್ಯವು ಇಂದು ಸರ್ಕಾರಿ ಶಾಲೆಗಳಲ್ಲಿ ಲಭ್ಯವಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ,ಶೈಕ್ಷಣಿಕ ತಾಂತ್ರಿಕತೆಯಿಂದ ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸ ಸಾಧ್ಯ ಎಂದು ಕುಷ್ಟಗಿ ನಗರದ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಚ್ ಕೆ ಆರ್ ಡಿ ಬಿ ವತಿಯಿಂದ ಮಂಜೂರಾದ ಸ್ಮಾರ್ಟ್ ಕ್ಲಾಸ್ ಸೌಲಭ್ಯವನ್ನು ಉದ್ಘಾಟಿಸಿ ಮಾತನಾಡಿದರು.
ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಅವಕಾಶ ವಂಚಿತ ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಲ್ಲಿದ್ದು ಅವರ ವ್ಯಕ್ತಿತ್ವವನ್ನು ವಿಕಸನಗೊಳಿಸುವ ಅವಶ್ಯವಿರುವ ಶಿಕ್ಷಣವನ್ನ ಒದಗಿಸುವುದು ಸರ್ಕಾರದ ಬಹುದೊಡ್ಡ ಜವಾಬ್ದಾರಿಯಾಗಿದೆ, ಆ ನಿಟ್ಟಿನಲ್ಲಿ ಶಾಸಕನಾಗಿ ಕುಷ್ಟಗಿ ತಾಲೂಕಿನಲ್ಲಿ 110 ಶಾಲೆಗಳಿಗೆ ಎಚ್ ಕೆ ಆರ್ ಡಿ ಬಿ ಅನುದಾನವನ್ನು ಮಂಜೂರು ಮಾಡಿಸಿ ಸ್ಮಾರ್ಟ್ ಕ್ಲಾಸ್ ಸೌಲಭ್ಯವನ್ನು ಒದಗಿಸಲಾಗಿದೆ ಎಂದರು, ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ
ಪಾಲ್ಗೊಂಡು ಮಾತನಾಡಿದ ಬಿ ಆರ್ ಪಿ ಡಾ, ಜೀವನ್ ಸಾಬ್ ವಾಲಿಕಾರ್ ಮಾತನಾಡಿ ವಿದ್ಯಾರ್ಥಿಗಳನ್ನು ಇಂದಿನ ತಾಂತ್ರಿಕ ಯುಗಕ್ಕೆ ತಕ್ಕಂತೆ ಸ್ಮಾರ್ಟ್ ಕ್ಲಾಸ್ ಸೌಲಭ್ಯವನ್ನು ಬಳಸಿ ಮಾಡುವ ಪಾಠ ಬೋಧನೆಯು ವಿದ್ಯಾರ್ಥಿಗಳ ಜ್ಞಾನವಿಕಾಸಕ್ಕೆ ಪುಷ್ಟಿ ನೀಡುವದರ ಜೊತೆಗೆ ಕ್ರಿಯಾತ್ಮಕವಾಗಿ ಸೃಜನಾತ್ಮಕವಾಗಿ ಯೋಚಿಸಲು ಸಾಧ್ಯವಾಗುತ್ತದೆ ಎಂದರು. ದೈಹಿಕ ಶಿಕ್ಷಣ ಪರೀವಿಕ್ಷಕ ನಾಗಪ್ಪ ಬಿಳಿಯಪ್ಪನವರ್ ಶಿಕ್ಷಣ ಸಂಯೋಜಕ ತಿಮ್ಮಣ್ಣ ಹಿರೇವಳಿ, ಬಿ ಆರ್ ಪಿ ಲೋಕೇಶ್, ಇನ್ನರ್ ವಿಲ್ ಕ್ಲಬ್ ದ ಅಧ್ಯಕ್ಷ ಸುಮಾ ಬ್ಯಾಳಿ ಡಾ. ಪಾರ್ವತಿ ಪಿ, ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಮುಖ್ಯೋಪಾದ್ಯನಿಯ ಜಯದೇವಿ ಉಪ್ಪಿನ, ಮಾತನಾಡಿದರು, ಸಿಆರ್ಪಿ ನಾಗರಾಜ್ ಚನ್ನಪ್ಪನವರ್ ಪ್ರಾಸ್ತಾವಿಕ ನುಡಿಗಳನ್ನಾಢಿದರು, ಪುರಸಭೆ ಸದಸ್ಯರಾದ ಶ್ರೀ ಮಾಂತೇಶ್ ಕಲಬಾವಿ, ಇನ್ನರ್ವ್ಲ್ ಕ್ಲಬ್ ದ ಸದಸ್ಯ ಶಾರದಾ ಶೆಟ್ಟರ್ ಗೌರಮ್ಮ ಕುಡತಿನಿ, ಸಿ ಆರ್ ಪಿ ಯಮನಪ್ಪ ಗುರಿಕಾರ್, ಶಾಲಾ ಶಿಕ್ಷಕರು ಹಾಜರಿದ್ದರು, ಜಿ ಡಿ ಪಾಟೀಲ್ ನಿರೂಪಿಸಿ ವಂದಿಸಿದರು