ಪ್ರತಿಭಾವಂತರು ನಮ್ಮ ದೇಶದ ಆಸ್ತಿ : ಡಾ.ಅಜಿತ ಕನಕರೆಡ್ಡಿ
ಮಹಾಲಿಂಗಪುರ16: ಪ್ರತಿಭಾವಂತರು ನಮ್ಮ ದೇಶದ ಆಸ್ತಿ, ಅವರಿಗೆ ಸೂಕ್ತ ವೇದಿಕೆಗಳ ಅವಶ್ಯಕತೆ ಇದೆ ಎಂದು ಡಾ.ಅಜಿತ ಕನಕರೆಡ್ಡಿ ಹೇಳಿದರು.
ಬುಧವಾರ ಸ್ಥಳೀಯ ಅಂಗಡಿ ಮೈದಾನದಲ್ಲಿ ಎಲ್. ಬಿ. ಬಾಯ್ಸ್ ಆಶ್ರಯದಲ್ಲಿ ಮಹಾಂತೇಶ ಭಜಂತ್ರಿ ಸ್ಮರಣಾರ್ಥ 5 ದಿನಗಳ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಎಲ್ಲ ಕ್ರಿಡಾಪಟುಗಳು ಸ್ಥಿತಿವಂತರಾಗಿರುವುದಿಲ್ಲ ಉಳ್ಳವರು ಅಂತಹ ಪ್ರತಿಭೆಗಳನ್ನು ಹೆಕ್ಕಿ ತೆಗೆದು ಸಾಧನೆ ಮಾಡಲು ತನು-ಮನ-ಧನಗಳಿಂದ ಸಹಕರಿಸಿದಾಗ ದೇಶದ ಕೀರ್ತಿ ಹೆಚ್ಚಿಸಬಲ್ಲರು ಎಂದರು
ಪ್ರಥಮ 1.25 ಲಕ್ಷ, ದ್ವಿತೀಯ 65 ಸಾವಿರ,ತೃತೀಯ 15 ಸಾವಿರ, ಚತುರ್ಥ 15 ಸಾವಿರ ಬೃಹತ್ ಬಹುಮಾನಗಳನ್ನು ಘೋಷಿಸಿದ್ದು, ರಾಜ್ಯ ಮತ್ತು ಹೊರ ರಾಜ್ಯದ ತಂಡಗಳು ಭಾಗವಹಿಸಿರುವ ಪಂದ್ಯಾವಳಿ ಫೆ. 19 ರವಿವಾರದವರೆಗೆ ಜರುಗುವುದು.
ಮಾಜಿ ಸಚಿವೆ ಉಮಾಶ್ರೀ ಭೇಟಿ ನೀಡಿ ಪ್ರೋತ್ಸಾಹಿಸಿದರು. ಡಾ.ಅಜಿತ ಕನಕರೆಡ್ಡಿ, ಮಂಜುನಾಥ ಚನ್ನಾಳ, ಪುರಸಭಾ ಸದಸ್ಯ ಜಾವೇದ ಬಾಗವಾನ, ರಮೇಶ ಕೆಸರಗೊಪ್ಪ ಪಂದ್ಯಾವಳಿಗೆ ಚಾಲನೆ ನೀಡಿದರು.
ರವಿ ಬಿದರೆ, ಮಲ್ಲು ಕುಂಬಾಳೆ, ನರಸಿಂಹ ವಡಗೇರಿ, ಎಸ್.ಡಿ.ಮಾಗಿ, ಅರುಣ ಬಂತಿ, ಅಪ್ಪಾಸಾಬ ನಾಲಬಂದ, ಸಿರಾಜ್ ಪಾಂಡು, ಪರಶುರಾಮ ಮೇತ್ರಿ,ಸದಾಶಿವ ಪೂಜಾರಿ, ಲಕ್ಕಪ್ಪ ಭಜಂತ್ರಿ, ಸಿಂಧೂರ ಭಜಂತ್ರಿ, ತುಕಾರಾಂ ಮಾದರ, ಹನುಮಂತ ಚನ್ನಾಳ, ಮೀರಾ ತಟಗಾರ, ಹನುಮಂತ ನಾವ್ಹಿ, ನಾಗರಾಜ ಭಜಂತ್ರಿ, ನಜೀರ್ ಝಾರೆ, ರಾಜು ಶೆಟ್ಟರ ಇದ್ದರು. ಅಮರ ಕೊರವಿ ಮತ್ತು ಸಾಗರ ಹೂಗಾರ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು