ಶಾಸಕರಿಂದ ಸಮುದಾಯ ಭವನ ನಿರ್ಮಾಣಕ್ಕೆ 45ಲಕ್ಷ ಭರವಸೆ.
ಮಹಾಲಿಂಗಪುರ : ಪುರಾತನ ಕಾಲದಿಂದಲೂ ಸರ್ವ ಜನಾಂಗಕ್ಕೆ ಗುರುವಾಗಿ ಮುಂಚೂಣಿ ಸ್ಥಾನದಲ್ಲಿದ್ದು ವೇದ ಉಪನಿಷತ್ತುಗಳನ್ನು ಬೋಧಿಸಿ ತಮ್ಮನ್ನು ತಾವು ಸಮಾಜಕ್ಕೆ ಅರ್ಪಿಸಿಕೊಂಡ ಕಾರ್ಯ ಶ್ರೇಷ್ಠವಾಗಿದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ಜಂಗಮ ಕ್ಷೇಮಾಭಿವೃದ್ಧಿ ಸಂಘದಿಂದ ಸ್ಥಳೀಯ ಬೃಂದಾವನ ನಗರದಲ್ಲಿ ಹಮ್ಮಿಕೊಂಡಿದ್ದ ರೇಣುಕಾಚಾರ್ಯ ಜಯಂತ್ಯುತ್ಸವ ಪ್ರಯುಕ್ತ ಸಮುದಾಯ ಭವನ ಅಡಿಗಲ್ಲಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಬಸವಣ್ಣನವರ ಸಮಾನ ಸಮಾಜದ ಕನಸಿನಂತೆ ಭಾಜಪ ಸರ್ಕಾರ ರಾಜ್ಯದ ಎಲ್ಲ ಸಮುದಾಯಗಳಿಗೆ ಅತಿ ಹೆಚ್ಚು ಅನುದಾನ ನೀಡಿ ಅವುಗಳ ಅಭಿವೃದ್ಧಿಯಲ್ಲಿ ಕೈ ಜೋಡಿಸಿದೆ. ಸಮಾಜದ ಭವನಕ್ಕೆ ? 45 ಲಕ್ಷ ಅನುದಾನ ನೀಡುವ ಭರವಸೆ ನೀಡಿದರು.
ಸಮುದಾಯದ ಮುಖಂಡ ಹಾಗೂ ಪುರಸಭಾ ಅಧ್ಯಕ್ಷ ಬಸವರಾಜ ಹಿಟ್ಟಿನಮಠ ಅವರೂ ಸಹ ಭವನ ನಿರ್ಮಾಣಕ್ಕೆ 10 ಲಕ್ಷ ನೀಡುವ ಭರವಸೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷ ಗುರುಪಾದಯ್ಯ ಚಟ್ಟಿಮಠ ಮತ್ತು ಜಿಪಂ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ ಅವರು ಶಾಸಕರು ಹಾಗೂ ಪುರಸಭೆ ಅಧ್ಯಕ್ಷರು ಸಮುದಾಯಕ್ಕೆ ನೀಡಿರುವ ಉದಾರ ದಾನಕ್ಕೆ ಅಭಿನಂದನೆ ಸಲ್ಲಿಸಿದರು.
ಮುಖ್ಯ ಅತಿಥಿಗಳಾಗಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಸನಗೌಡ ಪಾಟೀಲ, ಅಲ್ಲಪ್ಪಗೌಡ ಪಾಟೀಲ ಮತ್ತು ಅತಿಥಿಗಳಾಗಿ ಮುಖಂಡರಾದ ಜಾವೇದ ಭಾಗವಾನ, ಜಿ.ಎಸ್.ಗೊಂಬಿ, ಶೇಖರ ಅಂಗಡಿ, ಈರಣ್ಣ ಚಟ್ಟಿಮಠ, ವರದಿಗಾರ ಮಹೇಶ ಮನ್ನಯ್ಯನವರಮಠ, ಸದಾಶಿವ ಹಿರೇಮಠ, ಮಹಾಂತೇಶ ಮಣ್ಣಯ್ಯನಮಠ, ಸಾಗರ ಮಠದ, ವಿರೂಪಾಕ್ಷಯ್ಯ ಪಂಚಕಟ್ಟಿಮಠ, ಎಸ್.ಟಿ.ಮಠಪತಿ, ಚನ್ನಯ್ಯ ಬಿಸಗುಪ್ಪಿಮಠ, ಎಂ.ಜಿ.ಮಠಪತಿ, ಜಿ.ಎಸ್.ಮಠಪತಿ, ಸಂಗಯ್ಯ ವಸ್ತ್ರದ, ಈಶ್ವರ ಮಠಪತಿ, ಎಂ.ಆರ್.ಹಿರೇಮಠ, ಪ್ರಶಾಂತ ಕಡಪಟ್ಟಿ, ಮಹಾಂತೇಶ ಮಠದ, ವಿನೋದ ಕಡಪಟ್ಟಿ, ಕುಮಾರ ಮಣ್ಣಯ್ಯನವರಮಠ, ಜಿ.ಎ.ಮಠಪತಿ, ಪರಯ್ಯ ಮಠದ, ವೀರಭದ್ರ ಮಠಪತಿ, ಕೆ.ಎಸ್.ಹಿರೇಮಠ, ಆನಂದ ಮಠಪತಿ, ರವಿ ಹಿರೇಮಠ, ಅಮಿತ ಮದ್ದಿನಮಠ ಇತರರಿದ್ದರು.
ಸುಧಾರಾಣಿ ಮಠದ ಪ್ರಾರ್ಥಿಸಿ, ಎಂ. ಎಸ್. ಮಠದ ಸ್ವಾಗತಿಸಿ, ಪತ್ರಕರ್ತ ನಾರನಗೌಡ ಉತ್ತಂಗಿ ನಿರೂಪಿಸಿ, ಗುರುಲಿಂಗಯ್ಯ ಮಠಪತಿ ವಂದಿಸಿದರು