ವಲಯ ಮಟ್ಟದ ಕ್ರೀಡಾಕೂಟ ಸಮಾರಂಭ
ಲೋಕದರ್ಶನ ವರದಿ
ಮುಂಡಗೋಡ:ತಾಲೂಕಿನ ಇಂದೂರ ಗ್ರಾಮದ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ, ಸಾಕ್ಷರತಾ ಇಲಾಖೆ, ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಸಮೂಹ ಸಂಪನ್ಮೂಲ ಕೇಂದ್ರ ಮತ್ತು ಇಂದೂರ ಪ್ರೌಢಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ 2022-23ನೇ ಸಾಲಿನ ಇಂದೂರ ವಲಯ ಮಟ್ಟದ ಕ್ರೀಡಾಕೂಟ ಸಮಾರಂಭ ಜರುಗಿತು.
ಗ್ರಾ.ಪಂ.ಅಧ್ಯಕ್ಷೆ ರೇಣುಕಾ ಬಡಿಗೇರ ಕಾರ್ಯಕ್ರಮ ಉದ್ಘಾಟಿಸಿದರು. ಕೃಷ್ಣ ಗುಜಮಾಗಡಿ ಮತ್ತು ಶೈಲೇಶ ನಾಯ್ಕ ಕ್ರೀಡಾ ಜ್ಯೋತಿ ಬೆಳಗಿಸಿದರು. ನಿವೃತ್ತ ದೈಹಿಕ ಶಿಕ್ಷಕ ಕೆ.ಪಿ.ಆನಂದಪ್ಪಗೌಡ್ರ ಪ್ರತಿಜ್ಞಾ ವಿಧಿ ಭೋದಿಸಿದರು. ಧಾರವಾಡ ಕ.ವಿ.ಶಿ. ಸಂಸ್ಥೆ ಉಪಾಧ್ಯಕ್ಷ ಬಿ.ಕೆ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಲ್ಲೇಶಿ ಸುಣಗಾರ, ರವಿ ದುಗ್ಗಳ್ಳಿ, ಪಿ.ಜಿ.ತಂಗಚ್ಚನ್, ಬಿಷ್ಠನಗೌಡ ಪಾಟೀಲ, ಗಂಗಾಧರ ಬಡಿಗೇರ, ಅಶೋಕ ತಡಸದ, ಮಹಮ್ಮದ್ರಫೀಕ್ ದೇಸಳ್ಳಿ, ಯಲ್ಲಪ್ಪ ಕದಂ, ಎಸ್.ಎಚ್. ಕಾಳೆ, ಶಿವಯೋಗಿ ಸವದತ್ತಿ, ಆರೋಗ್ಯ ಇಲಾಖೆ ಸಿಬ್ಬಂದಿ, ಶಿಕ್ಷಕರು ಮತ್ತು ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.
10ನೇ ತರಗತಿ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. 8ನೇ ತರಗತಿ ವಿದ್ಯಾರ್ಥಿನಿಯರು ಸ್ವಾಗತ ಗೀತೆ ಹಾಡಿದರು. ಅಶ್ವಿನಿ ಇಚ್ಚಂಗಿ ಸ್ವಾಗತಿಸಿದರು. ಎಸ್.ಎಸ್.ಅಂಗಡಿ ಕಾರ್ಯಕ್ರಮ ನಿರೂಪಿಸಿದರು. ಮಧುಮತಿ ಹಿರೇಮಠ ವಂದಿಸಿದರು.