ಅಂತರರಾಷ್ಟ್ರೀಯ

ಜಪಾನ್‌ನ ಹೊಸ ಪ್ರಧಾನಿಯಾಗಿ ಯೊಶಿಹಿಡೆ ಅಧಿಕೃತ ಆಯ್ಕೆ

ಜಪಾನ್‌ನ ಹೊಸ ಪ್ರಧಾನಿಯಾಗಿ ಯೊಶಿಹಿಡೆ ಅಧಿಕೃತ ಆಯ್ಕೆ

ಟೋಕಿಯೊ, ಸೆಪ್ಟೆಂಬರ್ 16: ಜಪಾನ್‌ನ ಪ್ರಧಾನ ಮಂತ್ರಿಯಾಗಿ ಯೊಶಿಹಿಡೆ ಸುಗಾ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ.

ನಿರ್ಗಮಿತ ಪ್ರಧಾನಿ ಶಿಂಜೊ ಅಬೆ ಅವರ ಮುಖ್ಯ ಸಂಪುಟ ಕಾರ್ಯದರ್ಶಿಯಾಗಿದ್ದ ಸುಗಾ ಅವರನ್ನು ಸಂಸತ್ತಿನ ಕೆಳಮನೆ ಚುನಾಯಿಸಿದೆ. ಕೆಳಮನೆಯಲ್ಲಿ ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಕ್ಷ ಬಹುಮತ ಹೊಂದಿದೆ.

ಜಪಾನ್‌ನ ಆರ್ಥಿಕ ಸ್ಥಿತಿಯು ಮುಖ್ಯವಾಗಿ ಕೋವಿಡ್‌ನ ಸಮಯದಲ್ಲಿ  ದೊಡ್ಡ ಸವಾಲು ಎದುರಿಸುತ್ತಿದ್ದು, ಇದಕ್ಕೆ ಆರ್ಥಿಕ ಕಾರ್ಯತಂತ್ರವನ್ನು ಒಳಗೊಂಡಂತೆ ಅಬೆ ಅವರು ಜಾರಿಗೆ ಅನೇಕ ಕಾರ್ಯಕ್ರಮಗಳನ್ನು ಮುಂದುವರಿಸುವುದಾಗಿ ಸುಗಾ ವಾಗ್ದಾನ ಮಾಡಿದ್ದಾರೆ. 

ಮಂಗಳವಾರ ಬೆಳಿಗ್ಗೆ ನಿರ್ಗಮಿತ ಜಪಾನ್‍ ಪ್ರಧಾನಿ ಶಿಂಜೊ ಅಬೆ ಅವರ ಸಚಿವ ಸಂಪುಟ ವಿಸರ್ಜನೆಗೊಂಡಿತು. ಇದರೊಂದಿಗೆ  ಅಬೆ ಅವರ ಸುಮಾರು ಎಂಟು ವರ್ಷಗಳ ದಾಖಲೆಯ ಆಡಳಿತಾವಧಿ ಕೊನೆಗೊಂಡಿದೆ.

ಈ ವಾರ ನಡೆದ ಪಕ್ಷದ ಚುನಾವಣೆಯಲ್ಲಿ ಸುಗಾ ಗೆಲುವು ಖಚಿತಪಡಿಸುವಲ್ಲಿ ಅವರ ಬೆಂಬಲಕ್ಕೆ ನಿರ್ಣಾಯಕವಾಗಿದ್ದ ಅಬೆ, ತಮ್ಮ ಅಧಿಕಾರಾವಧಿಯ ಕೊನೆಯ ದಿನದಂದು ಪ್ರಧಾನಿ ಕಚೇರಿಗೆ ಪ್ರವೇಶಿಸಿ ಜಪಾನ್ ಜನರಿಗೆ ಧನ್ಯವಾದಗಳನ್ನು ಅರ್ಪಿಸಿದರು.  ಸಂಸತ್‍ನ ಸದಸ್ಯರಾಗಿ ಹೊಸ ಸರ್ಕಾರವನ್ನು ಸಂಪೂರ್ಣವಾಗಿ ಬೆಂಬಲಿಸುವುದಾಗಿ ಅಬೆ ವಾಗ್ದಾನ ಮಾಡಿದ್ದಾರೆ ಎಂದು ಸಿಎನ್‌ಬಿಸಿ ವರದಿ ಮಾಡಿದೆ.  


ಸುದ್ದಿ ಓದಿ