ಎಲಬುರ್ಗ

ಯಲಬುರ್ಗಾ ಪೊಲೀಸ್ ಠಾಣೆ: ಕಾಣೆಯಾದವರ ಪತ್ತೆಗೆ ಸಹಕರಿಸಲು ಮನವಿ

ಯಲಬುರ್ಗಾ ಪೊಲೀಸ್ ಠಾಣೆ: ಕಾಣೆಯಾದವರ ಪತ್ತೆಗೆ ಸಹಕರಿಸಲು ಮನವಿ

ಕೊಪ್ಪಳ ಜೂನ್ 30: ಯಲಬುರ್ಗಾ ಪಟ್ಟಣ ಹಾಗೂ ಯಲಬುರ್ಗಾ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಕಾಣೆಯಾದ ವ್ಯಕ್ತಿಗಳ ಕುರಿತು ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. 

ಪ್ರಕರಣ-1: ಗುನ್ನೆ ನಂ: 71/2024 

ಯಲಬುರ್ಗಾ ತಾಲ್ಲೂಕಿನ ಬಂಡಿ ಗ್ರಾಮದ ನಿವಾಸಿ ಕಲ್ಲಪ್ಪ ಬಸಪ್ಪ ತೊಂಡಿಹಾಳ ಎಂಬ 47 ವರ್ಷದ ವ್ಯಕ್ತಿಯು 2023 ರ ಅಕ್ಟೋಬರ್ 18 ರಿಂದ ಕಾಣೆಯಾಗಿದ್ದು, ಈವರೆಗೂ ಪತ್ತೆಯಾಗಿರುವುದಿಲ್ಲ. ವ್ಯಕ್ತಿಯು 5 ಅಡಿ ಎತ್ತರ, ಸದೃಢ ಮೈಕಟ್ಟು, ಸಾದಾಗೆಂಪು ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾದಾಗ ಶರ್ಟ್‌ ಮತ್ತು ಪ್ಯಾಂಟ್ ಧರಿಸಿದ್ದರು. 

ಪ್ರಕರಣ-2: ಗುನ್ನೆ ನಂ: 70/2025 

ಯಲಬುರ್ಗಾ ತಾಲ್ಲೂಕಿನ ಮಲಕಸಮುದ್ರ ಗ್ರಾಮದ ಕಲ್ಲಪ್ಪ ಭೀಮಪ್ಪ ಕಲ್ಲೂರು ಎಂಬ 56 ವರ್ಷದ ವ್ಯಕ್ತಿಯು 2023 ರ ಮೇ 15 ರಿಂದ ಕಾಣೆಯಾಗಿದ್ದು, ಈವರೆಗೂ ಪತ್ತೆಯಾಗಿರುವುದಿಲ್ಲ. ವ್ಯಕ್ತಿಯು 5 ಅಡಿ ಎತ್ತರ, ಸದೃಢ ಮೈಕಟ್ಟು, ಸಾದಾಗೆಂಪು ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾದಾಗ ಅಂಗಿ ಮತ್ತು ಲುಂಗಿ ಧರಿಸಿದ್ದರು. 

ಪ್ರಕರಣ-3: ಗುನ್ನೆ ನಂ: 90/2025 

ಯಲಬುರ್ಗಾ ತಾಲ್ಲೂಕಿನ ಮಲಕಸಮುದ್ರ ಗ್ರಾಮದ ದ್ಯಾಮಣ್ಣ ಲಕ್ಕಪ್ಪ ಗುರಿಕಾರ ಎಂಬ 55 ವರ್ಷದ ವ್ಯಕ್ತಿಯು 2020 ರ ಫೆಬ್ರವರಿ 21 ರಿಂದ ಕಾಣೆಯಾಗಿದ್ದು, ಈವರೆಗೂ ಪತ್ತೆಯಾಗಿರುವುದಿಲ್ಲ. ವ್ಯಕ್ತಿಯು 5 ಅಡಿ ಎತ್ತರ, ಸದೃಢ ಮೈಕಟ್ಟು, ಸಾದಾಕೆಂಪು ಮೈ ಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾದಾಗ ಅಂಗಿ, ದೋತರ ಧರಿಸಿದ್ದರು. 

ಮೇಲ್ಕಂಡ ಚಹರೆಯ ವ್ಯಕ್ತಿಗಳ ಕುರಿತು ಯಾರಿಗಾದರೂ ಮಾಹಿತಿ ಇದ್ದಲ್ಲಿ ಅಥವಾ ದೊರೆತಲ್ಲಿ ಯಲಬುರ್ಗಾ ಪೊಲೀಸ್ ಠಾಣೆ ಪಿಎಸ್‌ಐ ದೂ.ಸಂ: 08534-220133, 9480803749, ಕೊಪ್ಪಳ ಕಂಟ್ರೋಲ್ ರೂಂ: 08539-220222 ಸಂಪರ್ಕಿಸಿ ಮಾಹಿತಿ ನೀಡಬೇಕು. ಕಾಣೆಯಾದ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಿದಲ್ಲಿ ನಗದು ಬಹುಮಾನ ನೀಡಲಾಗುವುದು ಎಂದು ಯಲಬುರ್ಗಾ ಪೊಲೀಸ್ ಠಾಣೆ ಪಿಎಸ್‌ಐ ಪ್ರಕಟಣೆಯಲ್ಲಿ ಕೋರಿದ್ದಾರೆ. 


ಸುದ್ದಿ ಓದಿ