ಯಡಿಯೂರಪ್ಪ ಎಂದಿಗೂ 5 ವರ್ಷ ಸರ್ಕಾರ ಪೂರೈಸಲೇ ಇಲ್ಲ: ಸಿದ್ದರಾಮಯ್ಯ
ಬೆಂಗಳೂರು,ಜು.26 ಯಡಿಯೂರಪ್ಪ ಎಂದಿಗೂ ಪೂರ್ಣಪ್ರಮಾಣದಲ್ಲಿ ಸಿಎಂ ಆಗಲೇ ಇಲ್ಲ. ಬಿಜೆಪಿ ಎಲ್ಲಿಯೂ ಸರಳ ಬಹುಮತದಿಂದ ಅಧಿಕಾರಕ್ಕೆ ಬರಲೇ ಇಲ್ಲ.ಯಡಿಯೂರಪ್ಪ ಎಂದಿಗೂ 5 ವರ್ಷ ಸರ್ಕಾರ ಪೂರೈಸಲೇ ಇಲ್ಲ. ಅವರೊಬ್ಬ ಭ್ರಷ್ಟ ಮುಖ್ಯಮಂತ್ರಿ ಎನ್ನುವುದು ನಿಜ. ಯಡಿಯೂರಪ್ಪ ರಾಜೀನಾಮೆ ನೀಡಿದರು ಎನ್ನುವ ಕಾರಣಕ್ಕೆ ಅವರು ಭ್ರಷ್ಟ ಸಿಎಂ ಅಲ್ಲ ಎಂದು ಹೇಳಲು ಆಗದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಯಾರೇ ಸಿಎಂ ಆದರೂ ಇದು ಭ್ರಷ್ಟಸರ್ಕಾರವೇ. ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದು ಹೋಗಿದೆ.ನಾವಿಬ್ಬರೂ 1983 ರಲ್ಲಿ ಯಡಿಯೂರಪ್ಪ ನಾನು ಇಬ್ಬರೂ ವಿಧಾನಸಭೆಗೆ ಒಟ್ಟಿಗೆ ಬಂದವರು.104 ಸ್ಥಾನ ಗೆದ್ದಿದ್ದರು. ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಹಣಕೊಟ್ಟು ಯಡಿಯೂರಪ್ಪ ಉರುಳಿಸಿದ್ದರು. ಆರು ತಿಂಗಳ ಹಿಂದೆಯೇ ಬದಲಾವಣೆಯಾಗುತ್ತದೆ ಎಂದು ನಾನು ಹೇಳಿದ್ದೆ.ವೈಯಕ್ತಿಕ ಸಂಬಂಧವೇ ಬೇರೆ ರಾಜಕೀಯ ಸಂಬಂಧವೇ ಬೇರೆ. ನಮ್ಮ ಐಡಿಯಾಲಜಿಯೇ ಬೇರೆ ಅವರದ್ದೇ ಬೇರೆ. ವೈಯಕ್ತಿಕವಾಗಿ ಯಡಿಯೂರಪ್ಪ ಬಗ್ಗೆ ನನಗೇನು ಬೇಜಾರು ಕೋಪವಿಲ್ಲ. ಮುಂದಿನ ಸಿಎಂ ಯಾರು ಎಂದು ನನಗೆ ಗೊತ್ತಿಲ್ಲ. ನರೇಂದ್ರ ಮೋದಿ ಅಮಿತ್ ಷಾಗೆ ಮಾತ್ರ ಗೊತ್ತು. ಕರ್ನಾಟಕದಲ್ಲಿ ಯಾರಿಗೂ ಮುಂದಿನ ಸಿಎಂ ಯಾರೆಂದು ಗೊತ್ತಿಲ್ಲ ಎಂದರು.
ತಮಗಿರುವ ಮಾಹಿತಿ ಪ್ರಕಾರ ಮೈತ್ರಿ ಸರ್ಕಾರಕ್ಕೆ ರಾಜೀನಾಮೆ ಕೊಟ್ಟು, ಬಿಜೆಪಿ ಸೇರಿ ಬಿಜೆಪಿ ಸರ್ಕಾರ ರಚನೆಗೆ ಕಾರಣವಾದ 17 ಜನರಿಗೆ ಮತ್ತೆ ಸಂಪುಟದಲ್ಲಿ ಸ್ಥಾನ ಕೊಡುತ್ತಾರೆ ಎಂಬ ಸುದ್ದಿಯಿದೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಪಕ್ಷದ ಎಂ.ಬಿ.ಪಾಟೀಲ್ ಮುಖ್ಯಮಂತ್ರಿ ಬದಲಾವಣೆಯಾಗಬಾರದು ಎಂದು ಹೇಳಿಕೆ ನೀಡಿದ್ದು, ಸ್ಟ್ಯಾಟಜಿ ಆಗಿ ಹೇಳಿಕೆ ನೀಡಿರಬೇಕು. ಅವರು ನೀಡಿದ್ದು ಲೆಕ್ಕಾಚಾರದ ಹೇಳಿಕೆ. ಈ ಬಗ್ಗೆ ಶಾಮನೂರು ಜೊತೆ ಏನೂ ಚರ್ಚೆ ಮಾಡಿಲ್ಲ. ಎಂ.ಬಿ.ಪಾಟೀಲ್ ಸ್ಟ್ಯಾಟಜಿಯ ಹೇಳಿಕೆ ಎಂದಿದ್ದಾರೆ. ಎಂ.ಬಿ.ಪಾಟೀಲ್ ಕೂಡ ಲಿಂಗಾಯತ ಸಮುದಾಯದಿಂದ ಬಂದವರು.ಹೀಗಾಗಿ ಲಿಂಗಾಯತ ಸಮುದಾಯದ ಹಿರಿಯ ನಾಯಕ ಯಡಿಯೂರಪ್ಪ ಪರ ಹೇಳಿಕೆ ನೀಡಿದ್ದಾರಷ್ಟೆ ಎಂದು ಸಿದ್ದರಾಮಯ್ಯ ಸಮರ್ಥಿಸಿಕೊಂಡರು.ನಾನು ಇಂದಿಗೂ ದೆಹಲಿ ರಾಜಕಾರಣಕ್ಕೆ ಹೋಗಲು ಇಷ್ಟಪಡುವುದಿಲ್ಲ. ಕರ್ನಾಟಕ ರಾಜಕಾರಣದಲ್ಲಿ ಮಾತ್ರ ನನಗೆ ಆಸಕ್ತಿಯಿದೆ. ರಾಹುಲ್ ಗಾಂಧಿ ಕೂಡ ನನಗೆ ದೆಹಲಿ ಎಐಸಿಸಿಯಲ್ಲಿ ಪ್ರಧಾನಕಾರ್ಯದರ್ಶಿ ಹುದ್ದೆ ನೀಡಿ ದೆಹಲಿ ರಾಜಕಾರಣಕ್ಕೆ ಬರುವಂತೆ ಹೇಳಿದ್ದರಾದಾರೂ ನಾನು ಹೋಗಿಲ್ಲ. ಯಡಿಯೂರಪ್ಪ ಕೂಡ ರಾಜ್ಯ ಕಾರಣದ ಕಾರಣಕ್ಕಾಗಿ ದೆಹಲಿ ರಾಜಕಾರಣಕ್ಕೆ ಹೋಗದೇ ಇರಬಹುದು ಎಂದರು.