ಯಮಕನಮರಡಿ ಪೊಲೀಸರ ಕಾರ್ಯಾಚರಣೆ : ದ್ವಿಚಕ್ರ ವಾಹನ ಕಳ್ಳನ ಬಂಧನ : 8 ಬೈಕ್ ವಶ
ಬೆಳಗಾವಿ : ಮೋಜು-ಮಸ್ತಿಗಾಗಿ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಆರೋಪಿತ ಓರ್ವನನ್ನು ಬಂಧಿಸಿರುವ ಯಮಕನಮರಡಿ ಪೊಲೀಸರು ಬಂಧಿತನಿಂದ ವಿವಿಧ ಬಗೆಯ 8 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕಳ್ಳತನ ಪ್ರಕರಣದಲ್ಲಿ ಬೆನಕನಹೊಳಿ ಗ್ರಾಮದ ಕುಖ್ಯಾತ ಎಮ್.ಓ.ಬಿ ಸಂಜು @ಸಂಜ್ಯಾ ಮಲ್ಲಪ್ಪಾ ಮೇಕಲಿ ಬಂಧಿತ ಆರೋಪಿತನಾಗಿದ್ದಾನೆ. ಬಂಧಿತ ಸಂಜ್ಯಾನಿಂದ 08 ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗುತ್ತಿದ್ದ ಮೋಟಾರ್ ಸೈಕಲ್ ಕಳ್ಳತನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು.
ಸದರಿ ತಂಡವು ಕಾರ್ಯಾಚರಣೆ ನಡೆಸಿ, ಸರಣಿ ಕಳ್ಳತನದಲ್ಲಿ ತೊಡಗಿದ್ದ ಕುಖ್ಯಾತ ಹಳೇ ಅಪರಾಧಿ ಎಮ್ ಒಬಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ದಿನಾಂಕ 11/04/2026 ರಂದು ಹುಕ್ಕೇರಿ ತಾಲೂಕಿನ ನರಸಿಂಗಪೂರ ಗ್ರಾಮದ ಅಂಡರ್ ಪಾಸ್ ಬ್ರಿಡ್ಜ್ ಹತ್ತಿರಗಂಗಪ್ಪಾ ಕೊಡದವರ ಎಂಬುವವರ ಬಜಾಜ್ ಪ್ಲಾಟಿನಾ ಮೋಟಾರ್ ಸೈಕಲ್ ಕಳ್ಳತನವಾಗಿತ್ತು. ಈ ಬಗ್ಗೆ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 129/2026 ಕಲಂ 303(2) BNS ಅಡಿಯಲ್ಲಿ ಪುಕರಣ ದಾಖಲಾಗಿತ್ತು.
ಈ ಪ್ರಕರಣದ ತನಿಖೆಗಾಗಿ ಯಮಕನಮರಡಿ ಪೊಲೀಸ ಠಾಣೆಯ ಪಿಐ ಜೆ.ಎಫ್.ಮುಶಾಪುರಿ, ಪಿಎಸ್ ಐ ಬಿ.ಕೆ. ಪಾಟೀಲ ಇವರ ನೇತೃತ್ವದಲ್ಲಿ ಸಿಬ್ಬಂದಿಯವರಾದ ಜಿ.ಬಿ.ನಾಗನ್ನವರ, (ಸಿ.ಪಿ.ಸಿ 3105) ಮತ್ತು ಪಿ.ಕೆ.ಕಿಳ್ಳಿಕೇತರ (ಸಿ.ಪಿ.ಸಿ 3278) ಅವರನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು.
ಈ ತಂಡವು ದಿ. 17ರಂದು ಬೆನಕನಹೊಳಿ ಗ್ರಾಮದ ಹದ್ದಿಯಲ್ಲಿ ಕಾರ್ಯಾಚರಣೆ ನಡೆಸಿ, ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತು. ಬಂಧಿತ ಆರೋಪಿತನ ವಿಚಾರಣೆಯಿಂದ ಆತನು ವಿವಿಧ ಜಿಲ್ಲೆ ಮತ್ತು ರಾಜ್ಯಗಳಲ್ಲಿ ಮೋಜು-ಮಸ್ತಿಗಾಗಿ ಮೋಟಾರ್ ಸೈಕಲ್‌ಗಳನ್ನು ಕಳ್ಳತನ ಮಾಡಿರುವುದುಬೆಳಕಿಗೆ ಬಂದಿದೆ. ಆರೋಪಿತನ ಮಾಹಿತಿಯ ಮೇರೆಗೆ ಒಟ್ಟು 08 ಮೋಟಾರ್ ಸೈಕಲ್‌ಗಳನ್ನುವಶಪಡಿಸಿಕೊಳ್ಳಲಾಗಿದೆ.
ಈ ಯಶಸ್ವಿ ಕಾರ್ಯಾಚರಣೆ ನಡೆಸಿದ ತನಿಖಾ ತಂಡದ ಅಧಿಕಾರಿಗಳು ಮತ್ತು ಸಿಬ್ಬಂದಿಯವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆ.