ಮಹಲಿಂಗಪುರ

ಕಾಂಗ್ರೆಸ್ ಮಡಿಲಿಗೆ ಮಹಾಲಿಂಗಪುರ ಪುರಸಭೆ

ಕಾಂಗ್ರೆಸ್ ಮಡಿಲಿಗೆ ಮಹಾಲಿಂಗಪುರ ಪುರಸಭೆ

ಅಧ್ಯಕ್ಷರಾಗಿ ಯಲ್ಲನಗೌಡ ಪಾಟೀಲ ಉಪಾಧ್ಯಕ್ಷರಾಗಿ ಶೀಲಾ ಭಾವಿಕಟ್ಟಿ ಅವಿರೋಧ ಆಯ್ಕೆ  

ಮಹಾಲಿಂಗಪುರ : ಭಾರಿ ಕುತೂಹಲ ಕೆರಳಿಸಿದ ಮಹಾಲಿಂಗಪುರ ಪುರಸಭೆಯ ಅಧ್ಯಕ್ಷರಾಗಿ ಕಾಂಗ್ರೆಸಿನ ಯಲ್ಲನಗೌಡ ಬಸಲಿಂಗಪ್ಪಗೌಡ ಪಾಟೀಲ ಅಧ್ಯಕ್ಷರಾಗಿ ಮತ್ತು  ಶೀಲಾ ರಾಜೇಶ ಭಾವಿಕಟ್ಟಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಶುಕ್ರವಾರ ನಡೆದ ಅಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸಿನಿಂದ ಅಧ್ಯಕ್ಷ ಸ್ಥಾನದಲ್ಲಿ ಆಕಾಂಕ್ಷಿಯಾಗಿ ಯಲ್ಲನಗೌಡ ಪಾಟೀಲ ಮತ್ತು ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ಶೀಲಾ ಭಾವಿಕಟ್ಟಿ ನಾಮ ಪತ್ರ ಸಲ್ಲಿಸಿದರು.ಪ್ರತಿಯಾಗಿ ಯಾರು ನಾಮ ಪತ್ರ ಸಲ್ಲಿಸದೆ ಇರುವುದರಿಂದ ಅವಿರೋಧವಾಗಿ ಆಯ್ಕೆಯಾಗಿ ಗಮನ ಸೆಳೆದರು. 

ಪುರಸಭೆ ಹತ್ತಿರಕ್ಕೂ ಬಾರದ ಬಿಜೆಪಿ ಸದಸ್ಯರು  

ಕಳೆದ ಎರಡು ಅವಧಿ ಅಧಿಕಾರ ಅನುಭವಿಸಿದ ಬಿಜೆಪಿ ಸದಸ್ಯರು ಈ ಬಾರಿ ಅಧ್ಯಕ್ಷ ಗಾದಿ ಸಾಮಾನ್ಯ ಕ್ಷೇತ್ರಕ್ಕೆ ಮಿಸಲಿದ್ದರು 10 ಸದಸ್ಯ ಬಲ ಹೊಂದಿದ ಬಿಜೆಪಿ ಶಾಸಕರು ಮತ್ತು ಸಂಸದರು ಸೇರಿ 12 ಮತ ಹೊಂದಿದ್ದರು.ಯಾರೊಬ್ಬರೂ ಪುರಸಭೆ ಸಮೀಪ ಕೂಡಾ ಬರಲಿಲ್ಲ.ಇದು ಎಲ್ಲರಲೂ ಯಕ್ಷ ಪ್ರಶ್ನೆಯಾಗಿ ಕಾಡಿತು. 

ಕಾಂಗ್ರೇಸಿನ 9 ಜನ ಸದಸ್ಯರು, ಬಿಜೆಪಿಯ ಮೂರು ಜನ ಬಂಡಾಯ ಸದಸ್ಯರು ಮತ್ತು ಓರ್ವ ಪಕ್ಷೇತ್ರ ಅಭ್ಯರ್ಥಿ ನೆರವಿನಿಂದ ಎರಡು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಗೆದ್ದು ಬಿಗಿತ್ತು ಕಾಂಗ್ರೇಸ. 

ಬಿಗಿ ಬಂದೋಬಸ್ತ್‌  

ಈ ಹಿಂದೆ ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ನಡೆದಂತೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಾರಿ ಬಿಗಿ ಬಂದೋಬಸ್ತ್‌ ಮಾಡಲಾಗಿತ್ತು. ಅದಕ್ಕಾಗಿ ಓರ್ವ ಎಸ್ ಪಿ ಮೂರು ಜನ ಸಿ ಪಿ ಅಯ್ ಹನ್ನೆರಡು ಜನ ಪಿ ಎಸ್ ಆಯ್ 123 ಜನ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. 

ಗಿರಿ ಸ್ವಾದಿ ಅಭಿನಂದನೆ : ಈ ಎಲ್ಲ ಪ್ರಕ್ರಿಯೆಗಳು ಅತ್ಯಂತ ಶಾಂತಯುತವಾಗಿ ಜರುಗಲು ಸಹಕರಿಸಿದ ಪೊಲೀಸ್ ಇಲಾಖೆ, ಪುರಸಭೆ ಮುಖ್ಯಧಿಕಾರಿ ಮತ್ತು ಸಿಬ್ಬಂದಿ ಹಾಗೂ ತೆರೆ ಮರೆಯಲ್ಲಿ ಸಹಕರಿಸಿದ ಎಲ್ಲರನ್ನು ಅಭಿನಂದಸಿದರು. 

ಕಾರ್ಯಕರ್ತರ ವಿಜೆಯೋತ್ಸವ  

ಭಾರಿ ಕುತೂಹಲದ ಮಧ್ಯ ಪಕ್ಷೇತರ ಅಭ್ಯರ್ಥಿ ಸಹಕಾರದಿಂದ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನವು ಕಾಂಗ್ರೆಸ್ ಮಡಿಲಿಗೆ ಬರುತ್ತಿದ್ದಂತೆ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ನಗರದ ವಿವಿಧ ಸರ್ಕಲಗಳಲ್ಲಿ ಪಟಾಕಿ ಸಿಡಿಸಿ ಬಣ್ಣ ಎರಚಿಕೊಂಡು ಬೈಕ ರಾಲಿ ಮಾಡಿ ಸಂಭ್ರಮಿಸಿದರು. 

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಸಿದ್ದು ಕೊಣ್ಣೂರ, ಡಾ ಎ,ಆರ್ ಬೆಳಗಲಿ ,ಅಶೋಕ ಅಂಗಡಿ, ಬಸವರಾಜ ರಾಯರ, ಲಕ್ಷಣ ಮಾಂಗ,ಪುರಸಭೆ ಸದಸ್ಯರಾದ ಅಬ್ದುಲ ಬಾಗವಾನ, ರಾಜು ಗೌಡಪ್ಪಗೋಳ, ಮುಸ್ತಾಕ ಚಿಕ್ಕೋಡಿ, ಸಜ್ಜನಸಾಬ ಪೆಂಡಾರಿ, ಬಲವಂತಗೌಡ ಪಾಟೀಲ, ಬಸಪ್ಪ ಬುರುಡ, ಸವಿತಾ ಹುರಕಡ್ಲಿ,  ಗೋದಾವರಿ ಬಾಟ,ಚಾಂದನಿ ನಾಯಕ, ಭಾವನಾ ಪಾಟೀಲ, ಸುಜಾತ ಮಾಂಗ, ಸೇರಿದಂತೆ ಹಲವರು ಇದ್ದರು. 

ಶುಭಾಶಯಗಳ ಮಹಾಪುರ  

ಜಿಲ್ಲಾ ಉಸ್ತುವಾರಿ ಸಚಿವರಾದ ಆರ್ ಬಿ ತಿಮ್ಮಾಪುರ, ಮತ್ತು ವಿಧಾನ ಪರಿಷತ್ ಸದಸ್ಯರಾದ ಉಮಾಶ್ರೀ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಪ್ಪ ಸಿಂಗಾಡಿ,ಸೇರಿ ಹಲವು ಕಾಂಗ್ರೆಸ್ ನಾಯಕರು ಅನೇಕ ಸಂಘ ಸಂಸ್ಥೆಗಳು ಗಣ್ಯ ಮಾನ್ಯರು ಅಭಿನಂದಸಿದ್ದಾರೆ. 


ಸುದ್ದಿ ಓದಿ