ದಿ. 10 ರಂದು ಮಹಾಲಿಂಗಪುರ ಹಟ್ಟಿಯಂಗಡಿ ಮೇಳದವರಿಂದ ಯಕ್ಷಗಾನ ಕಾರ್ಯಕ್ರಮ
ಮಹಾಲಿಂಗಪುರ 09: ಸ್ಥಳೀಯ ನೀಲಕಂಠೇಶ್ವರ ದೇವಸ್ಥಾನದಲ್ಲಿ ಇಂದು ದಿ. 10 ರಂದು ಉಡುಪಿ ಜಿಲ್ಲೆಯ ಇತಿಹಾಸ ಪ್ರಸಿದ್ದ ಹಟ್ಟಿಯಂಗಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಯಕ್ಷಗಾನ ಮೇಳದವರಿಂದ ಯದುವಂಶೋಧ್ಧರಣ ಎನ್ನುವ ಪ್ರಸಂಗವನ್ನು ಆಡಿ ತೋರಿಸಲಿದ್ದಾರೆ. ಈ ಮೇಳದಲ್ಲಿ ಅನೇಕ ಅತಿಥಿ ಕಲಾವಿದರು ಕೂಡಾ ಭಾಗವಹಿಸುವರು ಎಂದು ಮೇಳದ ಸಂಚಾಲಕರಾದ ರಂಜಿತ ಶೆಟ್ರು ತಿಳಿಸಿದ್ದಾರೆ. ಕಾರ್ಯಕ್ರಮ ರಾತ್ರಿ 7 ಗಂಟೆಗೆ ಪ್ರಾರಂಭವಾಗಲಿದೆ.
ಯಕ್ಷಗಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೇರದಾಳ ಶಾಸಕರಾದ ಸಿದ್ದು ಸವದಿ ಅವರು ವಹಿಸಲಿದ್ದು ಬಾಗಲಕೋಟ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಬಿ.ತಿಮ್ಮಾಪೂರ ಅವರು ಉದ್ಘಾಟಿಸಲಿದ್ದಾರೆ, ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಕಾಂಗ್ರೇಸ ಜಿಲ್ಲಾ ಅಧ್ಯಕ್ಷರಾದ ಎಸ್.ಜಿ.ನಂಜಯ್ಯಮಠ, ಧುರಿಣರಾದ ಸಿದ್ದು ಕೊಣ್ಣೂರ, ಬಸನಗೌಡ ಪಾಟೀಲ, ಸಂಗಪ್ಪ ಹಲ್ಲಿ, ಮಹಾಂತೇಶ ಹಿಟ್ಟಿನಮಠ, ಶೇಖರ ಅಂಗಡಿ, ಜಿಲ್ಲಾ ಕಿಸಾನ ಕಾಂಗ್ರೇಸ ಅಧ್ಯಕ್ಷರಾದ ಆನಂದ ಹಟ್ಟಿ, ಕಾನಿಪ ಅಧ್ಯಕ್ಷ ಮಹೇಶ ಮನ್ನಯ್ಯನವರಮಠ, ಶಂಕರಗೌಡ ಪಾಟೀಲ, ಪ್ರಕಾಶ ಮಮದಾಪೂರ, ಕಿರಣ ಸತ್ತಿಗೇರಿ, ರವಿ ಮುಂಡಗನೂರ, ಮಹಾದೇವಪ್ಪ ಬರಗಿ, ಮಹೇಶ ಜಿಡ್ಡಿಮನಿ ಮುಂತಾದವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.