ರಾಮದುರ್ಗ

ರೈತರು ವಿವಿಧ ಯೋಜನೆಗಳನ್ನು ಸದುಪಯೋಗಿಸಿಕೊಳ್ಳಲಿ: ಯಾದವಾಡ

ರೈತರು ವಿವಿಧ ಯೋಜನೆಗಳನ್ನು ಸದುಪಯೋಗಿಸಿಕೊಳ್ಳಲಿ: ಯಾದವಾಡ
ರಾಷ್ಟ್ರೀಯ ಸುಸ್ಥಿರ ಕೃಷಿ ಯೋಜನೆ ಅಡಿ ಸುಮಾರು 47 ಫಲಾನುಭವಿಗಳಿಗೆ ಎಮ್ಮೆ ಮತ್ತು ಆಕಳನ್ನು ವಿತರಿಸುತ್ತಿರವ ಶಾಸಕ ಮಹಾದ

ರಾಮದುರ್ಗ 08: ಕೇಂದ್ರ ಸರಕಾರದ ರಾಷ್ಟ್ರೀಯ ಸುಸ್ಥಿರ ಕೃಷಿ ಯೋಜನೆ ಅಡಿ ಎಮ್ಮೆ ಮತ್ತು ಆಕಳನ್ನು ಖರೀದಿಸಲು ರೂ 20.000 ಸಹಾಯ ಹಣ ನೀಡಿಲಾಗುವುದು ಇದರಿಂದಾ  ಹೈನುಗಾರಿಕೆಗೆ ಉತ್ತೇಜನ ನೀಡಿ ಆರ್ಥಿಕವಾಗಿ ಸಬಲರಾಗಲು ಪ್ರೇರೇಪಿಸಲಾಗುವುದು ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು. 

ತಾಲೂಕಿನ ಕಟಕೋಳ ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಇಲಾಖೆ ಏರ್ಪಡಿಸಿದ 47 ಫಲಾನುಭವಿಗಳಿಗೆ ಎಮ್ಮೆ ಮತ್ತು ಆಕಳನ್ನು ವಿತರಿಸಿ ಮಾತನಾಡಿದರು.

ಉಭಯ ಸರಕಾರಗಳು ರೈತರ ಜೀವನ ಸಮೃದ್ಧಿ ಪಡಿಸಲು ಹಲವಾರು ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಕಾರಣ ರೈತರು ಇಲಾಖೆಗೆ ಭೇಟಿ ನೀಡಿ ಮಾಹಿತಿ ಪಡೆದು ಯೋಜನೆಗಳ ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು. 

ತಾಲೂಕ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್ ಎಪ್ ಬೆಳವಟಗಿ ಮಾತನಾಡಿ ರೈತರಿಗೆ ಬೆಳೆಗಳ ಬಗ್ಗೆ ಮತ್ತು ಇತರ ಕೃಷಿ ಮಾಹಿತಿ ಅವಶ್ಯವಿದ್ದಲ್ಲಿ ಇಲಾಖೆಗೆ ಬಂದು ಮಾಹಿತಿ ಪಡೆದು  ಆದಾಯ ಮತ್ತು ಆರ್ಥಿಕ ಸ್ಥಿತಿ ದ್ವಿಗುಣ ಗುಳಿಸಲು ಪ್ರಯತ್ನಿಸಿಬೇಕೆಂದು ತಿಳಿಸಿದರು. 

ಪಶುವೈದ್ಯಾಧಿಕಾರಿ ಗಿರೀಶ ಪಾಟೀಲ ಬೇಸಿಗೆಯಲ್ಲಿ ಜಾನುವಾರಗಳನ್ನು ಯಾವ ರೀತಿ ಸಂರಕ್ಷಣೆ ಮಾಡಬೇಕು ಹಾಗೂ ರೋಗಕ್ಕೆ ತುತ್ತಾದಾಗ ಮದ್ದನ್ನು ನೀಡಿವ ವಿಧಾನದ ಬಗ್ಗೆ ಉಪನ್ಯಾಸ ನೀಡಿದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕಟಕೋಳದ ಅಧ್ಯಕ್ಷ ಮಹಾದೇವ ಅತಾರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್ ಎಸ್ ಡವಣ, ಗ್ರಾಮ ಪಂಚಾಯತ ಅಧ್ಯಕ್ಷೆ  ಸರಸ್ವತಿ ನಿಂಗಣ್ಣವರ, ಉಪಾಧ್ಯಕ್ಷೆ ಸರಸ್ವತಿ ಎಸ್ ತಂಗೋಜಿ, ಎಪಿಎಮ್ ಸಿ ನಿರ್ದೇಶಕ ಪ್ರಕಾಶ ಪವಾರ, ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಎಮ್ ವಿ ಸರೂರ, ವಿ ಎಚ್ ದಾಸರ, ಮಂಜುನಾಥ ಮಗಳಕರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. 

ಸುದ್ದಿ ಓದಿ