ರಾಮದುರ್ಗ

ಬಿಜೆಪಿಯಿಂದ ದೇಶ ಸಾಲ ಮುಕ್ತ: ಯಾದವಾಡ

ಬಿಜೆಪಿಯಿಂದ ದೇಶ ಸಾಲ ಮುಕ್ತ: ಯಾದವಾಡ

ರಾಮದುರ್ಗ 15: ಸುಮಾರು 72 ವರ್ಷಗಳಿಂದಾ ದೇಶವನ್ನಾಳಿದ ಕಾಂಗ್ರೆಸ್ ಪಕ್ಷದಿಂದಾ  ಅಭಿವೃದ್ದಿಯಾಗದೇ ದೇಶವನ್ನು ಸಾಲಾಗಾರನ್ನಾಗಿ ಮಾಡಿತ್ತು ಆದರೆ ಬಿಜೆಪಿ ಪಕ್ಷದಿಂದಾ ನರೇಂದ್ರ ಮೋದಿ ಪ್ರಧಾನಿ ಹುದ್ದೆ ಅಲಂಕರಿಸಿದ ಮೇಲೆ ದೇಶವನ್ನು ಸಾಲ ಮುಕ್ತ ಮಾಡಿ ಸುಮಾರು 12 ದೇಶಗಳಿಗೆ ಸಾಲ ನೀಡದ ಹೆಗ್ಗಳಿಕೆ ಮೋದಿಯದ್ದಾಗಿದೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ನುಡಿದರು. 

ತಾಲೂಕಿನ ದೊಡಮಂಗಡಿ, ಚಿಂಚಖಂಡಿ, ಘಟಕನೂರ, ಕೊಳಚಿ, ಹುಲಗೊಪ್ಪ, ಗೊಣ್ಣಾಗರ, ಶೀವಪೇಠ, ಜಾಲಿಕಟ್ಟಿ ಹಾಗೂ ಲಖನಾಯಕೊಪ್ಪ್ ಗ್ರಾಮಗಳಲ್ಲಿ ಬೆಳವಾವಿ ಲೋಕಸಭೆ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ಮಂಗಲಾ ಸುರೇಶ ಅಂಗಡಿ ಪರ ಮತಯಾಚನೆ ಮಾಡಿ ಮಾತನಾಡಿದ ಅವರು ವಿಶ್ವವೇ ಮೋದಿಯನ್ನು ಹೊಗಳ್ಳುತ್ತಿರುವಾಗ ಕೇವಲ ಕಾಂಗ್ರೆಸಿಗರು ಮಾತ್ರ ತೆಗುಳುತ್ತಿದ್ದಾರೆ ಏಕೆಂದು 72 ವರ್ಷ ಅಧಿಕಾರ ನಡೆಸಿ ಇಂದು ವಿರೋಧ ಪಕ್ಷದಲ್ಲಿಯೂ ಜಾಗ ಇಲ್ಲದ ಹಾಗೂ ಬಹುಮತ ತಂದಿದ್ದಕ್ಕೆ ವಿನಾಕಾರಣ ದೋಷಾರೋಪ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಮತ್ತೊಮ್ಮೆ ಬಿಜೆಪಿ ಅಭ್ಯರ್ಥಿ ಮಂಗಲಾ ಸುರೇಶ ಅಂಗಡಿ ಮತ ನೀಡಿ ನಾವೇಲ್ಲರೂ ಮೋದಿಯವರೊಂದಿಗೆ ಇದ್ದೆವೆ ಎಂಬುದನ್ನು ತೋರಿಸೋಣ ಎಂದು ಹೇಳಿದರು. ಕಾಂಗ್ರಸ್ ಪಕ್ಷದ ಅಭ್ಯರ್ಥಿಗೆ ಮತ ನೀಡಿದರೆ ಪ್ರಯೋಜನವಿಲ್ಲಾ ಕೇವಲ ವಿರೋಧ ಪಕ್ಷದವರ ಜೊತೆ ಕುಳಿತು ಸರಕಾರವನ್ನು ವಿರೋಧಿಸುವ ಕಾರ್ಯ ಮಾತ್ರ ಆಗುವುದು ಆದರೆ ಅಭಿವೃದ್ಧಿಯಾಗಲು ಸಾಧ್ಯವಿಲ್ಲಾ ಎಂಬುದನ್ನು ಮತದಾರರು ಅರಿತುಕೊಂಡು ಬಜೆಪಿ ಮತ ನೀಡಿ ದೇಶದ ಅಭಿವೃದ್ದಿಗೆ ಸಹಕಾರಿಯಾಗಬೇಕೆಂದು ಮನವಿ ಮಾಡಿದರು. 

ಜಿಲ್ಲಾ ಪಂಚಾಯತ ಸದಸ್ಯ ರೇಣಪ್ಪ ಸೋಮಗೊಂಡ, ಎಪಿಎಮ್ಸಿ ಅಧ್ಯಕ್ಷ ದ್ಯಾವಪ್ಪ ಬೆಳವಡಿ, ಮಾಜಿ ಜಿ.ಪಂ. ಸದಸ್ಯ ನಿಂಗಪ್ಪ ಮೆಳ್ಳಿಕೇರಿ, ಸುರೇಬಾನ ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಪಾಟೀಲ, ಘಟಕನೂರ ಗ್ರಾಮ ಪಂಚಾಯತ ಅಧ್ಯಕ್ಷ ಈರಪ್ಪ ಕೂಗಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. 

 

ಸುದ್ದಿ ಓದಿ