ವೈಎಸ್‍ಆರ್ ಜನ್ಮದಿನ : ಆಂಧ್ರ ಮುಖ್ಯಮಂತ್ರಿ ಮತ್ತು ಕುಟುಂಬದಿಂದ ಗೌರವಾರ್ಪಣೆ

ವೈಎಸ್‍ಆರ್ ಜನ್ಮದಿನ : ಆಂಧ್ರ ಮುಖ್ಯಮಂತ್ರಿ ಮತ್ತು ಕುಟುಂಬದಿಂದ ಗೌರವಾರ್ಪಣೆ

ಕಡಪ, ಜುಲೈ 08: ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಮತ್ತು ಅವರ ಕುಟುಂಬ ಸದಸ್ಯರು ಬುಧವಾರ ವೈಎಸ್‍ ಆರ್ ಎಂದೇ ಜನಪ್ರಿಯರಾಗಿದ್ದ ದಿವಂಗತ ಮುಖ್ಯಮಂತ್ರಿ ವೈ ಎಸ್‍ ರಾಜಶೇಖರ ರೆಡ್ಡಿ ತಮ್ಮ ಅವರ 71 ನೇ ಜನ್ಮ ದಿನಾಚರಣೆಯಂದು ಇಡುಪುಲಪಾಯ ಗ್ರಾಮದಲ್ಲಿರುವ ಅವರ ಸಮಾಧಿಗೆ ಗೌರವ ನಮನ ಸಲ್ಲಿಸಿದ್ದಾರೆ.

ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ತಾಯಿ ಮತ್ತು ವೈಎಸ್ಆರ್ಸಿಪಿ ಗೌರವಾಧ್ಯಕ್ಷೆ ವೈ ಎಸ್ ವಿಜಯಲಕ್ಷ್ಮಿ, ಪತ್ನಿ ವೈ ಎಸ್ ಭಾರತಿ, ಸೋದರಿ ವೈ ಎಸ್ ಶರ್ಮಿಳಾ, ಸೋದರ ಮಾವ ಅನಿಲ್ ಕುಮಾರ್, ಸಂಸದರು ಮತ್ತು ಮಂತ್ರಿಗಳು ಗೌರವ ನಮನ ಸಲ್ಲಿಸಿ, ನಂತರ ಸಮಾಧಿಯ ಬಳಿ ನಡೆದ ಪ್ರಾರ್ಥನೆಯಲ್ಲಿ ಭಾಗವಹಿಸಿದರು.

ವೈ. ಎಸ್‍ ವಿಜಯಲಕ್ಷ್ಮಿಯವರು ಬರೆದಿರುವ ದಿವಂಗತ ರಾಜಶೇಖರ ರೆಡ್ಡಿ ಅವರ ಜೀವನ ಚರಿತ್ರೆ "ನಾಲೋ ... ನಾಥೋ ... ವೈಎಸ್ಆರ್, (ನನ್ನೊಳಗೆ ... ನನ್ನೊಂದಿಗೆ, ವೈಎಸ್ಆರ್), ಪುಸ್ತಕವನ್ನು ಜಗನ್ ಮೋಹನ್ ರೆಡ್ಡಿ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ, ರಾಜಶೇಖರ ರೆಡ್ಡಿ ಅವರು ಮಗ, ತಂದೆ, ಸಹೋದರ, ಗಂಡ, ಸ್ನೇಹಿತ, ಮತ್ತು ನಾಯಕನಾಗಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಅವರು ಶ್ರೇಷ್ಠ ರಾಜಕೀಯ ನಾಯಕ ಎಂದು ಶ್ಲಾಘಿಸಿದರು. 

ತಮ್ಮ ತಂದೆಯವರ ಆಡಳಿತಾವಧಿಯಲ್ಲಿ ಕೈಗೊಂಡ ಯೋಜನೆಗಳ ಬಗ್ಗೆ ಟ್ವಿಟರ್ ನಲ್ಲಿ ಜಗನ್ ಹಂಚಿಕೊಂಡಿದ್ದಾರೆ.  ವೈಎಸ್‍ಆರ್ ಜನ್ಮದಿನವನ್ನು ರೈತರ ದಿನವನ್ನಾಗಿ ಆಚರಿಸಲಾಗುತ್ತದೆ. ರಾಜಶೇಖರ ರೆಡ್ಡಿ ಅವರು 2009 ರಲ್ಲಿ ಅವಿಭಜಿತ ಆಂಧ್ರಪ್ರದೇಶದ  ಮುಖ್ಯಮಂತ್ರಿಯಾಗಿದ್ದಾಗ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ್ದರು ಎಂದು ಇಲ್ಲಿ ಉಲ್ಲೇಖಿಸಬಹುದು. 


ಸುದ್ದಿ ಓದಿ