ಗಂಗಾವತಿ

ವೈ ಜೆ ಆರ್ ವಿದ್ಯಾರ್ಥಿಗಳಿಂದ ಸಮಾಜ ಸೇವಕಿ "ನೆಕ್ಕಂಟಿ ಲಲಿತಮ್ಮ" ಇವರಿಗೆ ಶ್ರದ್ಧಾಂಜಲಿ

ವೈ ಜೆ ಆರ್ ವಿದ್ಯಾರ್ಥಿಗಳಿಂದ ಸಮಾಜ ಸೇವಕಿ "ನೆಕ್ಕಂಟಿ ಲಲಿತಮ್ಮ" ಇವರಿಗೆ ಶ್ರದ್ಧಾಂಜಲಿ

ಗಂಗಾವತಿ 04: ಎನ್ ಆರ್ ಶಾಲೆಯ ದಾನಿಗಳು ಹಾಗೂ  ಎನ್‌.ಆರ್‌. ಶ್ರೀನಿವಾಸ್ ಅವರ ತಾಯಿ ನೆಕ್ಕಂಟಿ ಲಲಿತಮ್ಮ  ಇವರು ದಿನಾಂಕ  2 / 11 /2025 ರಂದು ರಾತ್ರಿ 12:30ಕ್ಕೆ ವಿಧಿವಶರಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ವಿದ್ಯಾನಗರದ ವೈ ಜಿ ಆರ್ ಪಿಯು  ಕಾಲೇಜಿನಲ್ಲಿ ಅಧ್ಯಕ್ಷರು ಕಲ್ಯಾಣಂ ಜಾನಕಿರಾಮ್ ಹಾಗೂ ಕಾಲೇಜಿನ ಆಡಳಿತ ಮಂಡಳಿ ಪ್ರಾಚಾರ್ಯ ಉಪನ್ಯಾಸಕ ವೃಂದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಎರಡು ನಿಮಿಷಗಳ ಕಾಲ ಮೌನಚರಣೆ ಮಾಡಿದರು. 

ಈ ವೇಳೆ ಅಧ್ಯಕ್ಷರು ಕಲ್ಯಾಣಂ ಜಾನಕಿರಾಮ್ ಮಾತನಾಡಿ ನೆಕ್ಕಂಟಿ ಲಲಿತಮ್ಮ ಅವರು ಸಮಾಜದಲ್ಲಿ ಸಾಕಷ್ಟು ಸೇವಾ ಕಾರ್ಯಗಳನ್ನು ಮಾಡಿದ್ದಾರೆ,ಎನ್ ಆರ್ ವಿದ್ಯಾ ಸಮಸ್ತೆ ನಿರ್ಮಾಣಕ್ಕೆ ಸಾಕಷ್ಟು ಸಹಾಯ ಸಹಕಾರ ನೀಡಿದ್ದಾರೆ, ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ  ನೆರವಾಗುತ್ತದೆ.ದೇವಸ್ಥಾನಗಳ ನಿರ್ಮಾಣಕ್ಕೆ,ಗೋ ಶಾಲೆಗಳಿಗೆ, ಮಹಿಳಾ ಸಂಘ ಸಂಸ್ಥೆಗಳಿಗೆ ತಮ್ಮಿಂದಾಗುವ ಸಹಾಯ ಸಹಕಾರಗಳನ್ನು ಮಾಡುತ್ತಾ ಬಂದಿದ್ದಾರೆ.ಅವರ ಮಗನಾದ ಎನ್ ಆರ್ ಶ್ರೀನಿವಾಸ್ 16 ವರ್ಷಗಳ ಕಾಲ ಶಾರದಾ ವಿದ್ಯಾ ಸಂಸ್ಥೆಯ ಖಜಾಂಚಿ ಹಾಗೂ ಸದಸ್ಯರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ ದೇವರು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಸುಬ್ಬರಾವ್,ಕಲ್ಯಾಣಂ ಜಯದೀಪ್, ಕಲ್ಯಾಣಂ ವಂಶಿಕೃಷ್ಣ, ಪ್ರಾಚಾರ್ಯ ಬಿ ಕೋಟಯ್ಯ ಚೌದರಿ ಉಪನ್ಯಾಸಕ ವೃಂದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾಲೇಜು ಸಿಬ್ಬಂದಿ ವರ್ಗ  ಉಪಸ್ಥಿತರಿದ್ದರು. 


ಸುದ್ದಿ ಓದಿ