ಕುಸ್ತಿ: ಸೋನಮ್ ಮಲಿಕ್ ಗೆ ಸೋಲು

ಕುಸ್ತಿ: ಸೋನಮ್ ಮಲಿಕ್ ಗೆ ಸೋಲು

 
ಟೋಕಿಯೊ, ಆ.3 - ಭಾರತದ ಯುವ ಕುಸ್ತಿಪಟು ಸೋನಮ್ ಮಲಿಕ್ ಅವರು ತಮ್ಮ ಚೊಚ್ಚಲ ಒಲಿಂಪಿಕ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದರೂ, ಮಂಗಳವಾರ ಟೋಕಿಯೊ 2020 ರ ಮಹಿಳಾ ಫ್ರೀಸ್ಟೈಲ್ 62 ಕೆಜಿ 1/8 ಅಂತಿಮ ಸ್ಪರ್ಧೆಯಲ್ಲಿ ಮಂಗೋಲಿಯನ್ ಕುಸ್ತಿಪಟು ಬೊಲೊರ್ಟುಯಾ ಖುರಲ್ಖುಗೆ ಶರಣಾದರು.
 
ಮೊದಲ ಮತ್ತು ಎರಡನೇ ಅವಧಿಗಳಲ್ಲಿ ಸೋನಂ ತಲಾ ಒಂದು ತಾಂತ್ರಿಕ ಪಾಯಿಂಟ್ ಪಡೆದು, ಪಂದ್ಯಕ್ಕೆ ಉತ್ತಮ ವೇಗವನ್ನು ನೀಡಿದರು. ಆದರೆ ಬೊಲ್ಲೊರ್ಟುಯಾ ಪಂದ್ಯದಲ್ಲಿ ಮರಳಿದರು ಮತ್ತು ಎರಡನೇ ಅವಧಿಯಲ್ಲಿ ಎರಡು ತಾಂತ್ರಿಕ ಅಂಕಗಳನ್ನು ದಾಖಲಿಸಿದರು. ಅಂಕ ಪಟ್ಟಿಯಲ್ಲಿ ಉಭಯ ಆಟಗಾರ್ತಿಯರು ಸಮಬಲ ಸಾಧಿಸಿದರು. ಈ ವೇಳೆ ಕುಸ್ತಿಯ ಮಾನದಂಡಗಳಂತೆ ಒಂದೇ ಮೂವ್ ನಲ್ಲಿ ಯಾರು ಹೆಚ್ಚು ಅಂಕಗಳನ್ನು ಕಲೆ ಹಾಕುತ್ತಾರೋ ಅವರನ್ನು ವಿಜಯಶಾಲಿ ಎಂದು ಘೋಷಿಸಲಾಗುತ್ತದೆ. ಇದರಂತೆ ಮಂಗೋಲಿಯನ್ ಕುಸ್ತಿ ಪಟು ಜಯ ಸಾಧಿಸಿದರು.
 
ಸೋನಮ್ ಮಲಿಕ್ ಇನ್ನೂ ಟೋಕಿಯೊ ಒಲಿಂಪಿಕ್ಸ್ ನಿಂದ ಹೊರಗುಳಿದಿಲ್ಲ ಮತ್ತು ಬೊಲೊರ್ಟುಯಾ ಈ ತೂಕ ವಿಭಾಗದಲ್ಲಿ ಫೈನಲ್ ತಲುಪಿದರೆ, ಅವರು ರಿಪೀಚೇಜ್ ಸುತ್ತಿನಲ್ಲಿ ಸ್ಪರ್ಧಿಸಲು ಅವಕಾಶ ಪಡೆಯುತ್ತಾರೆ ಎಂಬುದು ಗಮನಾರ್ಹ.
 
ಭಾರತೀಯ ಕುಸ್ತಿಪಟು 2018 ರಲ್ಲಿ ಕೆಡೆಟ್ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್ ಮತ್ತು ಕೆಡೆಟ್ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಛಾಪು ಮೂಡಿಸಿದ್ದರು ಮತ್ತು ಅಲ್ಲದೆ ಅವರು ಕೆಡೆಟ್ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದಾರೆ.

ಸುದ್ದಿ ಓದಿ