ಸಿರುಗುಪ್ಪ

ವಿಶ್ವ ತಂಬಾಕು ರಹಿತ ದಿನ: ಆರೋಗ್ಯ ಜಾಗೃತಿ ಮೂಡಿಸಿ ಅಬ್ದುಲ್ ನಬಿ

ವಿಶ್ವ ತಂಬಾಕು ರಹಿತ ದಿನ: ಆರೋಗ್ಯ ಜಾಗೃತಿ ಮೂಡಿಸಿ ಅಬ್ದುಲ್ ನಬಿ

ಸಿರುಗುಪ್ಪ 31: ತಂಬಾಕು ಉತ್ಪನ್ನಗಳ ಸೇವನೆಯಿಂದ ಆಗುವ ದುಷ್ಪರಿಣಾಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡುತ್ತಿದೆ. ಇದರಿಂದ ಹಲವರು ಧೂಮಪಾನ ಹಾಗೂ ತಂಬಾಕು ಉತ್ಪನ್ನವನ್ನು ತ್ಯಜಿಸುತ್ತಿದ್ದಾರೆ ಇನ್ನಷ್ಟು ಜಾಗೃತಿ ಮೂಡ ಬೇಕಿದೆ ಎಂದು ಜನಾಭಿಪ್ರಾಯ ಮುಖಂಡರು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಾಷ್ಟ್ರೀಯ ವಯಸ್ಕರ ಶಿಕ್ಷಣ ಸೆಂಟ್ರಲ್ ಕೌನ್ಸಿಲ್ ಸದಸ್ಯ ಬಿಸ್ಮಿಲ್ಲಾ ವಿದ್ಯಾ ಸಂಸ್ಥೆ ಅಧ್ಯಕ್ಷರಾದ ಎ ಅಬ್ದುಲ್ ನಬಿ ಅಭಿಪ್ರಾಯ ಪಟ್ಟರು. 

ಸೌದಾಗರ್ ಮೊಹಲ್ಲಾ ಇಬ್ರಾಹಿಮ್ ಮಂಜಿಲ್ ನಲ್ಲಿ ಸೋಮವಾರ ವಿಶ್ವ ತಂಬಾಕು ರಹಿತ ದಿನವನ್ನು ನೆನಪಿಸಿ ಅವರು ಮಾತನಾಡುತ್ತಾ ಧೂಮಪಾನ ಕರೋನಾ ವೈರಸ್ ಸೇರಿದಂತೆ ವಿವಿಧ ಉಸಿರಾಟ ಸಂಬಂಧಿ ಕಾಯಿಲೆಗಳ ತೀವ್ರತೆ ಹೆಚ್ಚಿಸುತ್ತದೆ ಜಗಿಯುವ ತಂಬಾಕಿನಿಂದ ಕ್ಯಾನ್ಸರ್ ಸೇರಿದಂತೆ ದೀರ್ಘ ವಧೆ ಕಾಯಿಲೆಗಳು ಬರುತ್ತವೆ ಈ ಸೇವನೆಯಿಂದ ಬಾಯಿ ಗಂಟಲು ಧ್ವನಿಪಟ್ಟಿಗೆ ಮಿದುಳು ಅನ್ನನಾಳ ಶ್ವಾಸ ಕೋಶ ಪಿತ್ತಕೋಶ ಮೂತ್ರಪಿಂಡ ಸ್ತನ ಸೇರಿದಂತೆ ದೇಹದ ವಿವಿಧ ಅಂಗಗಳ ಕ್ಯಾನ್ಸರ್ ಗೆ ಕಾರಣ ವಾಗುತ್ತದೆ ಹೃದಯ ಕಾಯಿಲೆ ಶ್ವಾಸಕೋಶದ ಸಮಸ್ಯೆ ಪಾರ್ಶ್ವವಾಯು ಅಂಧತ್ವ ಹಲ್ಲು ಮತ್ತು ವಸಡಿನ ಸಮಸ್ಯೆ ಸೇರಿದಂತೆ ವಿವಿಧ ಕಾಯಿಲೆಗಳು ಸಹ ಬರುವ ಸಾಧ್ಯತೆಗಳಿವೆ ಎಂದು ವೈದ್ಯಕೀಯ ತಜ್ಞರು ಎಚ್ಚರಿಸಿದೆ ತಂಬಾಕು ಉತ್ಪನ್ನಗಳ ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮ ಕಾರ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಮೇ ಮೂವತ್ತೊಂದರಂದು ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಗುತ್ತದೆ  ಎಂದು ಅಬ್ದುಲ್ ನಬಿ ಅವರು ವಿವರಿಸಿ ಹೇಳಿದರು.  

ಹಾಜಿ  ಎ ಮುಹಮ್ಮದ್ ಇಬ್ರಾಹಿಂ ಎ ಮೊಹಮ್ಮದ್ ರಫಿ ಎ ಮೊಹಮ್ಮದ್ ನೌಶಾದ್ ಅಲಿ ಎ ಮೊಹಮ್ಮದ್ ನಿಜಾಮುದ್ದೀನ್ ಎ ಮುಹಮ್ಮದ್ ಹಾಜಿ ಸೌದಾಗರ್ ಜುಮ್ಮಾ ಮಸೀದಿ ಅಧ್ಯಕ್ಷ ಹಂಡಿ ಹುಸೇನ್ ಬಾಷಾ ಇತರರಿದ್ದರು. 


ಸುದ್ದಿ ಓದಿ