ವಿಶ್ವ ಪರಿಸರ ದಿನಾಚರಣೆ ! ದೈವದತ್ತ ನಿಸರ್ಗ ಹಾಳಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ- ದಿನೇಶ್ ಶರ್ಮಾ
ಲೋಕದರ್ಶನ ವರದಿ
ಮಹಾಲಿಂಗಪುರ 06: ದೈವದತ್ತ ನಿಸರ್ಗ ಹಾಳಾಗದಂತೆ ನೋಡಿಕೊಳ್ಳುವುದು,ಪ್ರತಿಯೊಬ್ಬರ ಪರಿಸರ ಕಾಳಜಿಯ ಜೊತೆ ಸಂರಕ್ಷಣೆಯ ಕರ್ತವ್ಯವೂ ಆಗಿದೆ ಎಂದು ಗೋದಾವರಿ ಬಯೋರಿಫೈನ್ರೀಸ್ ಸಕ್ಕರೆ ಕಾರ್ಖಾನೆಯ ಅಧಿಕಾರಿ ದಿನೇಶ ಶರ್ಮಾ ಪರಿಸರ ಕುರಿತು ಕಾಳಜಿ ಮೆರೆದರು.
ಶುಕ್ರವಾರ ಮುಂಜಾನೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಾರ್ಖಾನೆಯ ಸಂಶೋಧನಾ ಕೇಂದ್ರದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿದ ಅವರು, ವಿಶ್ವದೆಲ್ಲೆಡೆ ಇದೆ ಉದ್ದೇಶವನ್ನು ಸಾರುವ ಸಲುವಾಗಿಯೇ ವಿಶ್ವಸಂಸ್ಥೆ 1973 ರಿಂದ ಪ್ರತಿ ವರ್ಷ ವಿಶ್ವ ಪರಿಸರ ದಿನಾಚರಣೆಯನ್ನು ಚಾಚು ತಪ್ಪದೆ ಆಚರಿಸುತ್ತ ಬಂದಿದ್ದು, ಈ ಪುಣ್ಯ ಕಾರ್ಯದಲ್ಲಿ ನಾವೂ ಸಹಿತ ಕೈ ಜೋಡಿಸಬೇಕು ಇದು ನಮ್ಮ ಕರ್ತವ್ಯ ಎಂದು ತಿಳಿಯಬೇಕು.
ಭೂಮಿ ಮೇಲಿನ ಎಲ್ಲ ಜೀವಿಗಳ ಬದುಕಿಗೆ ಶುಧ್ಧ ನೀರು, ಗಾಳಿ, ಮಣ್ಣು ಅಷ್ಟೇ ಅಲ್ಲದೆ ಸಮತೋಲಿತ ವಾತಾವರಣದ ಅವಶ್ಯಕತೆ ಇದೆ.ಇದಕ್ಕೆ ಪೂರಕವಾಗಿ ನಾವೆಲ್ಲ ಬಹಳಷ್ಟು ಸಸಿಗಳನ್ನು ನೆಟ್ಟು ಗಿಡ ಮರಗಳ ಬೆಳವಣಿಗೆಗೆ ಸಹಕರಿಸಬೇಕು.ಈ ಹಿನ್ನೆಲೆಯಲ್ಲಿ ಪರಿಸರ ದಿನಾಚರಣೆ ವಿಶ್ವದಾದ್ಯಂತ ಆಚರಿಸಿ ಜನತೆಯಲ್ಲಿ ಜಾಗೃತಿ ಮೂಡಿಸುತ್ತಿದೆ.ಇದರಿಂದ ಭಾವಿ ಭವಿಷ್ಯತ್ತಿನ ಪೀಳಿಗೆ ಶಫಿಸುವ ಬದಲು ಹಾರೈಸುತ್ತಾರೆ ಎಂದರು.
ಈ ಸಂದರ್ಭದಲ್ಲಿ ಕೆಜೆ ಸೋಮಯ್ಯ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಕಾರ್ಖಾನೆಯ ಆಡಳಿತ ಮಂಡಳಿ, ಶ್ರಮಿಕ ವರ್ಗ ಮತ್ತು ನೌಕರರು ಪಾಲ್ಗೊಂಡು ವಿವಿಧೆಡೆ ಸಸಿಗಳನ್ನು ನೆಟ್ಟು ಹಸಿರೇ ಉಸಿರು ಎನ್ನುವ ಧ್ಯೇಯ ಪ್ರಕಟಿಸಿದರು.
ನಿರ್ದೇಶಕರು (ಕೆಆರ್) ನಂದಕುಮಾರ ಕುಂಚಗೆ, ಜನರಲ್ ಮ್ಯಾನೆಜರ (ಡಿಸ್ಟಿಲರಿ) ಡಿ ಎನ್ ಪಾಟೀಲ್, ಡಿ ಜಿ ಎಮ್ (ಆರ್ ್ಘ ಡಿ) ರಮೇಶ ಶೆಟ್ಟರ್, ಎ ಜಿ ಎಮ್ (ಎನ್ವಿರಾನ್ಮಂಟ್) ಮಲ್ಲಿಕಾರ್ಜುನ ಜಂಬೂರ,ಡೆಪ್ಯೂಟಿ ಮ್ಯಾನೇಜರ್ (ಎನ್ವಿರಾನ್ಮಂಟ್) ಆನಂದ ಕುಲಕರ್ಣಿ,ಎ ಜಿ ಎಮ್ (ಭೂಮಿಲಾಭ) ಕೆ ವಿ ಗೌಡರ,ಎ ಜಿ ಎಮ್ (ಕನ್ ್ಘ ಪಿಆರ್) ರವೀಂದ್ರ ಬಾಗೋಜಿ, ಮ್ಯಾನೆಜರ್ (ಎಡ್ಮಿನ್) ಆರ್ ವಿ ಸೋನವಾಲ್ಕರ, ಸಿನಿಯರ್ ಮ್ಯಾನೆಜರ್ (ಕೆನ್ ಡವಲಪ್ಟಂಟ್) ವಿಶ್ವನಾಥ ಭುಜನ್ನವರ, ಡಿ ಜಿ ಎಮ್ ವಿ. ಪಿ. ಕಣವಿ ಇದ್ದರು.