ಮಹಲಿಂಗಪುರ

ಸ್ವಸ್ಥ ಸಮಾಜಕ್ಕಾಗಿ ದುಡಿಯುವುದೇ ನಿಜವಾದ ಪತ್ರಿಕಾ ಧರ್ಮ: ಮಹೇಶ ಆರಿ

ಸ್ವಸ್ಥ ಸಮಾಜಕ್ಕಾಗಿ ದುಡಿಯುವುದೇ ನಿಜವಾದ ಪತ್ರಿಕಾ ಧರ್ಮ: ಮಹೇಶ ಆರಿ

ಮಹಾಲಿಂಗಪುರ 27: ಕಾಯಾಂರ್ಗ, ನ್ಯಾಯಾಂಗ, ಶಾಸಕಾಂಗಗಳ ಕೊಂಡಿಯಾಗಿ ಕೆಲಸ ಮಾಡುವ ಪತ್ರಿಕಾ ಜವಾಬ್ದಾರಿ ಬಹು ದೊಡ್ಡದು, ಅದನ್ನು ಅರ್ಥಮಾಡಿಕೊಂಡು ಸ್ವಸ್ಥ ಸಮಾಜಕ್ಕಾಗಿ ದುಡಿಯುವುದೇ ನಿಜವಾದ ಪತ್ರಿಕಾ ಧರ್ಮ ಎಂದು ನೂತನ ಅಧ್ಯಕ್ಷ ಮಹೇಶ ಆರಿ ಹೇಳಿದರು.  

ಭಾನುವಾರ ಸಂಜೆ ಸ್ಥಳೀಯ ಜಿಎಲ್ ಬಿಸಿಯಲ್ಲಿ ನಡೆದ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಸಮಾರಂಭದಲ್ಲಿ ಮಾತನಾಡಿದರು. ಕೇವಲ ನಾನು ಮಾತ್ರ ಅಧ್ಯಕ್ಷನಲ್ಲ, ಸಂಘದಲ್ಲಿರುವ ಸರ್ವ ಸದಸ್ಯರು ಅಧ್ಯಕ್ಷರೇ ಹಾಗಾಗಿ ಸರ್ವರೂ ಸಂಘದ ಮತ್ತು ಸಮಾಜದ ಹಿತದೃಷ್ಟಿಯಿಂದ ಒಗ್ಗಟ್ಟಿನಿಂದ ದುಡಿಯುವ ಎಂದರು.  

ಸ್ಥಳೀಯ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ 2022 ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಮಹೇಶ ಆರಿ, ಕಾರ್ಯದರ್ಶಿಯಾಗಿ ಶಿವಲಿಂಗ ಸಿದ್ನಾಳ, ಉಪಾಧ್ಯಕ್ಷರಾಗಿ ಇಲಾಹಿ ಜಮಖಂಡಿ ಆಯ್ಕೆಯಾದರು. ನೂತನ ಪದಾಧಿಕಾರಿಗಳನ್ನು ಮಾಲಾರೆ​‍್ಣ ಮಾಡಿ ಗೌರವಿಸಲಾಯಿತು.  

ನಿಕಟಪೂರ್ವ ಅಧ್ಯಕ್ಷ ಎಸ್‌.ಎಸ್‌.ಈಶ್ವರ​‍್ಪಗೋಳ, ನೂತನ ಕಾರ್ಯದರ್ಶಿ ಶಿವಲಿಂಗ ಸಿದ್ನಾಳ, ಸದಸ್ಯ ಚಂದ್ರಶೇಖರ ಮೋರೆ ಮಾತನಾಡಿದರು, ಸದಸ್ಯರಾದ ಮಹೇಶ ಮಣ್ಣಯ್ಯನಮಠ, ಮೀರಾ ತಟಗಾರ, ಹನೀಫ್ ಚಿಕ್ಕೋಡಿ ಇತರರು ಇದ್ದರು, ನಿಕಟಪೂರ್ವ ಕಾರ್ಯದರ್ಶಿ ನಾರನಗೌಡ ಉತ್ತಂಗಿ ಸ್ವಾಗತಿಸಿ, ವಂದಿಸಿದರು. 


ಸುದ್ದಿ ಓದಿ