ಮಹಲಿಂಗಪುರ

ದೇಶದ ಆರ್ಥಿಕ ಬೆಳವಣಿಗೆಗೆ ಕಾರ್ಮಿಕರೇ ಬೆನ್ನೆಲುಬು: ಸುನೀಲ ಕಡಪಟ್ಟಿ

ದೇಶದ ಆರ್ಥಿಕ ಬೆಳವಣಿಗೆಗೆ ಕಾರ್ಮಿಕರೇ ಬೆನ್ನೆಲುಬು: ಸುನೀಲ ಕಡಪಟ್ಟಿ

ಮಹಾಲಿಂಗಪುರ 02: ಇಂದು ಜಗತ್ತು ನಿಂತಿರುವುದೇ ಕಾರ್ಮಿಕ ಅನ್ನುವ ಬೃಹತ್ ಶಕ್ತಿ ಮೇಲೆ ಯಾವುದೇ ಒಂದು ದೇಶದ ಭವಿಷ್ಯ ನಿಂತಿರುವುದೇ ಆ ದೇಶದ ದುಡಿಯುವ ಕೈಗಳ ಮೇಲೆ ಯಾವ ದೇಶ ದುಡಿಯುವ ಕೈಗಳಿಗೆ ನಿರಂತರವಾಗಿ ಕೆಲಸ ನೀಡುತ್ತದೆಯೋ ಆ ದೇಶದ ಆರ್ಥಿಕತೆ ಸದೃಢವಾಗಿರುತ್ತದೆ. ಕಾರ್ಮಿಕರೇ ಆ ದೇಶದ ಆರ್ಥಿಕತೆಯ ಬೆನ್ನೆಲುಬು ಆಗಿರುತ್ತಾರೆ ಎಂದು ಕನ್ನಡಪ್ರಭ ಸುವರ್ಣ ನ್ಯೂಸನ ಎಮೀನೇಷನ ಆವಾರ್ಡ ವಿಜೇತ ಇಂಜಿನಿಯರ್ ಸುನೀಲ ಕಡಪಟ್ಟಿ ಹೇಳಿದರು. 

ಸ್ಥಳೀಯ ಗಣೇಶ ನಗರದ ಹತ್ತಿರ ಇರುವ ಕಡಪಟ್ಟಿ ಇನ್ಪರಾ ಪ್ರೈವೇಟ್ ಲಿಮಿಟೆಡ್  ಆಯೋಜಿಸಿದ  ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕಾರ್ಮಿಕ ವರ್ಗದ ಕೊಡುಗೆಯನ್ನು ಸ್ಮರಿಸಲು ಮತ್ತು ತೀವ್ರ ಮತ್ತು ಅಸುರಕ್ಷಿತ ಪರಿಸರದಲ್ಲಿ ಕೆಲಸ ಮಾಡುವವರ ಕಷ್ಟಗಳ ಹೋರಾಡಲು ಪ್ರಪಂಚದಾದ್ಯಂತ ಈ ದಿನವನ್ನು ಆಚರಿಸಲಾಗುತ್ತದೆ. ಶ್ರಮಜೀವಿಗಳ ಕೆಲಸವನ್ನು ಗೌರವಿಸುವ ಹಾಗೂ ಅವರ ಕಷ್ಟಗಳನ್ನು ಸ್ಮರಿಸುವ ಸಲುವಾಗಿ ಮೇ 1ರಂದು ಜಾಗತಿಕವಾಗಿ 'ಅಂತಾರಾಷ್ಟ್ರೀಯ ಕಾರ್ಮಿಕರ ದಿನ'ವನ್ನಾಗಿ ಆಚರಿಸಲಾಗುತ್ತದೆ. ಇದನ್ನು ಮೇ ಡೇ, ಲೇಬರ್ ಡೇ ಹಾಗೂ ವರ್ಕರ್ಸ್‌ ಡೇ ಎಂತಲೂ ಕರೆಯಲಾಗುತ್ತದೆ,ಈ ಆಚರಣೆ ಶುರುವಾಗಿದ್ದು 1886 ರಲ್ಲಿ ಅಮೆರಿಕದಲ್ಲಿ ಮೊದಲ ಬಾರಿಗೆ ಕಾರ್ಮಿಕರ ದಿನ ಆಚರಿಸಲಾಯಿತು. ವಿಶ್ವದ ನಾನಾ ಭಾಗಗಳಲ್ಲಿ ಕಾರ್ಮಿಕರ ದಿನಾಚರಣೆಯನ್ನು ಆಚರಿಸುವ ಮೂಲಕ ಶ್ರಮಜೀವಿಗಳಿಗೆ ಕೃತಜ್ಞತೆ ಸಲ್ಲಿಸಲಾಗುತ್ತದೆ ಎಂದರು.  

ಪ್ರಸ್ತಾವಿಕವಾಗಿ ಮಾತನಾಡಿದ ಕಡಪಟ್ಟಿ ಗ್ರೂಪ್ ಸದಸ್ಯರಾದ ಇಂಜಿನಿಯರ್  ಜೇಟ್ಟೆಪ್ಪ ಜಕ್ಕಣ್ಣವರ ದೇಶದಲ್ಲಿ ಮೊದಲ ಕಾರ್ಮಿಕ ದಿನವನ್ನು ಮೇ 1, 1923 ರಂದು ಮದ್ರಾಸಿನಲ್ಲಿ ಆಚರಿಸಲಾಯಿತು. ಇದನ್ನು ಕಾಮ್ರೇಡ್ ಸಿಂಗರವೇಲರ್ ನೇತೃತ್ವದ ಲೇಬರ್ ಕಿಸಾನ್ ಪಾರ್ಟಿ ಆಫ್ ಹಿಂದೂಸ್ತಾನ್ ಆರಂಭಿಸಿತ್ತು. ಅಂದಿನಿಂದ ಈವರೆಗೆ ಭಾರತದಲ್ಲಿ ಕಾರ್ಮಿಕರ ದಿನವನ್ನು ಆಚರಿಸಲಾಗುತ್ತಿದೆ ಮತ್ತು ರಾಷ್ಟ್ರೀಯ ರಜೆ ಘೋಷಿಸಲಾಗಿದೆ. ಇದು 141ನೇ ವರ್ಷದ ಅಂತಾರಾಷ್ಟ್ರೀಯ ಕಾರ್ಮಿಕರ ದಿನವಾಗಿದೆ.ಭಾರತದ ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರುಗಳಲ್ಲಿ ಕಾರ್ಮಿಕ ದಿನವನ್ನು ಆಚರಿಸಲಾಗುತ್ತದೆ ಎಂದರು.  

 ಕಡಪಟ್ಟಿ ಇನ್ಫ್ರಾ ಪ್ರೈವೇಟ್ ಲಿಮಿಟೆಡ್ ಡೈರೆಕ್ಟರ ಅರ್ಚನಾ ಕಡಪಟ್ಟಿ ಮಾತನಾಡಿ  ಅಮೆರಿಕದ ಕಾರ್ಮಿಕರು, ಕಠೋರ ಕಾರ್ಮಿಕ ನಿಯಮ, ಕಾರ್ಮಿಕರ ಹಕ್ಕುಗಳ ಉಲ್ಲಂಘನೆ ಮತ್ತು ಭಯಾನಕ ಕೆಲಸದ ವೇಳೆಯ ವಿರುದ್ಧ ಪ್ರತಿಭಟನೆ ಆರಂಭಿಸಿದರು. ದಿನಕ್ಕೆ 8 ಗಂಟೆ ಕೆಲಸ ನಿಗದಿಗೊಳಿಸಬೇಕೆಂಬ ಈ ಚಳವಳಿ 1860ರಿಂದ ಆರಂಭವಾಯಿತು. ಷಿಕಾಗೋ ನಗರ ಸಾವಿರಾರು ಕಾರ್ಮಿಕ ಸಂಘಟನೆಗಳ ಕೇಂದ್ರವಾಗಿ ಮಾರ​‍್ಪಟಟಿತು. 1886 ಮೇ 1 ಕಾರ್ಮಿಕ ಹೋರಾಟದ ಇತಿಹಾಸದಲ್ಲಿ ಒಂದು ಮಹತ್ವದ ಘಟ್ಟ. ಲಕ್ಷಾಂತರ ಮಂದಿ ಕಾರ್ಮಿಕರು 8 ಗಂಟೆಗಳ ಕೆಲಸದ ನಿಗದಿಗೆ ಪ್ರತಿಭಟನೆ ಪ್ರಾರಂಭಿಸಿದ್ದರು. ಈ ಹೋರಾಟದಲ್ಲಿ ಎಷ್ಟೊ? ಕಾರ್ಮಿಕರು ಪ್ರಾಣ ತ್ಯಾಗ ಮಾಡಬೇಕಾಯಿತು. ಹೀಗಾಗಿ 1916 ರವರೆಗೂ ಅಮೆರಿಕ 8 ಗಂಟೆಗಳ ಕೆಲಸ ಸಮಯವನ್ನು ನಿಗದಿಗೊಳಿಸಿತು. ಕಾರ್ಮಿಕ ಹೋರಾಟಕ್ಕೆ ಸಿಕ್ಕ ಯಶಸ್ಸಿನ ನೆನಪಿಗಾಗಿ ಹಾಗೂ ಮೃತ ಕಾರ್ಮಿಕರ ಗೌರವಾರ್ಥವಾಗಿ ಮೇ 1 ರಂದು ಕಾರ್ಮಿಕರ ದಿನವಾಗಿ ಆಚರಿಸಲಾಗುತ್ತಿದೆ ಎಂದರು.   

ನಂತರ ಮಾತನಾಡಿದ ಕಡಪಟ್ಟಿ ಗ್ರೂಪ್ ನಿರ್ದೇಶಕರಾದ ನಕಾತಿ ಕಠಿಣ ಪರಿಶ್ರಮ ನಿಮ್ಮನ್ನು ಎಂದಿಗೂ ಸೋಲುವುದಕ್ಕೆ ಬಿಡುವುದಿಲ್ಲ.ಕಠಿಣ ಪರಿಶ್ರಮ ಮತ್ತು ಸಮರಾ​‍್ಣ ಭಾವದಿಂದ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಗೌರವ ಸಲ್ಲಿಸುವ ದಿನ ಇದಾಗಿದೆ.ಒಬ್ಬ ಕಾರ್ಮಿಕ ಪ್ರತಿ ರಾಷ್ಟ್ರಕ್ಕೂ ದೊಡ್ಡ ಆಸ್ತಿ ಮತ್ತು ಅದ್ಭುತಗಳ ನಿರ್ಮಾತೃ.ದುಡಿಮೆ ಮನುಷ್ಯನ ಘನತೆ ಮತ್ತು ಸೃಜನಶೀಲತೆಯನ್ನು ವ್ಯಕ್ತಪಡಿಸುವ ಏಣಿ. ಜೀವನದ ಕಠಿಣ ಸವಾಲುಗಳನ್ನು ಮೆಟ್ಟಿ ನಿಂತು ಶ್ರಮದಲ್ಲಿಯೇ ಬದುಕಿನ ಖುಷಿ ಕಾಣುವ ಎಲ್ಲ ಕಾರ್ಮಿಕರಿಗೂ ಮಾಲೀಕರಿಗೂ ಒಳ್ಳೆಯದಾಗಬೇಕಾದರೆ ಒಂದೇ ಕುಟುಂಬವಾಗಿ ಕೆಲಸ ಮಾಡಿದರೆ ಪ್ರತಿಯೊಂದು ಕೆಲಸವೂ ಯಶಸ್ಸು ಗಳಿಸುತ್ತದೆ ಎಂದರು. 

ಇದೆ ಸಂಸ್ಥೆಯಲ್ಲಿ ಕಳೆದ ಇಪ್ಪತ್ತು- ಇಪ್ಪತ್ತೈದು ವರ್ಷದಿಂದ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಿರುವ ತಮ್ಮ ಮೆಚ್ಚಿನ ಕಾರ್ಮಿಕರನ್ನು ಕಡಪಟ್ಟಿ ಸಂಸ್ಥೆಯಿಂದ ಸನ್ಮಾನಿಸಿ ಗೌರವಿಸಲಾಯಿತು.  

ಭಾಷಾ ನದಾಫ, ಮಹಾಂತೇಶ ಬಿರಾದಾರ, ಕಿರಣ ಗಾಡಿ ವಡ್ಡರ, ಮಲ್ಲಿಕಾರ್ಜುನ ನಧಾಫ, ಬಸವರಾಜ ಲಕ್ಕೋಜಿ, ಪ್ರಕಾಶ ಉಳ್ಳಾಗಡ್ಡಿ, ಗುರು ಚಿಂದಿ, ಗುರು ಕಚ್ಚಾಪುರ, ಫೀರು ಪಾತ್ರೋಟ, ಅಭಿಷೇಕ ಮುರುಗುಂಡಿ, ಸಾಗರ ಜಮಖಂಡಿ, ಪ್ರಭು ಶಿವಣಗಿ, ಪ್ರಶಾಂತ ರೂಗಿ, ಚೇತನ ಬಾಗೋಜಿ, ಪ್ರವೀಜ ಯಕ್ಷಂಬಿ, ಗುರುನಾಥ ಗುರುಸಿದ್ದನ್ನವರ, ಸಂದೇಶ ತುಪ್ಪದ, ರಾಖೇಶ ಅಗಸಿಮನಿ, ಸಿದ್ರಾಮೇಶ ಹನಗಂಡಿ, ಮತ್ತು ಚೇತನ ಹಿರೇಮಠ, ಹನಮಂತ ಪೂಜಾರಿ, ಪ್ರತೀಕ್ಷಾ ಪಾಟೀಲ, ಗೀತಾ ಬಂಡಿವಡ್ಡರ, ಭೂವನಾ ಮುರಗೋಡ, ಲಕ್ಷ್ಮೀ ಸತ್ಯಭಾಂವಿ, ಅಮೃತಾ ಬಾಣಕಾರ, ಪೂಜಾ ನೇಸೂರ, ಬಸವರಾಜ ನೇಸೂರ, ವಿನಾಯಕ ಗೌಂಡಿ ಸೇರಿದಂತೆ ಹಲವರು ಇದ್ದರು.  

ಕಾರ್ಯಕ್ರಮದಲ್ಲಿ ನೂರಾರು ಇಂಜಿನಿಯರಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರಗು ಬಂದಿತು. ಕಾರ್ಯಕ್ರಮವನ್ನು ಚೇತನ ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ