ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಿ : ಸುವರ್ಣಾ ಆಸಂಗಿ
ಮಹಾಲಿಂಗಪುರ 15: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸದಸ್ಯರಾಗಿ ಉಳಿತಾಯ ಗುಂಪು ರಚಿಸಿಕೊಂಡಿರುವ ಸಂಘದ ಸದಸ್ಯೆಯರು ಸಂಸ್ಥೆಯವರು ನೀಡುವ ಕಡಿಮೆ ದರದ ಸಾಲವನ್ನು ಪಡೆದುಕೊಂಡು ಸ್ವದ್ಯೋಗ ಮಾಡುವ ಮೂಲಕ ಆರ್ಥಿಕ ಸಬಲತೆ ಸಾಧಿಸಬೇಕು ಎಂದು ತೇರದಾಳ ಮತಕ್ಷೇತ್ರದ ಬಿಜೆಪಿ ಮಹಿಳಾ ಮುಖಂಡರಾದ ಸುವರ್ಣಾ ಆಸಂಗಿ ಹೇಳಿದರು.
ಪಟ್ಟಣದ ಲಕ್ಷೀನಗರ ಕೆಂಗೇರಿಮಡ್ಡಿಯ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಧರ್ಮಸ್ಥಳ ಸಂಸ್ಥೆಯ ರನ್ನಬೆಳಗಲಿ ವಲಯದ ಶ್ರೀನಿಧಿ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯು ಬಡವರ, ಕೂಲಿಕಾರ್ಮಿಕರ ಬದುಕಿಗೆ ಆಸರೆಯಾಗಿದೆ. ಮಹಿಳೆಯರು ಸಂಸ್ಥೆಯಿಂದ ಪಡೆದ ಸಾಲವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಧರ್ಮಸ್ಥಳ ಸಂಸ್ಥೆಯ ರನ್ನಬೆಳಗಲಿ ವಲಯ ಮೇಲ್ವಿಚಾರಕ ಎಚ್.ಲೋಕೇಶ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಶ್ರೀನಿಧಿ ಜ್ಞಾನವಿಕಾಸ ಕೇಂದ್ರದ ಬೆಳವಣಿಗೆಯ ಮಾಹಿತಿ ನೀಡಿದರು.
ನಂತರ ಶ್ರೀನಿಧಿ ಜ್ಞಾನವಿಕಾಸ ಕೇಂದ್ರದ ಅಡಿಯಲ್ಲಿ ಬರುವ ಐದು ಮಹಿಳಾ ಸಂಘಗಳ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಮುಧೋಳ ತಾಲೂಕಾ ಜ್ಞಾನ ವಿಕಾಸ ಕಾರ್ಯಕ್ರಮದ ಆಯೋಜನಿ ಸುವರ್ಣಾ, ಸೇವಾ ಪ್ರತಿನಿಧಿ ಅನ್ನಪೂರ್ಣ ಧಡೂತಿ, ರೇಣುಕಾ, ಆಶಾ ಪೆಂಡಾರಿ, ಮಹಿಳಾ ಸಂಘಗಳ ಸದಸ್ಯರಾದ ಜಯಶ್ರೀ ಮೋರೆ, ಗೀತಾ ಮುಂಡಗನೂರ, ಸುಜಾತಾ ಹೂಗಾರ, ಕಸ್ತೂರಿ ಕೋಲಾರ, ಕಲ್ಲವ್ವ ಲೋಕನ್ನವರ, ಬೌರವ್ವ ಹೂಗಾರ, ಲತಾ ಬುರುಡ, ಶೈನಾಜ, ಸಾವಿತ್ರಿ ತೆಂಗಿನಕಾಯಿ, ಸರೋಜಿನಿ ಆರಿ, ಅನ್ನಪೂರ್ಣ ಚಿಮ್ಮಡ, ಸಿದ್ದವ್ವ ಕಿಡದಾಳ ಸೇರಿದಂತೆ ಹಲವರು ಇದ್ದರು.